ಉದ್ಯಮ ದಿಗ್ಗಜರ ಬಳಿಯಿರುವ ಸಾಧಾರಣ ಕಾರುಗಳಿವು..!
ಜನರು ತಾವು ಬೆಳೆದಂತೆಲ್ಲಾ ಪ್ರತಿಯೊಂದು ವಿಷಯಗಳನ್ನು ಅಪ್‌ಗ್ರೇಡ್ ಮಾಡುತ್ತಾರೆ. ಆದರೆ ಶತಕೋಟ್ಯಾಧಿಪತಿಗಳು ಸಾಮಾನ್ಯರಂತೆ ಬದುಕಲು ಬಯಸುತ್ತಾರೆ. ಶತಕೋಟಿ ಆಸ್ತಿಯಿದ್ದರೂ ಸಾಮಾನ್ಯ ಕಾರುಗಳಲ್ಲಿ ಪ್ರಯಾಣಿಸುವ ಉದ್ಯಮಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

1. ಅಜೀಮ್ ಪ್ರೇಮ್‌ಜಿ
ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ವಿಪ್ರೊ ಲಿಮಿಟೆಡ್‌ನ ಅಧ್ಯಕ್ಷರಾದ ಅಜೀಮ್ ಪ್ರೇಮ್‌ಜಿ, ತಮ್ಮ ಸರಳ ವ್ಯಕ್ತಿತ್ವ ಹಾಗೂ ಜನೋಪಕಾರಿ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ದೇಶದ ಐಟಿ ಉದ್ಯಮದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಅಜೀಮ್ ಪ್ರೇಮ್‌ಜಿ ಹಲವಾರು ದುಬಾರಿ ವಾಹನಗಳನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಹಳೆಯ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರಿನಲ್ಲಿಯೇ ಓಡಾಡುತ್ತಾರೆ. ಹಲವಾರು ವರ್ಷಗಳಿಂದ ಈ ಕಾರನ್ನು ಹೊಂದಿರುವ ಅವರು ಹೊಸ ಕಾರ್ ಅನ್ನು ಖರೀದಿಸಿಲ್ಲ.

2. ರತನ್ ಟಾಟಾ
ರತನ್ ಟಾಟಾ ತಮ್ಮ ಜನೋಪಕಾರಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಅನೇಕ ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡಿದ್ದಾರೆ. ರತನ್ ಟಾಟಾ ಫೆರಾರಿ ಕ್ಯಾಲಿಫೋರ್ನಿಯಾ, ಕ್ರಿಸ್ಲರ್ ಹಾಗೂ ಕ್ಯಾಡಿಲಾಕ್‌ನಂತಹ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಮುಂಬೈನಲ್ಲಿ ಅವರು ಹೆಚ್ಚಾಗಿ ಹೋಂಡಾ ಸಿವಿಕ್ ಹಾಗೂ ಟಾಟಾ ನೆಕ್ಸಾನ್ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

3. ಆನಂದ್ ಮಹೀಂದ್ರಾ
ದೇಶದ ಅತಿ ದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಆನಂದ್ ಮಹೀಂದ್ರಾ ಸಹ ಒಬ್ಬರು. ಆನಂದ್ ಮಹೀಂದ್ರಾ ಎಸ್‌ಯುವಿ ಕಾರುಗಳನ್ನು ಇಷ್ಟಪಡುತ್ತಾರೆ. ಅವರು ಮಹೀಂದ್ರಾ ಕಂಪನಿಯ ಟಿಯುವಿ 300 ಕಾರಿನ ಎರಡು ಮಾದರಿಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಅವರು ವಿಶೇಷವಾಗಿ ಮಾರ್ಪಡಿಸಲಾದ ಟಿಯುವಿ ಮಾದರಿಯನ್ನು ಹೊಂದಿದ್ದಾರೆ. ಈ ಕಾರ್ ಅನ್ನು ಗ್ರೇ ಘೋಸ್ಟ್ ಎಂದು ಕರೆಯಲಾಗುತ್ತದೆ.

4. ನಂದನ್ ನಿಲೇಕಣಿ
ಟೊಯೊಟಾ ಇನೊವಾ ಕಾರ್ ಅನ್ನು ಟ್ಯಾಕ್ಸಿ ಕಾರ್ ಎಂದು ಪರಿಗಣಿಸಲಾಗುತ್ತದೆ. ಈ ಕಾರಿನ ಬಲಿಷ್ಠ ರಚನೆ ಹಾಗೂ ಬುಲೆಟ್ ಪ್ರೂಫ್ ಎಂಜಿನ್‌ನಿಂದಾಗಿ, ಈ ಕಾರು ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ನಂದನ್ ನಿಲೇಕಣಿರವರು ರಾಜಕಾರಣಿ, ಅಧಿಕಾರಿ, ಉದ್ಯಮಿ ಹಾಗೂ ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರು ಹೌದು. ಇವರು ಹೆಚ್ಚಾಗಿ ಟೊಯೊಟಾ ಇನೊವಾ ಕಾರಿನಲ್ಲಿ ಓಡಾಡುತ್ತಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

5. ಎನ್.ಆರ್ ನಾರಾಯಣ ಮೂರ್ತಿ
ಎನ್.ಆರ್ ನಾರಾಯಣ ಮೂರ್ತಿ ಇನ್ಫೋಸಿಸ್ ಕಂಪನಿಯ ಸ್ಥಾಪಕರು. ಐಟಿ ಉದ್ಯಮದ ಪ್ರಮುಖ ವ್ಯಕ್ತಿ. ಭಾರತೀಯ ಐಟಿ ಉದ್ಯಮವನ್ನು ನಿರ್ಮಿಸುವಲ್ಲಿ ನಾರಾಯಣ ಮೂರ್ತಿರವರ ಕೊಡುಗೆ ಅಪಾರ. ಅವರು ಐಷಾರಾಮಿ ಕಾರುಗಳ ಬಗ್ಗೆ ಅಷ್ಟಾಗಿ ಒಲವನ್ನು ಹೊಂದಿಲ್ಲ. ನಾರಾಯಣ ಮೂರ್ತಿರವರು ಸ್ಕೋಡಾ ಲಾರಾ ಕಾರಿನಲ್ಲಿ ಪ್ರಯಾಣಿಸುವುದನ್ನು ಇಷ್ಟಪಡುತ್ತಾರೆ. ಅವರು ಹೆಚ್ಚಾಗಿ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಾರೆ.


Click it and Unblock the Notifications