ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಫ್ರಾನ್ಸ್ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ ಬುಗಾಟಿ, ಹೊಸ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಸೆರಾಮಿಕ್ ಎಡಿಷನ್ ಒನ್ ಹೆಸರಿನಲ್ಲಿ ಸ್ಮಾರ್ಟ್ ವಾಚ್ ಸರಣಿಯನ್ನು ಬಿಡುಗಡೆಗೊಳಿಸಿದೆ.

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಸರಣಿಯಲ್ಲಿ ಬರ್ ಸ್ಪೋರ್ಟ್, ಡಿವೊ ಹಾಗೂ ಲೆ ನೊಯಿರೊ ವಾಚ್‌ಗಳು ಸೇರಿವೆ. ಈ ಸ್ಮಾರ್ಟ್ ವಾಚ್‌ಗಳ ಆರಂಭಿಕ ಬೆಲೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.80,000ಗಳಾಗಿದೆ. ಬುಗಾಟಿ ವಿಶ್ವದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ.

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಬುಗಾಟಿ ಕಂಪನಿಯು ಈ ಹಿಂದೆ ಹಲವು ಆಕರ್ಷಕ ಕಾರುಗಳನ್ನು ಉತ್ಪಾದಿಸಿದೆ. ಈಗಲೂ ಉತ್ಪಾದಿಸುತ್ತಿದೆ. ಬುಗಾಟಿ ಕಂಪನಿಯು ಸದ್ಯಕ್ಕೆ ತನ್ನ ಜನಪ್ರಿಯ ಕಾರುಗಳ ಹೊಸ ಮಾದರಿ ಹಾಗೂ ವಿಶೇಷ ಆವೃತ್ತಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಬುಗಾಟಿ ಕಂಪನಿಯು ವಿಶ್ವದ ಅತಿ ವೇಗದ ಕಾರುಗಳನ್ನು ಮಾರಾಟ ಮಾಡುತ್ತದೆ. ಪರ್ಫಾಮೆನ್ಸ್'ನಿಂದಾಗಿ ಬುಗಾಟಿ ಕಾರುಗಳು ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿವೆ. ಬುಗಾಟಿ ವೆರಾನ್ ಕಾರಿನ ಬೆಲೆ ರೂ.13.84 ಕೋಟಿಗಳಾಗಿದೆ.

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಬುಗಾಟಿ ಚಿರೋನ್ ಕಾರಿನ ಬೆಲೆ ರೂ.21.13 ಕೋಟಿಗಳಾಗಿದೆ. ಇನ್ನು ಬುಗಾಟಿ ಡಿವೊ ಕಾರಿನ ಬೆಲೆ ರೂ.39.35 ಕೋಟಿಗಳಾಗಿದೆ. ಬುಗಾಟಿ ಲಾ ವಾಯೇಜರ್ ನಾಯ್ರ್ ಕಾರಿನ ಬೆಲೆ ರೂ.87.46 ಕೋಟಿಗಳಾಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಬುಗಾಟಿ ಲಾ ವಾಯೇಜರ್ ನಾಯ್ರ್ ವಿಶ್ವದ ಅತಿ ದುಬಾರಿ ಬೆಲೆಯ ಕಾರುಗಳಲ್ಲಿ ಒಂದಾಗಿದೆ. ಇಷ್ಟು ಬೆಲೆ ನೀಡಿ ಬುಗಾಟಿ ಕಾರು ಖರೀದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಬುಗಾಟಿ ಕಾರುಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಬುಗಾಟಿ ಸ್ಮಾರ್ಟ್ ವಾಚ್‌ಗಳನ್ನು ಖರೀದಿಸಬಹುದು.

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಯಾವುದಾದರೂ ಬುಗಾಟಿ ಉತ್ಪನ್ನವನ್ನು ಖರೀದಿಸಲು ಬಯಸುವವರಿಗೆ ಬುಗಾಟಿ ಸ್ಮಾರ್ಟ್ ವಾಚ್‌ಗಳು ಉತ್ತಮ ಆಯ್ಕೆಯಾಗಿವೆ. ಬುಗಾಟಿ ಕಂಪನಿಯು ಈ ವಾಚ್‌ಗಳನ್ನು ಆಸ್ಟ್ರಿಯಾದ ವೀಟಾ ವಾಚಸ್ ಸಹಯೋಗದೊಂದಿಗೆ ತಯಾರಿಸುತ್ತದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಪ್ರತಿಯೊಂದು ಐಷಾರಾಮಿ ಸ್ಮಾರ್ಟ್ ವಾಚ್‌ಗಳನ್ನು ಸಂಪೂರ್ಣವಾಗಿ ಕೈಯಿಂದಲೇ ತಯಾರಿಸಲಾಗಿದೆಯೆಂಬುದು ಗಮನಿಸಬೇಕಾದ ಸಂಗತಿ. ಬುಗಾಟಿ ಕಾರುಗಳು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿವೆ.

ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಆದರೆ ಅವರೆಲ್ಲರಿಗೂ ಬುಗಾಟಿ ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲ. ಈ ಸ್ಮಾರ್ಟ್ ವಾಚ್‌ಗಳು ಯುವಜನರಿಗೆ ಉತ್ತಮ ಆಯ್ಕೆಯಾಗಿದ್ದು, ಬುಗಾಟಿ ಅವರ ನೆಚ್ಚಿನ ಕಾರ್ ಆಗಿದ್ದಲ್ಲಿ ಇವುಗಳನ್ನು ಖರೀದಿಸಬಹುದು.

Most Read Articles

Kannada
English summary
Bugatti company launches smart watches. Read in Kannada.
Story first published: Wednesday, June 2, 2021, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X