Cars Accident: 120 ಕಿ.ಮೀ ವೇಗದಲ್ಲಿ ಟಾಟಾ ನ್ಯಾನೋಗೆ ಡಿಕ್ಕಿ ಹೊಡೆದ ಹ್ಯುಂಡೈ i20... ಏನ್ ಗಟ್ಟಿರಿ!
ದೇಶದಲ್ಲಿ ಪ್ರತಿದಿನ ಒಂದಿಲ್ಲೊಂದು ಕಾರಣಗಳಿಗೆ ರಸ್ತೆ ಅಪಘಾತ ನಡೆಯುತ್ತಿರುತ್ತವೆ. ಇತ್ತೀಚೆಗೆ ಮಧ್ಯಪ್ರದೇಶದ ಹೆದ್ದಾರಿಯೊಂದರಲ್ಲಿ ಭೀಕರ ಅಪಘಾತ ನಡೆದಿದ್ದು, ಟಾಟಾ ನ್ಯಾನೋ ಕಾರಿಗೆ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಗುದ್ದಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದ್ದು, ಇಲ್ಲಿದೆ ಸಂಪೂರ್ಣ ವಿವರ.
ಪ್ರತೀಕ್ ಸಿಂಗ್ ಎಂಬುವವರೂ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಅಪಘಾತದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಇಂದೋರ್ ಹಾಗೂ ಉಜೈನಿ ಹೆದ್ದಾರಿಯಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ನಿರ್ದಿಷ್ಟ ಸ್ಥಳದ ಬಗ್ಗೆ ಖಚಿತ ಮಾಹಿತಿಯಿಲ್ಲ. ಹ್ಯುಂಡೈ ಐ20 ಕಾರು, 120 kmph ವೇಗದಲ್ಲಿ ರಸ್ತೆಯ ಇನ್ನೊಂದು ಬದಿಗೆ ಸಾಗುತ್ತಿದ್ದ ಟಾಟಾ ನ್ಯಾನೋಗೆ ಡಿಕ್ಕಿಯಾಗಿ ಆಕ್ಸಿಡೆಂಟ್ ಸಂಭವಿಸಿದೆ.

ಹೆದ್ದಾರಿಯಲ್ಲಿ ಹ್ಯುಂಡೈ ಐ20 ಶರವೇಗದಲ್ಲಿ ಇದ್ದರಿಂದ ಚಾಲಕನಿಗೆ ಕಾರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದರೆ, ಘಟನೆಯು ಟಾಟಾ ನ್ಯಾನೋ ಚಾಲಕ ಅಥವಾ ಹ್ಯುಂಡೈ ಚಾಲಕನ ತಪ್ಪಿನಿಂದ ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ. ಗ್ರಿಲ್, ಹೆಡ್‌ಲ್ಯಾಂಪ್ಸ್, ಬಾನೆಟ್ ಹಾಗೂ ರೇಡಿಯೇಟರ್ ಸೇರಿದಂತೆ ಹ್ಯುಂಡೈ ಕಾರಿನ ಮುಂಭಾಗ ಜಖಂಗೊಂಡಿದೆ. ನ್ಯಾನೋ ಕಾರಿನ ಸೈಡ್ ಹಾಗೂ ವೀಲ್ಸ್ ಗೆ ಹಾನಿಯಾಗಿದೆ.
ಇವರೆಡು ಕಾರುಗಳಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಮಟ್ಟಿಗೆ ಅಪಘಾತವಾದರೂ ಹ್ಯುಂಡೈ ಐ20, ಟಾಟಾ ನ್ಯಾನೋ ಕಾರಿನ ಇತರೆ ಯಾವ ಭಾಗಕ್ಕೂ ಡ್ಯಾಮೇಜ್ ಆಗಿಲ್ಲ. ವಿಡಿಯೋ ನೋಡಿದವರೂ ಹ್ಯುಂಡೈ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಅದಕ್ಕೆ ಹೆಚ್ಚಿನ ಹಾನಿಯಂತೆ ಕಾಣುತ್ತಿದೆ. ನ್ಯಾನೋ ಕೊಂಚವೇ ಜಖಂಗೊಂಡಿದ್ದು, ಎಷ್ಟು ಗಟ್ಟಿಯಾಗಿದೆ. ನ್ಯಾನೋ ಚಾಲಕ ಸುತ್ತಲು ನೋಡಿಕೊಂಡು ರಸ್ತೆಯ ಮತ್ತೊಂದು ಬದಿಗೆ ಸಾಗಬಹುದಿತ್ತು. ಹ್ಯುಂಡೈ ಚಾಲಕ ನಿಯಮಿತ ವೇಗದಲ್ಲಿ ಕಾರು ಓಡಿಸಿದ್ದರೆ ಅಪಘಾತ ನಡೆಯುತ್ತಿರಲಿಲ್ಲ ಎನ್ನುತ್ತಿದ್ದಾರೆ.
ಆಟೋಮೊಬೈಲ್ ದೈತ್ಯ ಟಾಟಾದ ಮಹತ್ವಾಕಾಂಕ್ಷೆಯ ಕಾರುಗಳಲ್ಲಿ 'ನ್ಯಾನೋ' ಒಂದಾಗಿತ್ತು. ಭಾರತದ ಕುಟುಂಬಗಳಿಗಾಗಿ 2008ರಲ್ಲಿ ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಯಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ನೀರಿಕ್ಷಿತ ಯಶಸ್ಸು ಪಡೆಯಲಿಲ್ಲ. ಕಳಪೆ ಮಾರಾಟ ವರದಿಯಿಂದ 2019ರಲ್ಲಿ ನ್ಯಾನೋವನ್ನು ಸ್ಥಗಿತಗೊಳಿಸಲಾಯಿತು. ಆದರೂ ದೇಶದ ರಸ್ತೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಂಡುಬರುತ್ತಿರುತ್ತದೆ.
ಹಲವು ತಿಂಗಳಿನಿಂದ ಸಾಕಷ್ಟು ಬಾರಿ ಈ ವಿಚಾರ ಕೇಳಿಬರುತ್ತಲೇ ಇದೆ. ಅದೇನೆಂದರೆ, ಟಾಟಾ ಕಂಪನಿಯು ನ್ಯಾನೋ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂಬುದು. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮೂಲಗಳ ಪ್ರಕಾರ, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಾಗಿ ಮಾರುಕಟ್ಟೆಗೆ ಬಂದರೆ, ಸಂಪೂರ್ಣ ಚಾರ್ಜ್‌ನಲ್ಲಿ 200 ಕಿ.ಮೀ ರೇಂಜ್ ನೀಡಲಿದೆಯಂತೆ.
ಹ್ಯುಂಡೈಯ 'ಐ20' ಹ್ಯಾಚ್‌ಬ್ಯಾಕ್ ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಕಾರು, 6 ಏರ್‌ಬ್ಯಾಗ್ಸ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ರಿವರ್ಸ್ ಕ್ಯಾಮೆರಾ ಹಾಗೂ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ.
ಇನ್ನು, ರಸ್ತೆಯಲ್ಲಿ ಸಂಚರಿಸುವಾಗ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಅಪಘಾತಗಳನ್ನು ತಪ್ಪಿಸಬಹುದು. ಪ್ರಮುಖ ವೇಗದ ಮಿತಿ ಸೇರಿದಂತೆ ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಕಾರುಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಹಾಕಬೇಕು. ಮದ್ಯಪಾನ ಸೇವಿಸಬಾರದು. ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಬಾರದು.


Click it and Unblock the Notifications