ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಹೊಸ ಮೋಟಾರ್ ಕಾಯ್ದೆ ಜಾರಿಗೆ ಬಂದ ನಂತರ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗಾಗಿ ಪ್ರತಿ ದಿನ ಸಾವಿರಾರು ಪ್ರಕರಣಗಳನ್ನು ದಾಖಲಾಸುತ್ತಿದ್ದಾರೆ. ಆದರೆ ಇದೀಗ ಹೆಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಹಾಕದೆ, ಮದ್ಯ ಸೇವಿಸಿ ಚಾಲನೆ ಮಾಡಿದರೆ ಮಾತ್ರವಲ್ಲ ಚಾಲನೆ ವೇಳೆ ಶರ್ಟ್ ಗುಂಡಿ ಹಾಕದಿರುವುದಕ್ಕೆ ಮತ್ತು ಚಪ್ಪಲಿ ಧರಿಸಿದ ಕಾರಣಕ್ಕೂ ದಂಡ ವಿಧಿಸುತ್ತಾರೆ.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಹೌದು, ಇಂತದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಜೈಪುರ ಟ್ರಾಫಿಕ್ ಪೊಲೀಸರು ಕ್ಯಾಬ್ ಚಾಲಕನಿಗೆ ಬರೊಬ್ಬರಿ ರೂ. 1,600 ದಂಡವನ್ನು ವಿಧಿಸಿದ್ದಾರೆ. ಒಂದು ಕಡೆ ಹೊಸ ಮೋಟಾರ್ ಕಾಯ್ದೆಯ ವಿರುದ್ದ ದೇಶದಾದ್ಯಂತ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಮತ್ತೊಂದಡೆ ಪೊಲೀಸರು ಹೊಸ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕಠಿಣ ಕ್ರಮಕೈಗೊಳ್ಳುತ್ತಿದ್ದಾರೆ.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ರಾಜಸ್ಥಾನ ರಾಜ್ಯದ ಟ್ರಾಫಿಕ್ ಪೊಲೀಸರು ಸಂಜಯ್ ಸರ್ಕಲ್‌ನಲ್ಲಿ ಕ್ಯಾಬ್ ಅನ್ನು ಪರಿಶೀಲಿಸಿದ್ದಾರೆ. ದಾಖಲೆಗಳು ಮತ್ತು ಇತರ ಕಡ್ಡಾಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಚಾಲಕನಿಗೆ ರೂ. 1.600 ದಂಡದ ಚಲನ್ ನೀಡಿದರು. ಚಲನ್ ರಶೀದಿಯಲ್ಲಿ ದಂಡಕ್ಕೆ ಕಾರಣ ಕ್ಯಾಬ್‍‍ನ ಚಾಲಕ ಚಪ್ಪಲಿ ಧರಿಸಿರುತ್ತಾನೆ ಮತ್ತು ಶರ್ಟ್ ಬಟನ್ ಸಹ ಹಾಕಿಲ್ಲ ಎಂದು ಉಲ್ಲೇಖಿಸಲಾಗಿದೆ.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಹೊಸ ಮೋಟಾರ್ ವಾಹನ ಕಾಯ್ದೆ ಜಾರಿಯಾದ ನಂತರ ಸೆಪ್ಟೆಂಬರ್ 6 ರಂದು ಈ ಘಟನೆ ನಡೆದಿದೆ. ಕ್ಯಾಬ್ ಚಾಲಕನಿಗೆ ಸ್ಥಳದಲ್ಲೇ ಟಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಚಾಲಕ ಸ್ಥಳದಲ್ಲೇ ದಂಡ ಪಾವತಿಸಿದ್ದೀರಾ ಅಥವಾ ನ್ಯಾಯಾಲಯದಲ್ಲಿ ದಂಡವನ್ನು ಪಾವವತಿಸಿದ್ದಾರೋ ಎಂಬುವುದು ತಿಳಿದು ಬಂದಿಲ್ಲ.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಭಾರತದಲ್ಲಿ ಕರ್ತವ್ಯದಲ್ಲಿರುವ ಕ್ಯಾಬ್ ಚಾಲಕರು ಡ್ರೆಸ್ ಕೋಡ್ ಪಾಲಿಸಬೇಕಂಬ ಕಾನೂನು ಇದೆ. ಹಲವಾರು ವರ್ಷಗಳ ಹಿಂದೆ ವಿವಿಧ ರಾಜ್ಯಗಳ ಕ್ಯಾಬ್ ಚಾಲಕರು ಸಮವಸ್ತ್ರವನ್ನು ಧರಿಸಬೇಕು ಮತ್ತು ಅವರು ಗುರುತಿನ ಚೀಟಿಗಳನ್ನು ಹೊಂದಿರಬೇಕೆಂಬ ಕಾನೂನು ಜಾರಿಯಲ್ಲಿದೆ. ಕ್ಯಾಬ್ ಚಾಲಕರ ಡ್ರೇಸ್ ಕೋಡ್ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿದೆ. ರಾಜಸ್ಥಾನದ ಕ್ಯಾಬ್ ಚಾಲಕರು ಕರ್ತವ್ಯದಲ್ಲಿರುವಾಗ ನೀಲಿ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಬೇಕಾಗುತ್ತದೆ. ಅಲ್ಲದೇ ಕ್ಯಾಬ್ ಚಾಲಕನು ಪಾದಗಳನ್ನು ಮುಚ್ಚುವ ಶೂಸ್‍‍ಗಳನ್ನು ಧರಿಸಬೇಕಾಗುತ್ತದೆ.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಆದರೆ ದ್ವಿಚಕ್ರ ವಾಹನಗಳಲ್ಲಿ ವಾಹನ ಚಾಲಕರು ಚಪ್ಪಲಿ ಧರಿಸಿ ಸವಾರಿ ಮಾಡಲು ಸಾಧ್ಯವಿಲ್ಲ. ಇದು ಕಾನೂನುಬಾಹಿರ ಮತ್ತು ಈ ಸಂಚಾರಿ ನಿಯಮ ಉಲ್ಲಂಘನೆಗೆ ರೂ.1,000 ದಂಡವನ್ನು ವಿಧಿಸುತ್ತಾರೆ. ಆದರೆ ಹೊಸ ಮೋಟಾರ್ ಕಾಯ್ದೆಯಲ್ಲಿ ಈ ನಿಯಮ ವಿರುವುದಲ್ಲ ಈ ನಿಯಮ ಮೊದಲಿನಿಂದಲೂ ಇದೆ ಎಂಬುವುದನ್ನು ಗಮನಿಸಬೇಕು.

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ಕ್ಯಾಬ್ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಮತ್ತು ದ್ವಿಚಕ್ರದಲ್ಲಿ ಹೋಗುವಾಗ ಚಪ್ಪಲಿ ಧರಿಸಬಾರದು ಎಂಬ ಕಾನೂನು ಭಾರತದಲ್ಲಿ ಹಲವು ವರ್ಷಗಳಿಂದ ಇದೆ. ಆದರೆ ಇತ್ತೀಚೆಗೆ ಟ್ರಾಫಿಕ್ ಪೊಲೀಸರು ದೇಶದ ಕೆಲವು ಭಾಗಗಳಲ್ಲಿ ಜಾರಿಗೆ ತರಲು ಪ್ರಾರಂಭಿಸಿದ್ದಾರೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ರಾಜಸ್ಥಾನ ರಾಜ್ಯದಲ್ಲಿಯೂ ಕೂಡ ಹೊಸ ಮೋಟಾರ್ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಇದರ ಅನ್ವಯ ಕ್ಯಾಬ್ ಚಾಲಕನಿಗೆ ದುಬಾರಿ ಮೊತ್ತದ ದಂಡವನ್ನು ವಿಧಿಸಿದ್ದಾರೆ. ರಾಜಸ್ಥಾನ ರಾಜ್ಯದಲ್ಲಿ ಹಲವಾರು ದಾಖಲೆ ಮೊತ್ತದ ದಂಡವನ್ನು ವಿಧಿಸಿದ ಪ್ರಕರಣಗಳು ಈ ಹಿಂದೆ ನಡೆದಿದೆ. ರಾಜಸ್ಥಾನದಲ್ಲೂ ಹೊಸ ಮೋಟಾರ್ ಕಾಯ್ದೆಯ ವಿರುದ್ದ ಹಲವಾರು ಪ್ರತಿಭಟನೆಗಳು ನಡೆದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಶರ್ಟ್ ಗುಂಡಿ ಹಾಕದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ..!

ದೇಶದ ಹಲವು ರಾಜ್ಯಗಳಲ್ಲಿ ಜನರ ಆಕ್ರೋಶದಿಂದ ಹೊಸ ಸಂಚಾರಿ ನಿಯಮದಡಿ ದಂಡವನ್ನು ಕಡಿತಗೊಳಿಸಿದೆ. ಕೆಲವು ಕಡೆಗಳಲ್ಲಿ ಹಳೇ ಸಂಚಾರಿ ನಿಯಮಗಳನ್ನೇ ಪಾಲಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಸಂಚಾರಿ ನಿಯಮದ ಕುರಿತು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಎಂಬುವುದನ್ನು ಕಾಯ್ದು ನೋಡಬೇಕಿದೆ.

More from DriveSpark

Article Published On: Wednesday, September 25, 2019, 20:16 [IST]
English summary
Cab driver FINED for wearing ‘unbuttoned shirt’ & slippers - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+