ಪತ್ನಿಯ ಜೀವನ್ಮರಣದ ಹೋರಾಟದ ನಡುವೆಯೂ ದಿಟ್ಟ ನಿರ್ಧಾರ ಕೈಗೊಂಡ ಕೆನಡಾ ಪ್ರಧಾನಿ..!

ತಮ್ಮ ಹೆಂಡತಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಕೆನಡಾದ ಜನರನ್ನು ಮಹಾಮಾರಿ ವೈರಸ್‌ನಿಂದ ಕಾಪಾಡಲು ಕೆನಾಡದ ಜಸ್ಟಿನ್ ಟ್ರುಡೊರವರು ಕೈಗೊಂಡ ಕ್ರಮಗಳು ವಿಶ್ವದ ಗಮನ ಸೆಳೆದಿವೆ. ಕರೋನಾ ವೈರಸ್ ಇಡೀ ಜಗತ್ತನ್ನೇ ನರಳುವಂತೆ ಮಾಡಿದೆ. ವಿಶ್ವಾದ್ಯಂತ, ಕರೋನಾ ವೈರಸ್‌ನಿಂದಾಗಿ 10,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

2 ಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಚೀನಾ, ಇಟಲಿ, ಅಮೆರಿಕಾ, ಇಂಗ್ಲೆಂಡ್ ಕೋವಿಡ್ -19 ವೈರಸ್‌ನಿಂದಾಗಿ ಹೆಚ್ಚು ಪರಿಣಾಮವನ್ನು ಅನುಭವಿಸಿವೆ. ಕೋವಿಡ್ -19 ವೈರಸ್ ಮನುಷ್ಯರನ್ನು ಕೊಲ್ಲುವುದರ ಜೊತೆಗೆ ಪ್ರಪಂಚದ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತಿದೆ. ಅದರಲ್ಲೂ ಆಟೋಮೊಬೈಲ್ ಉದ್ಯಮವು ಹೆಚ್ಚು ತೊಂದರೆಯನ್ನು ಎದುರಿಸುತ್ತಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಕೋವಿಡ್ -19 ವೈರಸ್ ಚೀನಾದಲ್ಲಿ ವಾಹನ ಮಾರಾಟದ ಮೇಲೆ ಹೆಚ್ಚು ಪರಿಣಾಮವನ್ನು ಬೀರಿದೆ. ಚೀನಾ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳ ಮೇಲೂ ಪರಿಣಾಮ ಬೀರಿದೆ. ಇದರ ಜೊತೆಗೆ ವಿಮಾನಯಾನ ಉದ್ಯಮವು ಸಹ ತೊಂದರೆಗೊಳಗಾಗಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಕೋವಿಡ್ -19 ವೈರಸ್ ಹರಡದಂತೆ ತಡೆಯಲು, ಜನರು ಮನೆಗಳನ್ನು ಹೊರಬರದೇ, ಗುಂಪಿನಲ್ಲಿ ಸೇರದೇ ಇರಬೇಕೆಂದು ಸೂಚಿಸಲಾಗಿದೆ. ಪ್ರಯಾಣಕ್ಕೂ ನಿರ್ಬಂಧಗಳನ್ನು ಹೇರಲಾಗಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಕೆಲ ದೇಶಗಳು ವಿಮಾನಗಳನ್ನು ರದ್ದುಗೊಳಿಸಿವೆ. ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಇದರಿಂದಾಗಿ ವಾಹನ ಉತ್ಪಾದನೆಯು ಸ್ಥಗಿತಗೊಂಡಿದೆ. ಕೆನಡಾದಲ್ಲಿ ವಾಹನ ಉದ್ಯಮವು ಇನ್ನು ಮುಂದೆ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಕೆನಡಾದ ಆಟೋ ಮೊಬೈಲ್ ಉದ್ಯಮವು ಕೋವಿಡ್ -19 ವೈರಸ್ ಅನ್ನು ಎದುರಿಸಲು ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ನಿರ್ಧರಿಸಿದೆ. ವಿಶ್ವದ ಇತರ ಭಾಗಗಳಂತೆ, ಕೆನಡಾವು ಸಹ ಕರೋನಾ ವೈರಸ್‌ನಿಂದ ತತ್ತರಿಸಿದೆ. ಕೆನಡಾದಲ್ಲಿ 900 ಕ್ಕೂ ಹೆಚ್ಚು ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಇದುವರೆಗೂ 3 ಜನರು ಸಾವನ್ನಪ್ಪಿದ್ದಾರೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಸ್ವತಃ ಪ್ರಧಾನಿ ಜಸ್ಟಿನ್ ಟ್ರುಡೊರಾರವರ ಪತ್ನಿಯೇ ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ಜಸ್ಟಿನ್ ಟ್ರುಡೊರವರು ಒಟ್ಟಾವಾದಲ್ಲಿರುವ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಜಸ್ಟಿನ್ ಟ್ರುಡೊರವರು ತಮ್ಮ ಹೆಂಡತಿಯು ನರಳಾಡುತ್ತಿದ್ದರೂ ಕೋವಿಡ್ -19 ವೈರಸ್ ಅನ್ನು ನಿರ್ಮೂಲನೆ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಜಸ್ಟಿನ್ ಟ್ರುಡೊರವರು ತಮ್ಮ ಮನೆಯಲ್ಲಿ ಪತ್ರಕರ್ತರನ್ನು ಭೇಟಿ ಮಾಡುವುದು ವಾಡಿಕೆ. ಇತ್ತೀಚೆಗೆ ಪತ್ರಕರ್ತರನ್ನು ಭೇಟಿಯಾಗಿ ಕೆನಡಾದಲ್ಲಿ ವಾಸಿಸುವ ಜನರು ಮನೆ ಬಾಡಿಗೆ ಕೊಡುವುದು, ಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಿಸುವುದು ಅಥವಾ ಕೆಲಸ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದರು.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಇದರ ಮುಂದಿನ ಹಂತವಾಗಿ ವೈದ್ಯಕೀಯ ವಿಭಾಗಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಕೆನಡಾದ ಆಟೋ ಮೊಬೈಲ್ ಉದ್ಯಮವನ್ನು ಕೋವಿಡ್ -19 ವೈರಸ್ ನಿರ್ಮೂಲನೆ ಮಾಡಲು ಬಳಸಲು ನಿರ್ಧರಿಸಲಾಗಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಕೆನಡಾದ ವಾಹನ ತಯಾರಕ ಘಟಕಗಳಲ್ಲಿ ತಾತ್ಕಾಲಿಕವಾಗಿ ವೈದ್ಯಕೀಯ ಉಪಕರಣಗಳನ್ನು ತಯಾರಿಸುವುದು ಈ ಯೋಜನೆಗಳಲ್ಲಿ ಒಂದು. ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆನಡಾ ದೇಶಕ್ಕೆ ಸದ್ಯಕ್ಕೆ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಉಪಕರಣಗಳ ಅಗತ್ಯವಿದೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಹಗಲು ಇರುಳು ಎನ್ನದೇ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನಮ್ಮ ಬೆಂಬಲ ಬೇಕು. ಕೆನಡಾ ಸರ್ಕಾರವು ತಮ್ಮ ಉತ್ಪನ್ನಗಳನ್ನು ವಾಹನ ಭಾಗಗಳಿಂದ ವೈದ್ಯಕೀಯ ಸಾಧನಗಳಾಗಿ ಬದಲಿಸುವ ಕಂಪನಿಗಳಿಗೆ ಸಹಾಯ ಮಾಡಲಿದೆ ಎಂದು ಜಸ್ಟಿನ್ ಟ್ರುಡೊರವರು ಹೇಳಿದ್ದಾರೆ.

ಪತ್ನಿಯ ಜೀವನ್ಮರಣದ ಹೋರಾಟದ ನಡುವೆ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ..!

ಭಾರತದಲ್ಲಿಯೂ ಸಹ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕರೋನಾ ವೈರಸ್ ಹರಡದಂತೆ ತಡೆಯಲು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಭಾರತದ ಈ ಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

More from DriveSpark

Article Published On: Saturday, March 21, 2020, 18:09 [IST]
English summary
Canada automobile factories to make Covid 19 medical equipment. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+