ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ವಿಶ್ವದ ಅಗ್ರಗಣ್ಯ ನಾಯಕರಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ನಿತ್ಯ ಹಲವು ಕಾರ್ಯಕ್ರಮಗಳು, ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಅವರಿಗೆ ಭದ್ರತಾ ವ್ಯವಸ್ಥೆ ಕೂಡ ಅಷ್ಟೇ ಬಿಗಿಯಾಗಿರುತ್ತದೆ. ಅವರು ಪ್ರಯಾಣಿಸುವ ವಿಮಾನದಿಂದ ಹಿಡಿದು ಕಾರಿನವರೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ದೇಶದಲ್ಲಿ ಅವರು ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಆಯಾ ರಾಜ್ಯ ಸರ್ಕಾರ ಅವರ ಭದ್ರತೆಯನ್ನು ನೋಡಿಕೊಳ್ಳಬೇಕಾಗಿರುತ್ತದೆ. ಜೊತೆಗೆ ಕೇಂದ್ರದ ಎನ್‌ಎಸ್‌ಜಿ ತಂಡದ ರಕ್ಷಣೆಯು ಅವರಿಗಿರುತ್ತದೆ. ಅಂತೆಯೇ ಕಳೆದ ಶುಕ್ರವಾರ ಪ್ರಧಾನಿ ಮೋದಿಯವರು ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭ ಮತ್ತು ಅಣ್ಣಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಚೆನ್ನೈಗೆ ತೆರಳಿದ್ದರು.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಅಲ್ಲಿನ ರಸ್ತೆಗಳು ಹಾಗೂ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರಧಾನಿ ಮೋದಿ ಅವರು ಟೊಯೊಟಾ ಲ್ಯಾಂಡ್ ಕ್ರೂಸರ್ ಅನ್ನು ಬಳಸಿದ್ದರು. ಈ ಕಾರು ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಆರಂಭವಾಗಿದ್ದು, ಈ ಕಾರ್ಯಕ್ರಮಕ್ಕಾಗಿ ಮತ್ತು ಇಂದು ನಡೆಯಲಿರುವ ಅಣ್ಣಾ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕಾಗಿ ಪ್ರಧಾನಿ ಮೋದಿ ನಿನ್ನೆ (ಶುಕ್ರವಾರ) ಚೆನ್ನೈಗೆ ಆಗಮಿಸಿದ್ದರು. ವಿಮಾನದಲ್ಲಿ ಚೆನ್ನೈಗೆ ಬಂದ ಅವರು ತಮ್ಮ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಚೆನ್ನೈನಲ್ಲಿ ಪ್ರಯಾಣಿಸಿದರು.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಈ ವೇಳೆ ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದ ಕಾರು ಹಾಗೂ ಅವರಿಗೆ ಒದಗಿಸಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಕೇಳಿದರೆ ಎಂತವರು ಹುಬ್ಬೇರಿಸುವುದು ಖಚಿತ. ಭಾರತದ ಪ್ರಧಾನಿ ಯಾರೇ ಆಗಿದ್ದರೂ ಅವರಿಗೆ ಎನ್‌ಎಸ್‌ಜಿ ಕಮಾಂಡೋಗಳು ರಕ್ಷಣೆ ನೀಡುತ್ತಾರೆ. ದೇಶೀಯವಾಗಿರಲಿ ಅಥವಾ ವಿದೇಶದಲ್ಲಾಗಲಿ ಈ SG ಕಮಾಂಡೋಗಳೇ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾರೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಈ ಸಂದರ್ಭದಲ್ಲಿ ಅವರು ಪ್ರಧಾನಿಯ ಬಳಕೆಗೆ ವಾಹನಗಳನ್ನು ಕೂಡ ಆಯ್ಕೆ ಮಾಡುತ್ತಾರೆ. ಯಾವ ಕೆಲಸಕ್ಕಾಗಿ ಭೇಟಿ ನೀಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಅವರು ವಾಹನವನ್ನು ಆಯ್ಕೆ ಮಾಡುತ್ತಾರೆ. ಇದರ ಪ್ರಕಾರ ಚೆನ್ನೈಗೆ ಬಂದಾಗ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಚೆನ್ನೈನಾದ್ಯಂತ ಸಂಚರಿಸಿದ್ದಾರೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಈ ಕಾರಿಗೆ ಯಾವೆಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ ಎಂಬುದನ್ನು ಭದ್ರಾತಾ ದೃಷ್ಟಿಯಿಂದ ನಿಗೂಢವಾಗಿರಿಸಲಾಗಿದೆ. ಈ ಕಾರನ್ನು ಮಾರುಕಟ್ಟೆಯಿಂದ ಹೊರತಂದ ಬಳಿಕ ಹಲವು ಕಸ್ಟಮೈಜೇಷನ್ ಮಾಡಲಾಗಿದೆ. ಬುಲ್ಲೆಟ್‌ ಪ್ರೂಫ್ ಬಾಡಿ, ಬಾಂಬ್ ಡಿಟೆಕ್ಟರ್ ಹಾಗೂ ಬಾಂಬ್ ಬಿದ್ದರು ತಡೆದುಕೊಳ್ಳುವಂತೆ ಕಾರನ್ನು ಕಸ್ಟಮೈಜ್ ಮಾಡಲಾಗಿದೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಮಾರುಕಟ್ಟೆಯಲ್ಲಿನ ಈ ಲ್ಯಾಂಡ್ ಕ್ರೂಸರ್ ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ ಈ ಕಾರಿನಲ್ಲಿ 4.5 ಲೀಟರ್ ವಿ8 ಎಂಜಿನ್ ಅಳವಡಿಸಲಾಗಿದೆ. ಇದು 262 bhp ಪವರ್ ಮತ್ತು 650 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಆದರೆ ಪ್ರಧಾನಿ ಬಳಸಿದ ಕಾರು ಅದೇ ಎಂಜಿನ್ ಹೊಂದಿದೆಯೇ ಅಥವಾ ಎಂಜಿನ್ ಅನ್ನು ಸಹ ಮಾರ್ಪಡಿಸಲಾಗಿದೆಯೇ ಎಂಬ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಭಾರತದ ಪ್ರಧಾನಿಯ ಬಳಕೆಗೆ ಈ ಒಂದು ಕಾರು ಮಾತ್ರವಲ್ಲ, ಅವರು ಯಾವ ಉದ್ದೇಶಕ್ಕಾಗಿ ಎಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಆಧಾರದ ಮೇಲೆ ಅನೇಕ ಕಾರುಗಳನ್ನು ಬಳಸಲಾಗುತ್ತದೆ. ಅವರು ಮಹೀಂದ್ರಾ ಸ್ಕಾರ್ಪಿಯೊ, BMW 7 ಸಿರೀಸ್ 760L ಹೈ-ಸೆಕ್ಯುರಿಟಿ ಆವೃತ್ತಿ, 2010 ರೇಂಜ್ ರೋವರ್ HSE, ಟೊಯೊಟಾ ಲ್ಯಾಂಡ್ ಕ್ರೂಸರ್, ಟಾಟಾ ಸಫಾರಿ, ಟೊಯೊಟಾ ಫಾರ್ಚೂನರ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಪ್ರಧಾನಿ ಅವರ ಬೆಂಗಾವಲು ಪಡೆಯೊಂದಿಗೆ ಹಲವಾರು ಭದ್ರತಾ ಅಧಿಕಾರಿಗಳು ಕೂಡ ಇರುತ್ತಾರೆ, ಅವರು ಕೂಡ ಪ್ರತ್ಯೇಕ ಕಾರುಗಳಲ್ಲಿ ತೆರಳುತ್ತಾರೆ. ಅವರಿಗಾಗಿಯೇ ಪ್ರತ್ಯೇಕ ಕಾರುಗಳು ಇರುತ್ತವೆ. ಇದು ಪ್ರಧಾನಿಯ ಭದ್ರತೆಗಾಗಿ ಮತ್ತು ಅವರ ಬೆಂಗಾವಲು ಪಡೆಯ ಭಾಗವಾಗಿರುವ ಒಂದು ವ್ಯಾನ್ ಆಗಿದ್ದು, ಇದು ಜಾಮರ್ ಸೇರಿದಂತೆ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಪ್ರಧಾನಿಗೆ ಬೆದರಿಕೆಯಾದರೆ ತ್ವರಿತವಾಗಿ ಕ್ರಮಕೈಗೊಳ್ಳಲು ವ್ಯಾನ್ ಪ್ರತಿ ಕ್ಷಣವು ಅಲರ್ಟ್ ಆಗಿರುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರಧಾನಿ ಮೋದಿ ಅವರು ಬಳಸುತ್ತಿದ್ದ ಕಾರು ಒಂದೇ ಬೆಂಗಾವಲು ಪಡೆಯಲ್ಲಿ ಒಟ್ಟು 3 ಕಾರುಗಳು ಇರುತ್ತವೆ. ಪ್ರಧಾನಿ ಯಾವ ಕಾರಿನಲ್ಲಿ ಪ್ರಯಾಣಿಸುತ್ತಾರೆ ಎಂಬುದು ಕೊನೆಯ ಕ್ಷಣದಲ್ಲಿ ನಿರ್ಧಾರಿಸಲಾಗುತ್ತದೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಆ ಮಾಹಿತಿ ಸ್ವತಃ ಪ್ರಧಾನಿ ಮೋದಿಯವರಿಗೆ ಗೊತ್ತಿರುವುದಿಲ್ಲ. ಭದ್ರತಾ ಕಾರಣಗಳಿಂದಾಗಿ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಪ್ರಧಾನಿ ಬರದಿದ್ದರೂ ಉಳಿದ 2 ಕಾರುಗಳು ಅವರ ಬೆಂಗಾವಲು ಪಡೆಯಲ್ಲೇ ಇರುತ್ತವೆ. ಕೆಲವು ಅಸಹಜ ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಯಾವ ಕಾರಿನಲ್ಲಿದ್ದಾರೆ ಎಂಬ ಗೊಂದಲವನ್ನು ಸೃಷ್ಟಿಸಲು ಈ ಕಾರುಗಳನ್ನು ಬಳಸಲಾಗುತ್ತದೆ.

ಹತ್ತಿರಕ್ಕೂ ಬರುವಂತಿಲ್ಲ... ಪ್ರಧಾನಿ ಮೋದಿ ಕಾರಿನಲ್ಲಿವೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ 3 ಕಾರುಗಳು ಪ್ರಧಾನಿಯವರ ಸುರಕ್ಷತೆಗಾಗಿ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿವೆ. ಈ ಕಾರುಗಳು ಸಣ್ಣ ಆಕ್ರಮಣಕಾರಿ ರೈಫಲ್‌ಗಳಿಗೆ ಸಣ್ಣ ಲಾಂಚರ್‌ಗಳನ್ನು ಸಹ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಸಂಪೂರ್ಣ ಟ್ರೈನ್ ಆಗಿರುವ ಸಣ್ಣ ಸೈನ್ಯವೇ ಅವರೊಂದಿಗೆ ಇರುತ್ತದೆ.

Article Published On: Saturday, July 30, 2022, 17:34 [IST]
English summary
Cant even come close PM Modis car has advanced safety features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+