ಭಾರತದ ಅತ್ಯಂತ ದುಬಾರಿ ಮರ್ಸಿಡಿಸ್ ಕಾರು ಡೆಲಿವರಿ ಪಡೆದ ದಕ್ಷಿಣದ ಜನಪ್ರಿಯ ವ್ಯಕ್ತಿ!
ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಶ್ರೀಮಂತ ದೇಶಗಳಲ್ಲಿ ಕಾಣಿಸಿಕೊಳ್ಳುವಂತೆಯೇ ಭಾರತದಲ್ಲೂ ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯುನಂತಹ ದುಬಾರಿ ಕಾರುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ರೋಲ್ಸ್ ರಾಯ್ಸ್‌ನಂತಹ ಬ್ರಾಂಡ್‌ಗಳ ಕಾರುಗಳು ಸಹ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತವೆ. ಆದರೆ ಮರ್ಸಿಡಿಸ್ ಬ್ರಾಂಡ್ ಮಾತ್ರ ತನ್ನ ಸಾಮಾನ್ಯ ಕಾರುಗಳಿಗಿಂತ ಭಿನ್ನವಾಗಿ ಹಾಗೂ ಹೆಚ್ಚಿನ ಐಷಾರಾಮಿ ಬಯಸುವವರಿಗಾಗಿ ಮೇಬ್ಯಾಕ್ ಎಂಬ ವಿಶೇಷ ಸೆಡಾನ್ ಮತ್ತು ಎಸ್‌ಯುವಿಗಳನ್ನು ಪರಿಚಯಿಸಿದೆ. ಇವು ಸಾಮಾನ್ಯಾ ಮರ್ಸಿಡಿಸ್ ಕಾರುಗಳಿಗಿಂತ ಎರಡು ಪಟ್ಟು ದುಬಾರಿಯಗಿರುತ್ತವೆ.
ಇತ್ತೀಚೆಗೆ ಭಾರತದಲ್ಲಿ ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಐಷಾರಾಮಿ ಸೆಡಾನ್ ಅನ್ನು ದಕ್ಷಿಣ ಭಾರತದ ಜನಪ್ರಿಯ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಭಾರತದ ಅತಿದೊಡ್ಡ ವೈದ್ಯಕೀಯ ಪೌಷ್ಠಿಕಾಂಶ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಬ್ರಿಟಿಷ್ ಬಯೋಲಾಜಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ರೆಡ್ಡಿ, 3.44 ಕೋಟಿ ರೂ.ಗಳ (ಎಕ್ಸ್ ಶೋರೂಂ) ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಐಷಾರಾಮಿ ಸೆಡಾನ್ ಅನ್ನು ಖರೀದಿಸಿದ್ದಾರೆ.

ಈ ಕಾರನ್ನು ಡೆಲಿವರಿ ಪಡೆಯುವ ವಿಡಿಯೋವನ್ನು ಬೆಂಗಳೂರಿನ ಸುಂದರಂ ಮೋಟಾರ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ಬೆಂಗಳೂರಿನ ಮರ್ಸಿಡಿಸ್ ಬೆಂಝ್ ಅಧಿಕೃತ ಡೀಲರ್ ಶಿಪ್‌ನಲ್ಲಿ ವಿತರಣೆ ನೀಡುವುದನ್ನು ತೋರಿಸಲಾಗಿದೆ. ಸಿಬ್ಬಂದಿ ವಿ.ಎಸ್.ರೆಡ್ಡಿ ಅವರಿಗೆ ಹೂಗುಚ್ಛ ಮತ್ತು ಹ್ಯಾಂಪರ್ ನೀಡಿ ಬಳಿಕ ಕಾರನ್ನು ಹಸ್ತಾಂತರಿಸಿದರು.
ಕಾರಿನ ವಿಶೆಷತೆಗಳು: ಸುಮಾರು 5.5 ಮೀಟರ್ ಉದ್ದದೊಂದಿಗೆ, ಮೇಬ್ಯಾಕ್ ಎಸ್ 680 ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ತಲೆಮಾರಿನ ಎಸ್-ಕ್ಲಾಸ್ ಅನ್ನು ಆಧರಿಸಿದ್ದು, ಎಸ್-ಕ್ಲಾಸ್‌ಗೆ ಹೋಲಿಸಿದರೆ ಉದ್ದವಾದ ವ್ಹೀಲ್ ಬೇಸ್‌ನೊಂದಿಗೆ ಬರುತ್ತದೆ. ಕ್ಯಾಬಿನ್‌ನಲ್ಲಿಯೂ ಸಾಕಷ್ಟು ಸ್ಥಳಾವಕಾಶವನ್ನು ನೋಡಬಹುದು.

ಡೋರ್‌ಗಳು ಗೆಸ್ಚರ್ ಕಂಟ್ರೋಲ್‌ನೊಂದಿಗೆ ಬರುತ್ತವೆ, ಇವು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುವ ವೈಶಿಷ್ಟ್ಯವನ್ನು ಒಳಗೊಂಡಿವೆ. ಈ ಕಾರಿನಲ್ಲಿನ ಹೆಚ್ಚಿನ ಕಾರ್ಯಗಳನ್ನು ಹಿಂದಿನ ಸೀಟಿನಿಂದಲೂ ನಿಯಂತ್ರಿಸಬಹುದು. ಮರ್ಸಿಡೀಸ್ ಎಸ್ 680 ನಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಹಿಂಭಾಗದ ಸೀಟಿನಲ್ಲಿ ಎಂಟರ್ಟೈನ್‌ಮೆಂಟ್ ಸ್ಕ್ರೀನ್‌ಗಳು, ಎಲ್ಲಾ ಸೀಟ್‌ಗಳಿಗೆ ರೆಕ್ಲೈನರ್ ಫಂಕ್ಷನ್, ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಮಸಾಜ್ ಫಂಕ್ಷನ್ ಇತ್ಯಾದಿಗಳನ್ನು ಒಳಗೊಂಡಿದೆ.
ಮರ್ಸಿಡಿಸ್ - ಮೇಬ್ಯಾಕ್ ಎಸ್ 680 ಕಾರು, 6.0-ಲೀಟರ್ ಟರ್ಬೋಚಾರ್ಜ್ಡ್ ವಿ 12 ಎಂಜಿನ್ ಹೊಂದಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಹಾಗೂ 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ವಿ.ಎಸ್.ರೆಡ್ಡಿ ಅವರಿಗೆ ಇದು ಮೊದಲ ದುಬಾರಿ ಕಾರೇನಲ್ಲ, ತಮ್ಮ ಗ್ಯಾರೇಜ್‌ನಲ್ಲಿ ಇದಕ್ಕಿಂತ ಮೂರು ಪಟ್ಟು ದುಬಾರಿ ಬೆಲೆಯ ಕಾರೊಂದನ್ನು ಹೊಂದಿದ್ದಾರೆ. ಅವರು ಬೆಂಟ್ಲೆ ಮುಲ್ಸಾನೆ ಇಡಬ್ಲ್ಯೂಬಿ ಸೆಂಚುರಿ ಆವೃತ್ತಿಯನ್ನು ಹೊಂದಿದ್ದಾರೆ. ಇದರ ಬೆಲೆ ಬರೋಬ್ಬರಿ 14 ಕೋಟಿ ರೂ., ಈ ಬೆಂಟ್ಲೆ ಮುಲ್ಸಾನ್ ಬ್ರಿಟಿಷ್ ವಾಹನ ತಯಾರಕರು ನೀಡುವ ಪ್ರಮುಖ ಸೆಡಾನ್ ಆಗಿದ್ದು, ಕಂಪನಿಯು ತನ್ನ 100ನೇ ವಾರ್ಷಿಕೋತ್ಸವದ ಸಲುವಾಗಿ ಕೇವಲ 100 ಕಾರುಗಳನ್ನು ಮಾತ್ರ ತಯಾರಿಸಿತ್ತು.
ಈ ನೂರು ಕಾರುಗಳಲ್ಲಿ ಒಂದು ವಿ.ಎಸ್.ರೆಡ್ಡಿಯವರ ಬಳಿ ಇದೆ. ಈ ಕಾರು 6-ಲೀಟರ್ ವಿ8 ಎಂಜಿನ್ ಹೊಂದಿದ್ದು, ಇದು 506 ಹಾರ್ಸ್ ಪವರ್ ಮತ್ತು 1,020 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಝಡ್ಎಫ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಈ ಬೃಹತ್ ಸೆಡಾನ್ ಕಾರಿನ ಟಾಪ್ ಸ್ಪೀಡ್ ಗಂಟೆಗೆ 296 ಕಿ.ಮೀ ಇದೆ.


Click it and Unblock the Notifications








