ತಂದೆಯ ಕಷ್ಟ ಕಾಲದಲ್ಲಿ ಅದೃಷ್ಟ ದೇವತೆಯಾದ ಮಗಳಿಗೆ 12.50 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್

ದಕ್ಷಿಣ ಭಾರತದಲ್ಲಿ ಮದುವೆಗೆ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ಚಿನ್ನವನ್ನು ಖರೀದಿಸಲು ನಿರ್ಧರಿಸಿದಾಗ ಅವರ ಮನಸ್ಸಿನಲ್ಲಿ ಬರುವ ಮೊದಲ ಹೆಸರುಗಳಲ್ಲಿ ಮಲಬಾರ್ ಗೋಲ್ಡ್ ಕೂಡ ಒಂದು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಕೊಪ್ಪರ್ ಪಾಟ್‌ನಿಂದ ಪ್ರಾರಂಭವಾದ ಕಂಪನಿಯಾಗಿದ್ದು, ಇಂದು ವಿಶ್ವದ ಅತಿದೊಡ್ಡ ಆಭರಣ ಸರಪಳಿಯಾಗಿ ಬೆಳೆದಿದೆ. 1993 ರಲ್ಲಿ ಕೋಝಿಕೋಡ್ ಪಾಳಯಂನಲ್ಲಿ ಒಂದೇ ಕೊಠಡಿಯಿಂದ ಪ್ರಾರಂಭವಾದ ಮಲಬಾರ್ ಗ್ರೂಪ್ ವಹಿವಾಟು ವಿಶ್ವದ ಆರನೇ ಅತಿದೊಡ್ಡ ರತ್ನ ಮತ್ತು ಆಭರಣ ಚಿಲ್ಲರೆ ಸರಪಳಿಯಾಗಿ ಬೆಳದಿದೆ.

ಎಂಪಿ ಅಹ್ಮದ್ ಮತ್ತು ಫೈಸಲ್ ಮಲಬಾರ್ ಅವರು ಜಾಗತಿಕ ವ್ಯಾಪಾರ ಅಸ್ತಿತ್ವವನ್ನು ಹೊಂದಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮುಖ್ಯ ಸಂಸ್ಥಾಪಕರು. ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯವಾಗಿರುವ ಫೈಸಲ್ ಕಾಸ್ಮೊಸ್ ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆ ಸಹ-ಅಧ್ಯಕ್ಷರಾಗಿದ್ದಾರೆ. ಇದಲ್ಲದೆ, ಅವರು ಯುಎಇಯ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಇದೀಗ ಫೈಸಲ್ ಮಲಬಾರ್ ಅವರು ತನ್ನ ಮಗಳಿಗೆ ದೊಡ್ಡ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Rolls Royce Cullinan

ನನ್ನ ಜಾಮಿಯಾ ಮಗಳು ಮತ್ತು ಇನ್ನಮ್‌ಗೆ ಆಶ್ಚರ್ಯ' ಎಂಬ ಶೀರ್ಷಿಕೆಯೊಂದಿಗೆ ಅವರೇ ಕಾರು ಗಿಫ್ಟ್ ಕೊಡುವ ವೀಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಯಾವುದರಲ್ಲೂ ದೊಡ್ಡ ಆಸೆಯಿಲ್ಲದ ಮಗಳಿಗೆ ಸರ್ಪೈಸ್ ನೀಡುವುದು ಈ ಉದ್ಯಮಿಯ ಉದ್ದೇಶವಾಗಿತ್ತು ಎಂಬುದನ್ನು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಫೈಸಲ್ ಮಲಬಾರ್ ಅವರು ತಮ್ಮ ಮಗಳು 100 ಮಿಲಿಯನ್ ದಿರ್ಹಮ್ ಒಟ್ಟಿಗೆ ಕೊಟ್ಟರೂ ಅವರು ತೆಗೆದುಕೊಳ್ಳುವುದಿಲ್ಲವಂದು ಹೇಳಿದ್ದಾರೆ.

ಅದಕ್ಕೇ ತಂದೆಯಾದ ಫೈಸಲ್ ಮಲಬಾರ್ ಅವರು ದುಬಾರಿ ಕಾರು ಉಡುಗೊರೆ ಕೊಡಲು ನಿರ್ಧರಿಸಿದರು. ಇನ್ನು ಇದು ಯಾವ ಕಾರು ಗೊತ್ತಾ? ಐಷಾರಾಮಿ ಕಾರುಗಳ ಸುಲ್ತಾನ್ ರೋಲ್ಸ್ ರಾಯ್ಸ್‌ನ ಕುಲ್ಲಿನನ್ (Rolls Royce Cullinan) ಆಗಿದೆ. ನನ್ನ ಮಗಳು ನನ್ನ ಪ್ರಪಂಚ. ಮಗಳು ಹುಟ್ಟಿದ ದಿನದಿಂದಲೂ ನನಗೇನೂ ಬೇಕು ಎಂದು ಹಠ ಮಾಡದ, ವಯಸ್ಸಿಗಿಂತ ಹೆಚ್ಚು ಪ್ರಬುದ್ಧವಾಗಿರುವ ನನ್ನ ಮಗಳು ಆಶ್ಚರ್ಯವನ್ನು ಕಂಡು ತುಂಬಾ ಸಂತೋಷವಾಗಿದೆ.

Rolls Royce Cullinan

ಅವಳ ಸಂತೋಷ ನಮಗೆ ದೊಡ್ಡದಾಗಿದೆ ಎಂದು ಫೈಸಲ್ ಮಲಬಾರ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.ಫೈಸಲ್ ಮಲಬಾರ್ ಜಾಮಿಯಾಗೆ ಉಡುಗೊರೆಯಾಗಿ ನೀಡಿದ ರೋಲ್ಸ್ ರಾಯ್ಸ್ ಕುಲ್ಲಿನನ್ ಎಸ್‌ಯುವಿಗೆ ಭಾರತದಲ್ಲಿ ಸುಮಾರು 12.25 ಕೋಟಿ ರೂ. ಬೆಲೆಯನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಚಿಕ್ಕದಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಇದರೊಂದಿಗೆ ದೊಡ್ಡದಾದ ಗ್ರಿಲ್, ಸ್ಟೇನ್‌ಲೆಸ್ ಸ್ಟೀಲ್ ಸ್ಕಿಡ್ ಪ್ಲೇಟ್‌ಗಳು ಮತ್ತು ಅಲಾಯ್ ವ್ಹೀಲ್ ಗಳು ಬ್ರಿಟಿಷ್ ಐಷಾರಾಮಿ ಕಾರು ತಯಾರಕರ ಮೊದಲ ಸ್ಪೋರ್ಟ್ ಯುಟಿಲಿಟಿ ವಾಹನದ ಮುಖ್ಯಾಂಶಗಳಾಗಿವೆ. ರೋಲ್ಸ್ ರಾಯ್ಸ್ ಕುಲ್ಲಿನನ್ ಎಸ್‌ಯುವಿ ಬೃಹತ್ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಈ ಎಂಜಿನ್ 571 ಬಿಹೆಚ್‍ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 8-ಸ್ಪೀಡ್ ZF ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಈ ಐಷಾರಾಮಿ ರೋಲ್ಸ್ ರಾಯ್ಸ್ ಕುಲ್ಲಿನನ್ ಎಸ್‍ಯುವಿಯು ಗಂಟೆಗೆ 250 ಕಿಮೀ ವೇಗದಲ್ಲಿ ಚಲಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Wednesday, December 11, 2024, 13:50 [IST]
English summary
Businessman faisal malabar gifted his daughter a rolls royce cullinan details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+