ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಗೋ-ಕಾರ್ಟಿಂಗ್ ಒಂದು ರೇಸಿಂಗ್ ಕ್ರೀಡೆಯಾಗಿದ್ದು, ಇದನ್ನು ವಿಶ್ವದಾದ್ಯಂತ ಆಯೋಜಿಸಲಾಗುತ್ತದೆ. ಒಬ್ಬ ವ್ಯಕ್ತಿ ಮಾತ್ರ ಕೂರಬಲ್ಲ ಸಣ್ಣ ಕಾರುಗಳೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಚಾಲನಾ ಪರವಾನಗಿ ಅಗತ್ಯವಿಲ್ಲದ ಕಾರಣಕ್ಕೆ 18 ವರ್ಷ ವಯಸ್ಸಿನೊಳಗಿನವರು ಸಹ ಈ ಕ್ರೀಡೆಯಲ್ಲಿ ಭಾಗವಹಿಸಬಹುದು. ಹೀಗಾಗಿ ಈ ಕ್ರೀಡೆಯನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸಲಾಗುತ್ತದೆ.

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಈ ಕ್ರೀಡೆಯಲ್ಲಿ ಒಂದು ವಾಹನವು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದರೆ ದೊಡ್ಡ ಅಪಘಾತ ಸಂಭವಿಸುವುದಿಲ್ಲ. ಆದರೆ ಚಾಲಕನು ಚಾಲನೆ ವೇಳೆಯಲ್ಲಿ ಏನಾದರೂ ಎಡವಟ್ಟು ಮಾಡಿದರೆ ಅಪಾಯಕ್ಕೆ ಸಿಲುಕುವುದು ಖಚಿತ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸೆಲ್ಫಿ ತೆಗೆಯಲು ಪ್ರಯತ್ನಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಕ್ರೀಡೆಯನ್ನು ಆಯೋಜಿಸಿದ್ದವರ ಪ್ರಕಾರ ಆಕೆಯ ಕೂದಲು ವಾಹನದ ವ್ಹೀಲ್ ಗೆ ಸಿಕ್ಕಿಹಾಕಿಕೊಂಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ ಅಕ್ಟೋಬರ್ 7ರಂದು ಮೂರನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ಶ್ರೀವರ್ಣಿನಿ ತನ್ನ ಕುಟುಂಬದೊಂದಿಗೆ ಮೀರ್‌ಪೇಟ್‌ನ ಖುರ್ರಾಮ್ ಕೊಲ್ಲಿಯಲ್ಲಿ ಗೋ-ಕಾರ್ಟಿಂಗ್ ಟ್ರಕ್‌ಗೆ ಹೋಗಿದ್ದಳು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಚಾಲನೆ ವೇಳೆ ಹೆಲ್ಮೆಟ್ ತೆಗೆದಾಗ ಆಕೆಯ ಕೂದಲು ಚಾಲನೆಯಲ್ಲಿದ್ದ ವಾಹನದ ವ್ಹೀಲ್ ಗೆ ಸಿಲುಕಿಕೊಂಡಿದೆ. ಆಕೆಯ ಕೂದಲು ವ್ಹೀಲ್ ಶಾಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ವ್ಹೀಲ್ ಶಾಫ್ಟ್ ಟಯರ್‌ ಹಾಗೂ ಎಂಜಿನ್ ಅನ್ನು ಸೀಟಿನ ಹಿಂಭಾಗಕ್ಕೆ ಕನೆಕ್ಟ್ ಮಾಡುತ್ತದೆ.

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಆಕೆಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಶ್ರೀವರ್ಣಿನಿ ವಾಹನದಿಂದ ಕೆಳಗೆ ಬಿದ್ದಿಲ್ಲ. ಆಕಸ್ಮಿಕವಾಗಿ ಆಕೆಯ ಕೂದಲು ವಾಹನದ ವ್ಹೀಲ್ ಗೆ ಸಿಲುಕಿಕೊಂಡಿದ್ದರಿಂದ ಆಕೆಯ ತಲೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಸ್ಪರ್ಧೆಯನ್ನು ಆಯೋಜಿಸಿದ್ದ ಗೋ-ಕಾರ್ಟಿಂಗ್ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಮಿರ್ಪಾಡ್ ನಗರದ ಸಬ್ ಇನ್ಸ್‌ಪೆಕ್ಟರ್ ಅನಂತ ರಾಮುಲು ತಿಳಿಸಿದ್ದಾರೆ.

ಗೋ-ಕಾರ್ಟಿಂಗ್ ಸ್ಪರ್ಧೆಯಲ್ಲಿ ಅವಘಡ, ಸೆಲ್ಫಿ ಹುಚ್ಚಿಗೆ ಬಲಿಯಾದ ಬಿ.ಟೆಕ್ ವಿದ್ಯಾರ್ಥಿನಿ

ಈ ರೀತಿಯ ದುರ್ಘಟನೆಗಳ ಬಗ್ಗೆ ಗೋ-ಕಾರ್ಟಿಂಗ್ ಆಡಳಿತ ಮಂಡಳಿ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲವೆಂದು ಶ್ರೀವರ್ಣಿನಿ ಅವರ ಕುಟುಂಬವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಕಾರಣಕ್ಕೆ ಆಡಳಿತ ಮಂಡಳಿ ವಿರುದ್ಧ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles
 
Kannada
English summary
B Tech student dies while taking selfie during go karting. Read in Kannada.
Story first published: Saturday, October 10, 2020, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X