Bus Driver: 30 ವರ್ಷಗಳ ಪ್ರಯಾಣಕ್ಕೆ ವಿದಾಯ ಹೇಳಿ ತಬ್ಬಿಕೊಂಡು ಕಣ್ಣೀರಿಟ್ಟ ಬಸ್ ಚಾಲಕ
30 ವರ್ಷಗಳಿಂದ ನಗುನಗುತ್ತಲೇ ಸರ್ಕಾರಿ ಬಸ್ ಜೊತೆಗೆ ಪ್ರಯಾಣ ಸಾಗಿಸಿದ ಬಸ್ ಚಾಲಕ bus driver ನಿವೃತ್ತಿ ಪಡೆದ ದಿನದಂದು ಬಸ್ ಅನ್ನು ತಬ್ಬಿಕೊಂಡು ಗಳಗಳನೆ ಅತ್ತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಣ್ಣ ಮಗುವಿನಂತೆ ಬಸ್ ಅನ್ನು ಮುದ್ದಾಡಿದ ರೀತಿ ಎಲ್ಲರನ್ನು ಮರುಗಿಸಿದೆ.
ತಮಿಳುನಾಡು ಸರ್ಕಾರದ ನಾನಾ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ 60 ವರ್ಷ ತುಂಬಿದ ಅನೇಕ ನೌಕರರು ಜೂನ್ 1 ರಂದು (ನಿನ್ನೆ) ನಿವೃತ್ತಿಯಾಗಿದ್ದಾರೆ. ಇದರಲ್ಲಿ ಮಧುರೈ ತಿರುಪರಂಗುನ್ರಂ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಬೈಕಾರದ ಮುತ್ತುಪ್ಪಂಡಿ ಕೂಡ ಒಬ್ಬರು. ಇವರು ಕಳೆದ 30 ವರ್ಷಗಳಿಂದ ಸರ್ಕಾರಿ ಬಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದರು.

ಇದೀಗ ನಿವೃತ್ತಿಯಾಗಿ ದಿನ ಓಡಿಸುತ್ತಿದ್ದ ಬಸ್ ಅನ್ನು ಇನ್ನುಮುಂದೆ ಏರಲಾಗುವುದಿಲ್ಲವೇ ಎಂದು ನೆನೆದು ಭಾವುಕರಾಗಿದ್ದಾರೆ. ಇಷ್ಟು ವರ್ಷ ಸಾರ್ವಜನಿಕರನ್ನು ಏರಿಸಿಕೊಂಡು ಸರ್ಕಾರಿ ಬಸ್ ಓಡಿಸಿದ ಅವರು, ನಿವೃತ್ತಿಯ ದಿನದಂದು ಕೊನೆಯ ಬಾರಿ ಬಸ್‌ಗೆ ನಮಸ್ಕರಿಸಿ ಮುತ್ತಿಕ್ಕಿ ಅಪ್ಪಿಕೊಂಡರು. ಇಷ್ಟು ವರ್ಷಗಳ ಕಾಲ ತನ್ನ ಹೊಟ್ಟೆ ತುಂಬಿದ ಬಸ್ ಅನ್ನು ಮಗನಂತೆ ನೋಡಿರುವುದಾಗಿ ಹೇಳಿದ್ದಾರೆ.
ನಿವೃತ್ತಿ ಕುರಿತು ಮಾತನಾಡಿದ ಅವರು, ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ. ಆದರೆ ಒಮ್ಮೆಲೆ ನನ್ನ ಬಸ್‌ನೊಂದಿಗಿನ ಇಷ್ಟು ವರ್ಷಗಳ ಭಾಂದವ್ಯಕ್ಕೂ ಮುಕ್ತಾಯ ಹೇಳುತ್ತಿರುವುದು ತುಂಬಾ ದುಃಖವಾಗುತ್ತಿದೆ. ನಿವೃತ್ತಿಯಾದರೂ ಸರಿಯೇ ಆಗಾಗ್ಗೆ ಬಂದು ನನ್ನ ಬಸ್ ಅನ್ನು ನೋಡಿಕೊಂಡು ಹೋಗುವೆ ಎಂದು ಹೇಳುತ್ತಾ ತನ್ನ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವ ದೃಶ್ಯಗಳು ಮನಕಲಕುವಂತಿವೆ.

ಇಂತಹ ಘಟನೆಗಳು ಹಲವಾರಿವೆ. ಹಲವರು ಕ್ಯಾಬ್ ಚಾಲಕರು, ಲಾರಿ ಚಾಲಕರು, ಆಟೋ ಚಾಲಕರು ಹೀಗೆ ಹಲವರು ತಮ್ಮ ಡ್ರೈವಿಂಗ್ ಫೀಲ್ಡ್‌ಗೆ ವಿಧಾಯ ಹೇಳುವಾಗ ವಾಹನಗಳನ್ನು ತಬ್ಬಿಕೊಂಡು ಅತ್ತ ಹಲವು ಉದಾಹರನೆಗಳಿವೆ. ವಾಹನಗಳಿಗೆ ಜೀವವಿಲ್ಲದಿರಬಹುದು ಆದ್ರೆ ನಮ್ಮೊಂದಿಗೆ ಪ್ರಿಯ ಮಿತ್ರನಾಗಿ ನಿತ್ಯ ಜೀವನದ ಒಂದು ಭಾಗವಾಗಿರುತ್ತವೆ ಎಂದು ಹಲವರು ಹೇಳಿಕೊಂಡಿದ್ದಾರೆ.
ಅಂಬಾಸಿಡರ್‌ಗೆ ಚಾಲಕನ ಭಾವಪೂರ್ಣ ಬೀಳ್ಕೊಡುಗೆ: ಜನವರಿ 22, 1985 ರಂದು ಮುಂಬೈ ರೈಲ್ವೇ ವಿಭಾಗದಲ್ಲಿ ಅಂಬಾಸಿಡರ್ ಕಾರನ್ನು ವಿವಿಧ ಅಧಿಕಾರಿಗಳಿಗೆ ಸೇವೆ ಮಾಡಲು ತರಲಾಗಿತ್ತು. ಅಂದಿನಿಂದ ಇದು ಬಳಕೆಯಲ್ಲಿದ್ದು ಇತ್ತೀಚೆಗೆ ಸೇವೆ ನಿಲ್ಲಿಸಿದೆ. ಕುತೂಹಲಕಾರಿ ವಿಷಯವೆಂದರೆ ಕಾರಿನೊಂದಿಗೆ ಕಾರಿನ ಚಾಲಕ ಕೂಡ ನಿವೃತ್ತಿ ಪಡೆದಿದ್ದರು. ಅಂಬಾಸಿಡರ್ ಕಾರನ್ನು ಹೂವಿನ ಹಾರಗಳಿಂದ ಅಲಂಕರಿಸಿ ಬೀಳ್ಕೊಟ್ಟರು.
ಸ್ವಾತಂತ್ರ್ಯದ ನಂತರ ಭಾರತದಲ್ಲಿ ವಾಹನ ಯುಗವನ್ನು ಆರಂಭಿಸಿದ 'ಅಂಬಾಸಿಡರ್' ಬಿಎಸ್ 6 ಎಮಿಷನ್ ಮಾನದಂಡಗಳನ್ನು ಅನುಸರಿಸದ ಕಾರಣ ಸ್ಥಗಿತಗೊಂಡಿತು. ಆದರೆ ಹಲವರು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತಿತ್ತು. ಇದೀಗ ಭಾರತದಲ್ಲಿ ವಾಹನ ಸ್ಕ್ರ್ಯಾಪಿಂಗ್ ನಿಯಮಗಳಿಂದಾಗಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಿದ್ದು, ಈ ಅಂಬಾಸಿಡರ್ ಕಾರನ್ನು ರದ್ದುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದರು.
ಇದರಿಂದ ಅಂಬಾಸಿಡರ್ ಚಾಲಕ ತನ್ನ ಜೊತೆಗೆ ಹಲವಾರು ವರ್ಷಗಳು ಪ್ರಯಾಣಿಸಿದ ಅಂಬಾಸಿಡರ್‌ಗೆ ಹೂವಿನ ಹಾರವನ್ನು ಹಾಕಿ ಬೀಳ್ಕೊಡುಗೆ ಕೊಟ್ಟಿದ್ದರು. ಹೀಗೆ ಚಾಲಕರು ತಮ್ಮೊಂದಿಗೆ ಇರುವ ವಾಹನಗಳೆಂದೆರೆ ಏನೋ ತಿಳಿಯದ ಸೋದರ ಭಾಂದವ್ಯವನ್ನು ಹೊಂದಿರುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ, ಹೆಚ್ಚಿನ ಆಟೋ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications