ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ಬಿಎಸ್-3 ಎಂಜಿನ್‌ಗಳ ಮೇಲೆ ನಿಷೇಧ ಹೇರಲಾಗಿದ್ದು, ಕೃಷಿ ಯಂತ್ರೋಪಕರಣಗಳ ಮೇಲೆ ಹೊಸ ಕಾಯ್ದೆ ಅನ್ವಯವಾಗುವುದಿಲ್ಲ.

By Praveen

ಏಪ್ರಿಲ್ 1ರಿಂದ ಅನ್ವಯವಾಗುವಂತೆ ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ಬಿಎಸ್-3 ಎಂಜಿನ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಕೇವಲ ಬಿಎಸ್-4 ಎಂಜಿನ್‌ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಈ ನಡುವೆ ವಾಣಿಜ್ಯ ಹಾಗೂ ಕೃಷಿ ಆಧರಿತ ವಾಹನಗಳ ಮೇಲೂ ಹೊಸ ಕಾಯ್ದೆ ಜಾರಿಗೊಳಿಸಲಾಗಿತ್ತು.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಆದ್ರೆ ಹೊಸ ಕಾಯ್ದೆ ಅನುಷ್ಠಾನದ ವೇಳೆ ಕೃಷಿ ಯಂತ್ರೋಪಕರಣಗಳ ಮೇಲೂ ಜಾರಿ ಮಾಡಲಾಗಿದ್ದ ಬಿಎಸ್-3 ನಿಷೇಧವನ್ನು ಇದೀಗ ತೆರವುಗೊಳಿಸಲಾಗಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಇನ್ನು ಆಧುನಿಕರಣಗೊಳ್ಳುತ್ತಿರುವ ಭಾರತೀಯ ಕೃಷಿ ವಲಯದಲ್ಲಿ ಸಂಪ್ರಾದಾಯಿಕ ಪದ್ದತಿಗಿಂತ ಯಂತ್ರ ಆಧರಿತ ಕೃಷಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಏಕಾಏಕಿ ಬಿಎಸ್-3 ಎಂಜಿನ್ ನಿಷೇಧ ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಈ ಬಗ್ಗೆ ಕೃಷಿ ಯಂತ್ರ ಉತ್ಪಾದಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಕೃಷಿ ಯಂತ್ರೋಪಕರಣಗಳ ಮೇಲೆ ನಿರ್ಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ನ್ಯಾಯಮೂರ್ತಿ ಎಂ.ಬಿ.ಲೋಕುರ್ ಅವರಿದ್ದ ಪೀಠದಿಂದ ಈ ಮಹತ್ವದ ಆದೇಶವನ್ನು ನೀಡಲಾಗಿದ್ದು, ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಹೊಸ ಕಾಯ್ದೆ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಸುಪ್ರೀಂಕೋರ್ಟ್ ಹೊಸ ನಿರ್ದೇಶನದಂತೆ ಸದ್ಯಕ್ಕೆ ಉತ್ಪಾದಿತವಾಗಿರುವ ಬಿಎಸ್-3 ಎಂಜಿನ್‌ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಖರೀದಿ ಮುಂದುವರಿಯಲಿದ್ದು, ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದು.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಇದರ ಜೊತೆಗೆ ಬಿಎಸ್-3 ಎಂಜಿನ್ ನಿಷೇಧ ಕುರಿತಂತೆ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆದ್ರೆ ಕೃಷಿ ಯಂತ್ರೋಪಕರಣಗಳ ಹೊರತು ವಾಣಿಜ್ಯ ಉದ್ದೇಶಿತ ವಾಹನಗಳ ಮೇಲಿನ ನಿಷೇಧ ಹಿಂಪಡೆಯುವುದು ಅಸಾಧ್ಯವೆಂದಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಸುಪ್ರೀಂಕೋರ್ಟ್ ಹೊಸ ಆದೇಶದಂತೆ ಟ್ರ್ಯಾಕ್ಟರ್,ಪವರ್ ಟಿಲ್ಲರ್, ರೋಟೋವೇಟರ್, ಕಲ್ಟೀವೇಟರ್, ಬಿತ್ತನೆ ಯಂತ್ರಗಳು ಮತ್ತು ಜೆಸಿಬಿ ಮೇಲೆ ಬಿಎಸ್-3 ನಿಷೇಧ ಅನ್ವಯವಾಗುವುದಿಲ್ಲ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಬಂದ್ ಆಗಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಈ ಮಧ್ಯೆ ವಾಹನ ಉತ್ಪಾದಕರಿಗೆ ಖಡಕ್ ವಾರ್ನ್ ಮಾಡಿರುವ ಸುಪ್ರೀಂಕೋರ್ಟ್, ಬಿಎಸ್-3 ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಆದೇಶ ಹೊರಡಿಸಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಈಗಾಗಲೇ ಕೆಲವು ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ರೂಲ್ಸ್ ಅಳವಡಿಸಿಕೊಳ್ಳುವ ಮೂಲಕ ಬಿಎಸ್-IV ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿವೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಆದರೂ ಈ ಹಿಂದೆ ಸ್ಟಾಕ್ ಮಾಡಿಕೊಂಡಿರುವ ಕೆಲವು ಉತ್ಪಾದಕರು ಗ್ರಾಹಕರಿಗೆ ಆಫರ್ ನೀಡುವ ಮೂಲಕ ಬಿಎಸ್-3 ಎಂಜಿನ್ ವಾಹನಗಳನ್ನೇ ಮಾರಾಟ ಮಾಡುತ್ತಿವೆ. ಆದ್ರೆ ಇದು ಕೃಷಿ ಯಂತ್ರೋಪಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಸುಪ್ರೀಂಕೋರ್ಟ್‌ನ ಹೊಸ ಕಾಯ್ದೆಯಿಂದಾಗಿ ಸುಮಾರು 20 ಸಾವಿರ ಕಾರುಗಳು, 7 ಲಕ್ಷ 50 ಸಾವಿರ ಬೈಕ್‌ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಸದ್ಯದಲ್ಲೇ ಮೂಲೆಗುಂಪಾಗಲಿವೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಸುಪ್ರೀಂಕೋರ್ಟ್ ಆದೇಶದಂತೆ ಇನ್ಮುಂದೆ ಬಿಎಸ್-IV ಎಂಜಿನ್ ಮತ್ತು AHO(ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಇಲ್ಲದ ಯಾವುದೇ ವಾಹನಗಳು ಮಾರಾಟ ಮತ್ತು ಉತ್ಪಾದನೆ ಎಲ್ಲವೂ ಬಂದ್ ಆಗಲಿವೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಇದಲ್ಲದೇ ಬಿಎಸ್-3 ವಾಹನಗಳಿಗೆ ಯಾವುದೇ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಈಗಾಗಲೇ ವಿವಿಧ ದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಗೆ ತರುತ್ತಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿರುವ ಲಕ್ಷಾಂತರ ಬಿಎಸ್-3 ಎಂಜಿನ್‌ ವಾಹನಗಳು ಮೂಲೆಗುಂಪಾಗಿರುವುದು ಮಾತ್ರ ಗ್ಯಾರೆಂಟಿ.

ಕೃಷಿ ಯಂತ್ರೋಪಕರಣಗಳ ಮೇಲೆ ಅನ್ವಯವಾಗುವುದಿಲ್ಲ ಸುಪ್ರೀಂಕೋರ್ಟ್ ಹೊಸ ಕಾಯ್ದೆ

ಆದ್ರೆ ಈ ಮಧ್ಯೆ ಕೃಷಿ ವಲಯಕ್ಕೆ ವಿಶೇಷ ಆದ್ಯತೆ ನೀಡಿರುವ ಸುಪ್ರೀಂಕೋರ್ಟ್, ಕೃಷಿ ಯಂತ್ರೋಪಕರಣಗಳಿಗೆ ಹೊಸ ಕಾಯ್ದೆ ಅನ್ವಯ ಮಾಡದಂತೆ ನಿರ್ದೇಶನ ನೀಡಿರುವುದು ಸ್ವಾಗತರ್ಹ.

Most Read Articles

Kannada
English summary
BS-3 ban won’t apply on farm, construction vehicles. It's cleared by SC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X