ಕರೋನಾ ವೈರಸ್ ತಡೆಗಟ್ಟಲು ಹೊಸ ಐಡಿಯಾ ಮಾಡಿದ ಕ್ಯಾಬ್ ಡ್ರೈವರ್
ಕರೋನಾ ವೈರಸ್ ಪ್ರಪಂಚದೆಲ್ಲೆಡೆ ವೇಗವಾಗಿ ಹಬ್ಬುತ್ತಿದೆ. ಇದರಿಂದಾಗಿ ಜನರು ಭೀತಿಗೊಳಗಾಗಿದ್ದಾರೆ. ಮೊದಲಿಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡ ಈ ವೈರಸ್ ಆ ದೇಶವನ್ನು ಸಂಕಷ್ಟಕ್ಕೆ ತಳ್ಳಿತ್ತು. ಈಗ ಚೀನಾದಲ್ಲಿ ಪರಿಸ್ಥಿತಿಯು ಸುಧಾರಿಸಿದೆ.

ಆದರೆ ಚೀನಾದಿಂದ ಹೊರಗೆ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇಟಲಿ, ಅಮೆರಿಕಾದಂತಹ ದೇಶಗಳಲ್ಲಿ ಕರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಈ ಮಹಾಮಾರಿ ಈಗ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗದೇ ಇದ್ದರೂ, ಹಲವರಿಗೆ ಕರೋನಾ ವೈರಸ್ ಸೊಂಕು ತಗುಲಿದೆ.

ನಿನ್ನೆಯಷ್ಟೇ ಕಲಬುರಗಿಯಲ್ಲಿ ವೃದ್ಧರೊಬ್ಬರು ಕರೋನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ಇದು ಕರೋನಾದಿಂದ ಭಾರತದಲ್ಲಿ ಸಾವು ಸಂಭವಿಸಿದ ಮೊದಲ ಪ್ರಕರಣವಾಗಿದೆ. ಭಾರತವೂ ಸೇರಿದಂತೆ ಹಲವು ದೇಶಗಳು ಈ ವೈರಸ್‍ಗೆ ಔಷಧಿಯನ್ನು ಕಂಡು ಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿವೆ.

ಸಾರ್ವಜನಿಕರೂ ಸಹ ಕರೋನಾ ವೈರಸ್ ಹರಡದಂತೆ ಮುಂಜಾಗೃತೆಯನ್ನು ವಹಿಸುತ್ತಿದ್ದಾರೆ. ಪ್ರಪಂಚಾದ್ಯಂತವಿರುವ ಹಲವು ವಿಮಾನಯಾನ ಕಂಪನಿಗಳು ತಮ್ಮ ವಿಮಾನ ಸೇವೆಯನ್ನು ರದ್ದುಗೊಳಿಸಿವೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಭಾರತದಲ್ಲಿ ಅಷ್ಟೊಂದು ಪರಿಣಾಮ ಬೀರದಿದ್ದರೂ, ಅಮೆರಿಕಾ, ಇಟಲಿ ಹಾಗೂ ಯುರೋಪ್‍ನಲ್ಲಿರುವ ದೇಶಗಳ ನಾಗರೀಕರು ಮನೆಯಿಂದ ಹೊರಕ್ಕೆ ಕಾಲಿಡುತ್ತಿಲ್ಲ. ಅಮೆರಿಕಾದ ಕ್ಯಾಬ್ ಡ್ರೈವರ್ ಒಬ್ಬ ಕರೋನಾ ತಡೆಯಲು ಹೊಸ ಐಡಿಯಾ ಮಾಡಿದ್ದಾನೆ.

ಕರೋನಾ ವೈರಸ್ ಸೊಂಕು ತಗುಲದಂತೆ ಮಾಡಲು ಪ್ಲಾಸ್ಟಿಕ್ ಕವರ್‍ಗಳ ಸಹಾಯದಿಂದ ತನ್ನ ಕಾರಿನಲ್ಲಿ ಪ್ರತ್ಯೇಕವಾದ ಕಂಪಾರ್ಟ್‍ಮೆಂಟ್ ಒಂದನ್ನು ನಿರ್ಮಿಸಿದ್ದಾನೆ. ಈ ಕಂಪಾರ್ಟ್‍ಮೆಂಟ್ ಅನ್ನು ತನ್ನ ಸೀಟಿನ ಸುತ್ತ ನಿರ್ಮಿಸಿದ್ದಾನೆ.

ಇದರಿಂದಾಗಿ ಈ ಕ್ಯಾಬ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ವೈರಸ್ ಸೊಂಕು ತಗುಲದಂತೆ ಮಾಡಿದ್ದಾನೆ. ಫಿಲ್‍ಡಿಯೊಶೇರ್ ಇನ್ಸ್ ಟಾಗ್ರಾಂ ಖಾತೆಯಲ್ಲಿ ಈ ಕುರಿತಾದ ವೀಡಿಯೊವನ್ನು ಮಾರ್ಚ್ 10ರಂದು ಪೋಸ್ಟ್ ಮಾಡಲಾಗಿದೆ.

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಶೇರ್ ಮಾಡಿರುವವರು ತಾವು ಕಾರಿನಲ್ಲಿ ಹೋಗುವಾಗ ಈ ದೃಶ್ಯವನ್ನು ಕಂಡ ನಂತರ ಇದನ್ನು ವೀಡಿಯೊ ಮಾಡಿ ಬೇರೆಯವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಗಿ ತಿಳಿಸಿದ್ದಾರೆ.

ಬೇರೆ ಕ್ಯಾಬ್ ಡ್ರೈವರ್‍ಗಳೂ ಸಹ ಈ ವಿಧಾನವನ್ನು ಅನುಸರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದರಿಂದಾಗಿ ಡ್ರೈವರ್‍ಗಳು ತಮ್ಮ ಜೊತೆಗೆ ಬೇರೆ ಪ್ರಯಾಣಿಕರನ್ನೂ ಸಹ ಕರೋನಾ ವೈರಸ್ ಸೊಂಕಿನಿಂದ ರಕ್ಷಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.
ಭಾರತದಲ್ಲಿ ಒಲಾ ಕಂಪನಿಯು ಕ್ಯಾಬ್ ಸೇವೆಯನ್ನು ನೀಡುವುದರಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಸ್ಥಾನದಲ್ಲಿ ಉಬರ್ ಕಂಪನಿಯಿದೆ. ಭಾರತದಲ್ಲಿ ಕಾರ್ಯಾಚರಿಸುವ ಟ್ಯಾಕ್ಸಿ ಹಾಗೂ ಆಟೋಗಳು ಈ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ.

ಇದರಿಂದಾಗಿ ಚಾಲಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಪ್ರಯಾಣಿಕರನ್ನೂ ಸಹ ಕರೋನಾ ವೈರಸ್‍ನಿಂದ ರಕ್ಷಿಸಬಹುದು. ಈ ವೀಡಿಯೊವನ್ನು ವೀಕ್ಷಿಸಿರುವ ಹಲವಾರು ಜನ ಹೊಸ ವಿಧಾನವನ್ನು ಅಳವಡಿಸಿರುವ ಕ್ಯಾಬ್ ಡ್ರೈವರ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.


Click it and Unblock the Notifications








