ಸರ್ಕಾರಿ ಬಸ್ ಧ್ವಂಸ... ಆತನ ಆಕ್ರೋಶಕ್ಕೆ ಕಾರಣವೇ ತಿಳಿದಿಲ್ಲ ಅಂಥಾರೆ ಪ್ರಯಾಣಿಕರು!

ನಮ್ಮ ಭಾರತದಲ್ಲಿ ಡ್ರೈವಿಂಗ್ ವೇಳೆ ಸಣ್ಣ ವಿಚಾರಗಳಿಗೂ ಸಹ ಪ್ರಯಾಣಿಕರೊಂದಿಗೆ ಜಗಳವಾಡುವುದು ಸಾಮಾನ್ಯವಾಗಿಬಿಟ್ಟಿದೆ. ಮುಂಬೈನಲ್ಲಿ ಇತ್ತೀಚೆಗೆ ಕಾರು ಮಾಲೀಕನೊಬ್ಬ ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ ಮಿರರ್ ಮತ್ತು ವಿಂಡ್‌ ಶೀಲ್ಡ್‌ಗೆ ಹಾನಿಗೊಳಿಸಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿದುಬಂದಿದೆ. ಶೀಘ್ರದಲ್ಲೇ ವಿಡಿಯೋದಲ್ಲಿನ ವ್ಯಕ್ತಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ವೈರಲ್ ವೀಡಿಯೊದಲ್ಲಿ, ಕಾರು ಮಾಲೀಕ ಬೇಸ್‌ ಬಾಲ್ ಬ್ಯಾಟ್ ನಿಂದ ಬೆದರಿಸಿ ಸರ್ಕಾರಿ ಬೆಸ್ಟ್ ಬಸ್‌ಗೆ ಹೊಡೆಯುವುದನ್ನು ನೋಡಬಹುದು. ಈ ದೃಶ್ಯವನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಬಸ್ ಚಾಲಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

Bus windshield

ವಿಡಿಯೋದಲ್ಲಿ ನಡೆದಿರುವ ಕೃತ್ಯವನ್ನು ವಿವರಿಸುವುದಾದರೆ, ಬೆಸ್ಟ್ ಬಸ್‌ನ ಮುಂದೆ ಹೊಂಡಾ ಬ್ರಿಯೊ ಮಾಲೀಕ ಪದೇ ಪದೇ ಹೆಡ್‌ಲೈಟ್ ಹಾಗೂ ವಿಂಡ್‌ ಶೀಲ್ಡ್‌ಗೆ ಹೊಡೆದಿದ್ದಾನೆ. ಇದೇ ವೇಳೆ ಆತನ ಕಾರು ಬ್ರಿಯೋವನ್ನು ಬಸ್ಸಿನ ಮುಂಭಾಗದಲ್ಲಿ ನಿಲ್ಲಿಸಿರಿವುದನ್ನು ನೋಡಬಹುದು, ತನ್ನ ಕಾರನ್ನು ಪಕ್ಕಕ್ಕೆ ತೆಗೆಯದೆ ಅಡ್ಡಗಟ್ಟಿದ್ದರಿಂದ ಹಿಂಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಈ ವೇಳೆ ಬಸ್‌ ಚಾಲಕ ತನ್ನ ತಾಳ್ಮೆಯನ್ನು ಕಳೆದುಕೊಳ್ಳದೇ ಶಾಂತವಾಗಿ ಕಾರು ಚಾಲಕನ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಯಿಡಿಯುತ್ತಿದ್ದ. ಜೊತೆಗೆ ಪ್ರಯಾಣಿಕರನ್ನು ಪೊಲೀಸರಿಗೆ ಕರೆ ಮಾಡಿ ಎನ್ನುವುದನ್ನು ವಿಡಿಯೋದಲ್ಲಿ ಕೇಳಬಹುದು. ಬಸ್‌ ಚಾಲಕನ ಶಾಂತತೆ ಹಾಗೂ ಯಾರೂ ತಡೆಯದ ಕಾರಣ ಕಾರು ಮಾಲೀಕ ಮನಬಂದಂತೆ ವರ್ತಿಸಿದ್ದಾನೆ. ಕೊನೆಗೆ ಒಬ್ಬ ಯುವಕ ತಡೆದಿದ್ದರಿಂದ ಕಾರು ಹತ್ತಿ ಹೊರಟಿದ್ದಾನೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಬಸ್‌ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಆದ್ರೆ ಕಾರಿನ ಹಿಂಭಾಗವನ್ನು ನೋಡಿದ್ರೆ ಯಾವುದೇ ಹಾನಿಯಾಗಿರುವುದು ಕಾಣುತ್ತಲ್ಲ. ಕಾರು ಮಾಲೀಕ ಕಾರಿನಿಂದ ಹೊರಬಂದು ತುಂಬಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದನ್ನು ನೋಡಿದ್ರೆ ಬೇರೇನೋ ಆಗಿದೆ ಎಂದೆನಿಸುತ್ತಿದೆ. ವಿಡಿಯೋ ಹಂಚಿಕೊಂಡಿರುವ ವ್ಯಕ್ತಿ ಕೂಡ ನಿಖರ ಕಾರಣವನ್ನು ತಿಳಿಸಿಲ್ಲ.

ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯ ಪ್ರಕಾರ ಕಾರು ಮಲೀಕ ಉದ್ದೇಶ ಪೂರ್ವಕವಾಗಿ ಬಸ್ಸಿಗೆ ಹಾನಿ ಮಾಡಿದ್ದಾನೆ ಎಂದು ಟ್ವಿಟ್ಟರ್ ಪೋಸ್ಟ್‌ನಲ್ಲಿ ವಿಡಿಯೋ ಕೆಳಗೆ ಬರೆದುಕೊಂಡಿದ್ದಾನೆ. ಹಾಗಾಗಿ ಆತನ ಆಕ್ರೋಶಕ್ಕೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಅನೀಶ್ ಬ್ಯಾನರ್ಜಿ ಎಂಬಾತನೇ ಈ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

"ಇಂದು ರಾತ್ರಿ ವ್ಯಕ್ತಿಯೊಬ್ಬ ಬೇಸ್‌ಬಾಲ್ ಸ್ಟಿಕ್‌ನಿಂದ ಉದ್ದೇಶಪೂರ್ವಕವಾಗಿ ಬೆಸ್ಟ್ ಬಸ್ ಮೇಲೆ ದಾಳಿ ಮಾಡಿದ್ದಾನೆ. ಅಲ್ಲದೆ ಮುಂಭಾಗದ ಗಾಜು ಮತ್ತು ಪಕ್ಕದ ಕನ್ನಡಿಯನ್ನು ಒಡೆದಿದ್ದಾನೆ. ಈ ಅವ್ಯವಸ್ಥೆಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸಂಖ್ಯೆ MH02CP7747. @MumbaiPolice @CPMumbaiPolice ದಯವಿಟ್ಟು ಕ್ರಮ ಕೈಗೊಳ್ಳಿ." ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ.

ಮುಂಬೈ ಪೊಲೀಸರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಹತ್ತಿರದ ಪೊಲೀಸ್ ಠಾಣೆಯಲ್ಲಿ ಈ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹೇಳಿದ್ದಾರೆ. ಸದ್ಯ ಕಾರು ಮಾಲೀಕನ ಕುರಿತು ತನಿಖೆ ಮುಂದುವರೆದಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಆ ಬಳಿಕವಷ್ಟೇ ಆತನ ಆ ಮಟ್ಟದ ಆಕ್ರೋಶಕ್ಕೆ ಕಾರಣ ಏನೆಂಬುದು ತಿಳಿದುಬರಲಿದೆ.

Article Published On: Tuesday, May 16, 2023, 18:17 [IST]
English summary
Bus windshield mirror vandalized car owner
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+