ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅಗತ್ಯವಿರುವವರಿಗೆ ಮಾತ್ರ ಮನೆಯಿಂದ ಹೊರ ಬರಲು ಅವಕಾಶ ನೀಡಲಾಗಿದೆ. ತಮಿಳುನಾಡು ಪೊಲೀಸರು ವಿನಾಕಾರಣ ಮನೆಯಿಂದ ಹೊರ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಲಾಕ್‌ಡೌನ್ ನಡುವೆಯೂ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಚೆನ್ನೈನಲ್ಲಿ ಅಪಘಾತವೊಂದು ಸಂಭವಿಸಿದೆ. ಕುಡಿದ ಮತ್ತಿನಲ್ಲಿ ಐಷಾರಾಮಿ ಕಾರು ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿಯೊಬ್ಬರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಬಂಧಿತ ಉದ್ಯಮಿಯ ಹೆಸರು ಹರೀಶ್ ಮೆಶ್ವಾನಿ ಎಂದು ತಿಳಿದುಬಂದಿದೆ. ಆತ ಚಾಲನೆ ಮಾಡುತ್ತಿದ್ದ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಸಿ 43 ಎಎಂಜಿ ಕಾರನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರ ಬರುವವರ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಪೊಲೀಸರು ನಿನ್ನೆ ಚೆನ್ನೈನಲ್ಲಿಕಾರ್ಯ ನಿರ್ವಹಿಸುವ ವೇಳೆ ಹರೀಶ್ ಮೆಶ್ವಾನಿ ಸಿಕ್ಕಿ ಬಿದ್ದಿದ್ದಾನೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಸಿಕ್ಕಿ ಬಿದ್ದಾಗ ಆತ ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಕಾರನ್ನು ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಬ್ಯಾರಿಕೇಡ್‌ಗಳೊಂದಿಗೆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಆದರೆ ಪಾನಮತ್ತನಾಗಿದ್ದ ಹರೀಶ್ ಮೆಶ್ವಾನಿಗೆ ತಕ್ಷಣವೇ ಕಾರನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಆತನ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಆಗ ಪೊಲೀಸರು ಹರೀಶ್ ಮೆಶ್ವಾನಿಗೆ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದಾರೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಆದರೆ ಹರೀಶ್ ಮೆಶ್ವಾನಿ ಪೊಲೀಸರ ಮಾತಿಗೆ ಕ್ಯಾರೇ ಎನ್ನದೇ ಕಾರಿನೊಳಗೆ ಕುಳಿತೇ ಇದ್ದ. ಇದರ ಜೊತೆಗೆ ಹರೀಶ್ ಮೆಶ್ವಾನಿ ಕಾರನ್ನು ಹಿಮ್ಮುಖವಾಗಿ ತೆಗೆದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಆಗ ಆತನ ಕಾರು ಹಿಂದಿದ್ದ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕೊನೆಗೆ ಪೊಲೀಸರು ಮುರಿದಿದ್ದ ಕಾರಿನ ವಿಂಡ್‌ಸ್ಕ್ರೀನ್ ಮೂಲಕ ಹರೀಶ್ ಮೆಶ್ವಾನಿಯನ್ನು ಹೊರಕ್ಕೆಳೆದಿದ್ದಾರೆ ಎಂದು ವರದಿಯಾಗಿದೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಸದ್ಯ ಹರೀಶ್ ಮೆಶ್ವಾನಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆತ ವಿಪರೀತವಾಗಿ ಕುಡಿದಿದ್ದೆ ಈ ಘಟನೆಗೆ ಮುಖ್ಯ ಕಾರಣವೆಂದು ಹೇಳಲಾಗಿದೆ. ಇದನ್ನು ಖಚಿತಪಡಿಸಲು ಪೊಲೀಸರು ಹರೀಶ್ ಮೆಶ್ವಾನಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹರೀಶ್ ಮೆಶ್ವಾನಿ ಮದ್ಯ ಸೇವಿಸಿರುವುದು ದೃಢ ಪಟ್ಟಿದೆ. ಹರೀಶ್ ಮೆಶ್ವಾನಿ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಹಾಗೂ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಲಾಕ್‌ಡೌನ್ ನಡುವೆಯೂ ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಉದ್ಯಮಿ

ಈ ಘಟನೆಯ ಬಗ್ಗೆ ಸನ್ ನ್ಯೂಸ್ ವರದಿ ಮಾಡಿದೆ. ಮದ್ಯದ ಪ್ರಭಾವದಿಂದ ವಾಹನ ಚಲಾಯಿಸುವುದು ತಪ್ಪು. ಅದರಲ್ಲೂ ಲಾಕ್‌ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದು ಕುಡಿದು ವಾಹನ ಚಾಲನೆ ಮಾಡಿರುವುದು ದೊಡ್ಡ ಅಪರಾಧವಾಗಿದೆ.

ಚಿತ್ರ ಕೃಪೆ: ಸನ್ ನ್ಯೂಸ್

Most Read Articles

Kannada
English summary
Businessman arrested for drunk and drive accident. Read in Kannada.
Story first published: Friday, May 28, 2021, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X