ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟೆನ್ನಿಸ್ ಬಾಲ್ ಬಳಸಿ ಲಾಕ್ ಮಾಡಿರುವ ಕಾರನ್ನು ಅನ್‌ಲಾಕ್ ಮಾಡುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಕಾರಿನ ಕೀ ಕಳೆದುಕೊಂಡಿದ್ದರೆ ಅಥವಾ ಕೀಯನ್ನು ಕಾರಿನಲ್ಲಿ ಮರೆತು ಡೋರ್ ಲಾಕ್ ಆಗಿದ್ದರೆ ಈ ವಿಧಾನಗಳನ್ನು ಅನುಸರಿಸಿ ಎಂದು ಈ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಈ ವಿಡಿಯೋಗಳನ್ನು ಕೋಟ್ಯಾಂತರ ಜನರು ವೀಕ್ಷಣೆ ಮಾಡಿದ್ದು, ಹಲವರು ಇದನ್ನು ಅನುಸರಿಸಿ ಬಾಲ್‌ನಿಂದ ಕಾರ್ ಡೋರ್ ತೆಗೆಯಲು ಯತ್ನಿಸಿರುವ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ. ಇವರಿಗಾದ ಅನುಭವದ ಬಗ್ಗೆ ಮುಂದೆ ನೋಡೋಣ, ಆದರೆ ಅಷ್ಟಕ್ಕೂ ಟೆನ್ನಿಸ್ ಬಾಲ್‌ನಿಂದ ಲಾಕ್ ಮಾಡಿರುವ ಕಾರನ್ನು ಅನ್‌ಲಾಕ್ ಮಾಡಬಹುದೇ? ಸೋಶಿಯಲ್ ಮೀಡಿಯಾದಲ್ಲಿರುವ ಎಲ್ಲಾ ವಿಡಿಯೋಗಳು ನಿಜವೇ? ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳೋಣ..

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ವಿಶ್ವದಾದ್ಯಂತ ವಾಹನ ಕಳ್ಳತನ ಸಮಸ್ಯೆ ಕಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಕಾರನ್ನು ಕಳ್ಳರು ಕದಿಯಲು ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಇದರಿಂದ ಹಲವು ಪ್ರಕರಣಗಳು ನಿತ್ಯ ದಾಖಲಾಗುತ್ತಿದ್ದು, ಕಾರು ತಯಾರಕರು ಕೂಡ ಇದನ್ನು ತಡೆಗಟ್ಟಲು ಅತ್ಯಾಧುಕಿನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದಾರೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಉದಾಹರಣೆಗೆ ಲಾಕಿಂಗ್ ಸಿಸ್ಟಮ್, ಜಿಪಿಎಸ್, ಕೀಲೆಸ್ ತಂತ್ರಜ್ಞಾನದಂತಹ ಅನೇಕ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೂ ಕಳ್ಳರು ಹ್ಯಾಕಿಂಗ್ ಮಾಡುವ ಕಲೆಯಲ್ಲೂ ನಿಸ್ಸೀಮರಾಗಿರುವುದು ನಮ್ಮ ದೃರಾದೃಷ್ಟ. ಇದು ಸಾಲದೆಂಬಂತೆ ಇನ್ನು ಲಾಕ್ ಆಗಿರುವ ಕಾರುಗಳನ್ನು ತೆರೆಯಲು ಟಿಪ್ಸ್ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ವೀಡಿಯೊದ ಪ್ರಕಾರ, ಕಾರನ್ನು ಲಾಕ್ ಮಾಡಿ ಕೀಗಳನ್ನು ಕಳೆದುಕೊಂಡಿದ್ದರೆ ಅಥವಾ ಕಾರಿನೊಳಗೆ ಕಾರ್ ಕೀಗಳನ್ನು ಮರೆತು ಲಾಕ್ ಆಗಿದ್ದರೆ. ಅನ್ಲಾಕ್ ಮಾಡಲು ಸುಲಭವಾದ ಮಾರ್ಗವಿದೆ ಎನ್ನುತ್ತಾ ವಿಡಿಯೋ ಆರಂಭಿಸುವ ಅವರು, ಟೆನ್ನಿಸ್ ಬಾಲ್ ತೆಗೆದುಕೊಂಡು ಒಂದು ಕಡೆ ರಂಧ್ರವನ್ನು ಮಾಡಿ ಕಾರಿನ ಡೋರ್‌ಗಿರುವ ಕೀ ಇರಿಸುವ ಸ್ಥಳದಲ್ಲಿ ನಿಖರವಾಗಿ ಆ ರಂಧ್ರವನ್ನು ಇಡುತ್ತಾರೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಬಳಿಕ ಚೆಂಡನ್ನು ತ್ವರಿತವಾಗಿ ಒತ್ತುವ ಮೂಲಕ ಚೆಂಡಿನೊಳಗಿನ ಗಾಳಿಯ ಒತ್ತಡ ಕಾರಿನ ಲಾಕ್ ಅನ್ನು ಅನ್‌ಲಾಕ್ ಆಗುವಂತೆ ಮಾಡುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಈ ಕಾರ್ಯವಿಧಾನವನ್ನು ಸಹ ವಿವರಿಸಲಾಗಿದೆ. ಇಂತಹ ಒಂದಲ್ಲ ಎರಡಲ್ಲ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಇವೆಲ್ಲವೂ ಕೂಟ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಜನರು ಇದನ್ನು ನೋಡಿದಾಗ ನಿಜವಾಗಿಯೂ ಈ ರೀತಿಯ ಟೆನ್ನಿಸ್ ಬಾಲ್‌ನಿಂದ ಲಾಕ್ ಮಾಡಿದ ಕಾರನ್ನು ತೆರೆಯಬಹುದು ಎಂದು ಭಾವಿಸುತ್ತಾರೆ. ಕೆಲವರು ಲಾಕ್ ಮಾಡಿದ ಕಾರನ್ನು ಅನ್ಲಾಕ್ ಮಾಡಲು ಸಲಹೆಗಳು ಎಂದು ಭಾವಿಸುತ್ತಾರೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಇನ್ನೂ ಕೆಲವರು ಕಳ್ಳರಿಗಿದು ಸುಲಭವಾದ ಮಾರ್ಗವೆಂದು ಪರಿಗಣಿಸುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಲಾಕ್ ಮಾಡಿದ ಕಾರನ್ನು ಟೆನ್ನಿಸ್ ಬಾಲ್‌ನಿಂದ ಅನ್‌ಲಾಕ್ ಮಾಡಲು ಸಾಧ್ಯವೇ ಇಲ್ಲ. ಕೇವಲ ಗಾಳಿಯ ಒತ್ತಡದಿಂದ ಎಲ್ಲಾ ಬಾಗಿಲುಗಳನ್ನು ಅನ್ಲಾಕ್ ಮಾಡಲು ಸಾಧ್ಯವಾದರೆ ಇಂದು ಹಲವು ಕಾರುಗಳು ಕಣ್ಮರೆಯಾಗುತ್ತಿದ್ದವು.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಇದು ಸಂಪೂರ್ಣ ಸುಳ್ಳು ಮಾಹಿತಿ. ಕೆಲವರು ಇದನ್ನು ಪ್ರಯತ್ನಿಸಿ ವಿಫಲರಾಗಿದ್ದಾರೆ. ಮೊದಲೇ ತಿಳಿಸಿದಂತೆ ಇದನ್ನು ಮಾಡಿ ವಿಫಲರಾದ ಹಲವರು ಈ ವಿಡಿಯೋಗಳನ್ನು ನಂಬದಿರಿ ಎಂದು ತಮ್ಮ ವಿಡಿಯೋಗಳನ್ನು ಹರಿಬಿಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಕೇವಲ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ವೈರಲ್ ಮಾಡಿ ಲೈಕ್‌ ಮತ್ತು ವೀಕ್ಷಣೆಗಳಿಗಾಗಿ ಇವುಗಳನ್ನು ಮಾಡುತ್ತಿದ್ದಾರೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಈ ವಿಡಿಯೋಗಳನ್ನು ನಂಬಿಕೊಂಡು ಉದ್ದೇಶಪೂರ್ವಕವಾಗಿ ನಿಮ್ಮ ಕಾರ್ ಕೀಗಳನ್ನು ಕಾರಿನೊಳಗೆ ಇರಿಸಿ ಅನ್ಲಾಕ್ ಮಾಡಲು ಪ್ರಯತ್ನಿಸದರೆ ನಿಮ್ಮಷ್ಟು ದಡ್ಡರು ಮತ್ತೊಬ್ಬರು ಇರುವುದಿಲ್ಲ. ನಿಮ್ಮ ಕಾರಿನ ಕೀಗಳನ್ನು ನೀವು ಕಳೆದುಕೊಂಡಿದ್ದರೆ ಅಥವಾ ತಿಳಿಯದೆ ಅವುಗಳನ್ನು ಕಾರಿನೊಳಗೆ ಬಿಟ್ಟಿದ್ದರೆ ನಿಮಗೆ ಎರಡು ಆಯ್ಕೆಗಳಿವೆ.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಸಾಮಾನ್ಯವಾಗಿ ಕಾರನ್ನು ವಿತರಿಸಿದಾಗ ಎರಡು ಕೀಗಳನ್ನು ನೀಡಲಾಗುತ್ತದೆ. ಒಂದು ಕೀ ಕಳೆದುಹೋದರೆ ಅಥವಾ ನೀವು ಅದನ್ನು ಕಾರಿನೊಳಗೆ ಮರೆತುಬಿಟ್ಟಿದ್ದರೆ ಕಾರನ್ನು ಅನ್ಲಾಕ್ ಮಾಡಲು ನೀವು ಎರಡನೇ ಕೀಲಿಯನ್ನು ಬಳಸಬಹುದು. ಒಂದು ವೇಳೆ ಮತ್ತೊಂದು ಕೀ ಇಲ್ಲದಿದ್ದ ಸಂದರ್ಭದಲ್ಲಿ ನಿಮ್ಮ ಕಂಪನಿಯ ಹತ್ತಿರದ ಶೋರೂಮ್ ಅನ್ನು ನೀವು ಸಂಪರ್ಕಿಸಬಹುದು.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಅವರು ಅಧಿಕೃತ ಸೇವಾ ವ್ಯಕ್ತಿಗಳನ್ನು ನಿಮ್ಮ ಸ್ಥಳಕ್ಕೆ ಕಳುಹಿಸುತ್ತಾರೆ, ಅವರು ನಿಮ್ಮ ಕಾರಿನ ಬಾಗಿಲು ಅನ್ಲಾಕ್ ಮಾಡಲು ನಿಮಗೆ ಸಹಾಯ ಮಾಡುತ್ತಾರೆ. ಇದು ಸರಿಯಾದ ಮಾರ್ಗವಾಗಿದೆ. ಒಂದು ವೇಳೆ ಇಂತಹ ವಿಡಿಯೋಗಳನ್ನು ಅನುಸರಿಸಬೇಕೆಂದೆನಿಸಿದರೆ ಪಾಳುಬಿದ್ದ ಹಳೆಯ ಕಾರುಗಳ ಮೇಲೆ ಇಂತಹ ಪ್ರಯೋಗಗಳನ್ನು ಮಾಡಬಹುದು.

ಟೆನ್ನಿಸ್‌ ಬಾಲ್‌ನಿಂದ ಕಾರನ್ನು ಅನ್‌ಲಾಕ್ ಮಾಡಬಹುದೇ?: ವೈರಲ್ ವಿಡಿಯೋಗಳ ಹಿಂದಿನ ಅಸಲಿಯತ್ತೇನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಡಿಯೋ ಕೂಡ ಶೇ 70 ರಷ್ಟು ಲೈಕ್ ಹಾಗೂ ವೀಕ್ಷಣೆಗಳಿಗಾಗಿ ಮಾಡಲಾಗುತ್ತದೆ. ಇವು ನೋಡಲಷ್ಟೇ ಸೀಮಿತವಾಗಿದ್ದರೇ ಅವರಿಗೂ ಒಂದಷ್ಟು ದುಡ್ಡು ಬರುತ್ತದೆ. ಆದರೆ ಅವುಗಳನ್ನು ಪ್ರಯತ್ನಿಸಿ ನಾವಾಗಿಯೇ ನಷ್ಟವನ್ನು ತಂದೊಡ್ಡುಕೊಳ್ಳುವುದು ಸರಿಯಲ್ಲ.

Most Read Articles

Kannada
English summary
Can you unlock a car with a tennis ball What is the authenticity of the viral videos
Story first published: Friday, August 12, 2022, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X