ನಗರಗಳಲ್ಲಿ ಅರಣ್ಯವನ್ನು ಪ್ರೊತ್ಸಾಹಿಸಲು ಮಹೀಂದ್ರಾ ಥಾರ್‌ನಲ್ಲಿ 63,000 ಕಿ.ಮೀ ಸಂಚರಿಸಿದ ಉದ್ಯಮಿ

ಕೇಂದ್ರದ 'ದೇಖೋ ಅಪ್ನಾ ದೇಶ್' ಅಭಿಯಾನದಿಂದ ಪ್ರೇರಣೆ ಪಡೆದು ಪುಣೆ ಮೂಲದ ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ಭಾರತದಾದ್ಯಂತ ಒಂದೂವರೆ ವರ್ಷಗಳ ಸುದೀರ್ಘ ಸೋಲೊ ಟ್ರಿಪ್‌ ಮಾಡಿದ್ದಾರೆ. ಜನಪ್ರಿಯ ಆಫ್-ರೋಡರ್ ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಯಲ್ಲಿ ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ಸೋಲೊ ಟ್ರಿಪ್‌ ತೆರಳಿದ್ದಾರೆ.

2021ರ ಅಕ್ಟೋಬರ್ ತಿಂಗಳಿನಲ್ಲಿ ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ತಮ್ಮ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಒಟ್ಟು 63,000 ಕಿಮೀ ದೂರವನ್ನು ಪ್ರಯಾಣಿಸದ್ದಾರೆ. ಇವರು ಸೋಲೊ ಟ್ರಿಪ್‌ ನಲ್ಲಿ 104 ರಾಷ್ಟ್ರೀಯ ಉದ್ಯಾನವನಗಳು, 54 ಹುಲಿ ಸಂರಕ್ಷಿತ ಪ್ರದೇಶಗಳು, 32 ಆನೆ ಮೀಸಲು ಪ್ರದೇಶಗಳು ಮತ್ತು 40 ಕ್ಕೂ ಹೆಚ್ಚು ವಿಶ್ವ ಪರಂಪರೆಯ ತಾಣಗಳಿಗೆ ಭೇಟಿ ನೀಡಿದರು.

Mahindra Thar

ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರು ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಭೂದೃಶ್ಯವನ್ನು ದಾಖಲಿಸಲು ಮತ್ತು ಜನರಿಗೆ ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ನನ್ನ ಯಾತ್ರೆಯು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಭೂದೃಶ್ಯಗಳನ್ನು ದಾಖಲಸಿ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಜೊತೆಗೆ ಅದರ ಸಸ್ಯ ಮತ್ತು ಪ್ರಾಣಿಗಳು. ರಾಜಸ್ಥಾನದ ಶುಷ್ಕ ಮರುಭೂಮಿಗಳಿಂದ ಈಶಾನ್ಯದ ಸೊಂಪಾದ ಮಳೆಕಾಡುಗಳವರೆಗೆ, ಎತ್ತರದ ಹಿಮಾಲಯದ ಶಿಖರಗಳಿಂದ ಹಿಡಿದು ಆಕರ್ಷಕ ಅಂಡಮಾನ್ ದ್ವೀಪಗಳವರೆಗೆ ಎಂದು ಅವರು ಹೇಳಿದರು. ಪ್ರಕೃತಿಯನ್ನು ಅನ್ವೇಷಿಸಲು ಜನರು ಮುಖ್ಯವಾಗಿ ಆಗ್ನೇಯ ಏಷ್ಯಾದ ದೇಶಗಳಿಗೆ ವಿದೇಶ ಪ್ರವಾಸ ಮಾಡುತ್ತಾರೆ ಆದರೆ ಭಾರತದಲ್ಲಿಯೇ ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಅನ್ವೇಷಿಸಲು ಸಾಕಷ್ಟು ವಿಷಯಗಳಿವೆ ಎಂದು ಅವರು ಹೇಳಿದರು.

Mahindra Thar

ಅವರ ಯಾತ್ರೆಯ ಸಮಯದಲ್ಲಿ ನಾನು ಭಾರತದ ಸಾಂಸ್ಕೃತಿಕ ಶ್ರೀಮಂತದಲ್ಲಿ ಮುಳುಗಿದ್ದೇನೆ. ನಾನು ಕಂಡ ಸಮುದಾಯಗಳ ರೋಮಾಂಚಕ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದೇನೆ. ಈ ಸಮಗ್ರ ಪರಿಶೋಧನೆಯು ನನಗೆ ರಾಷ್ಟ್ರದ ಶ್ರೀಮಂತ ಪರಂಪರೆ ಮತ್ತು ಅದರ ಜೀವವೈವಿಧ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡಿದೆ. ಅವರ ಟ್ರಿಪ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಿಂದ ಮಾನ್ಯತೆ ಪಡೆದಿದ್ದಾರೆ.

ಅವರು ಯಾತ್ರೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಿಂದ 'ದೀರ್ಘ ನಿರಂತರ ಪರಿಶೋಧನಾ ಯಾತ್ರೆ' ಎಂದು ಗುರುತಿಸಲ್ಪಟ್ಟಿದೆ. ನಗರ ಅರಣ್ಯದ ಪ್ರಾಮುಖ್ಯತೆಯನ್ನು ಪ್ರೊತ್ಸಾಹಿಸಲು ನನ್ನ ಸಂಪೂರ್ಣ ಯಾತ್ರೆಯ ದಾಖಲಿಸುವ ವೀಡಿಯೊ ವೆಬ್ ಸರಣಿ ಮತ್ತು ಫೋಟೋಬುಕ್ ಮೂಲಕ ನನ್ನ ಅನುಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ನಾನು ಯೋಜಿಸುತ್ತಿದ್ದೇನೆ ಎಂದು ಹೇಳಿದರು.

ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ಈ ಸೋಲೊ ಟ್ರಿಪ್‌ ಅನ್ನು ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ತೆರಳಿದ್ದಾರೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್‍ಯುವಿಯಾಗಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತದೆ.

ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ಮಹೀಂದ್ರಾ ಥಾರ್ 4X4 ಆವೃತ್ತಿಯು ಎಲೆಕ್ಟ್ರಾನಿಕ್ ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್‌ನೊಂದಿಗೆ ಬರುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ,

Article Published On: Saturday, July 1, 2023, 14:44 [IST]
English summary
Businessman drives 63000 kms in mahindra thar promote urban forestation details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+