ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌‌ರವರ ಸಾವು ಬಾಲಿವುಡ್ ಮಾತ್ರವಲ್ಲದೇ ಇಡೀ ಭಾರತವನ್ನು ತಲ್ಲಣಗೊಳಿಸಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಜೀವನಚರಿತ್ರೆ ಆಧಾರಿತ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್, ಧೋನಿ ಪಾತ್ರದಲ್ಲಿ ನಟಿಸಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಧೋನಿಯವರ ಎಲ್ಲಾ ಹಾವಭಾವಗಳನ್ನು ತೆರೆ ಮೇಲೆ ಅದ್ಭುತವಾಗಿ ಮೂಡಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಚಿತ್ರವು ಸುಶಾಂತ್ ಸಿಂಗ್ ರಜಪೂತ್ ಅವರ ನಟನಾ ಸಾಮರ್ಥ್ಯಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ. ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ಈ ಯುವ ನಟ ಜೂನ್ 14ರಂದು ಅನಿರೀಕ್ಷಿತವಾಗಿ ನಿಧನರಾದರು.

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಬಾಲಿವುಡ್‌ನ ರಾಜಕೀಯದಿಂದಾಗಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಆಘಾತ ಮೂಡಿಸುವಂತಿವೆ. ಮತ್ತೊಂದೆಡೆ, ಅವರ ಅಭಿಮಾನಿಗಳು ಸುಶಾಂತ್ ಸಿಂಗ್ ರಜಪೂತ್‌ರವರ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. 2006ರಲ್ಲಿ ತೆಗೆದ ಫೋಟೋವೊಂದು ಈಗ ವೈರಲ್ ಆಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಈ ಫೋಟೋದಲ್ಲಿ ಸುಶಾಂತ್ ಹೋಂಡಾ ಕಂಪನಿಯ ಹಳದಿ ಬಣ್ಣದ ಸ್ಪೋರ್ಟ್ಸ್ ಬೈಕ್‌ ಮೇಲೆ ಕುಳಿತಿದ್ದಾರೆ. ಕೈಯಲ್ಲಿ ಹೆಲ್ಮೆಟ್ ಹಿಡಿದು ಕೊಂಡಿದ್ದಾರೆ. ಸೆಲೆಬ್ರಿಟಿಯಾದರೂ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರು ಎಂಬುದನ್ನು ಈ ಫೋಟೋ ಮೂಲಕ ಕಾಣಬಹುದು.

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಸುಶಾಂತ್ ಸಿಂಗ್ ರಜಪೂತ್ ಹಲವು ಬಾರಿ ಅವರು ಈ ಸ್ಪೋರ್ಟ್ಸ್ ಬೈಕಿನಲ್ಲಿ ಕಾಣಿಸಿಕೊಂಡಿದ್ದರು. ಈಗಿನ ಯುವಕರು ಕಾಲೇಜಿನಲ್ಲಿರುವಾಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕುಗಳನ್ನು ಚಾಲನೆ ಮಾಡುತ್ತಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಪೋಷಕರು ತಮ್ಮ ಮಕ್ಕಳಿಗಾಗಿ ಸ್ಪೋರ್ಟ್ಸ್ ಬೈಕ್‌ಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸುತ್ತಾರೆ. ಆದರೆ ಸುಶಾಂತ್ ಸಿಂಗ್ ರಜಪೂತ್, ತಮ್ಮ ಕಾಲೇಜು ದಿನಗಳಲ್ಲಿಯೇ ತಾವೇ ಸಂಪಾದನೆ ಮಾಡುವ ಮೂಲಕ ಹೋಂಡಾದ ಈ ಸ್ಪೋರ್ಟ್ಸ್ ಬೈಕ್ ಖರೀದಿಸಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಇದು ಸುಶಾಂತ್ ಸಿಂಗ್ ರಜಪೂತ್ ತಮ್ಮ ಪರಿಶ್ರಮದ ಮೂಲಕ ಖರೀದಿಸಿದ ಮೊದಲ ಬೈಕ್. ಕಾಲೇಜು ದಿನಗಳಲ್ಲಿ, ಸುಶಾಂತ್ ಸಿಂಗ್ ರಜಪೂತ್ ಇತರ ವಿದ್ಯಾರ್ಥಿಗಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಟ್ಯೂಷನ್ ಮೂಲಕ ಗಳಿಸಿದ ಹಣದಿಂದ ಸುಶಾಂತ್ ಸಿಂಗ್ ರಜಪೂತ್ ಈ ಬೈಕ್ ಖರೀದಿಸಿದ್ದರು. 2016ರಲ್ಲಿ ಅವರು ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ಕೊಟ್ಟು ಖರೀದಿಸಿದ ಮೊದಲ ಬೈಕ್ ಇದು, ಕೆಲ ಸಂಗತಿಗಳು ನಿಮಗೆ ಖುಷಿ ನೀಡುತ್ತವೆ ಎಂದು ಹೇಳಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಈ ಚಿತ್ರವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಈ ಬೈಕ್ ಜೊತೆಗೆ ಸುಶಾಂತ್ ಸಿಂಗ್ ರಜಪೂತ್ ಬಿಎಂಡಬ್ಲ್ಯು ಕೆ 1300 ಆರ್ ಬೈಕ್ ಸಹ ಹೊಂದಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನಟ ಸುಶಾಂತ್ ಸಿಂಗ್ ರಜಪೂತ್ ಬಳಿಯಿದ್ದ ಬೈಕ್ ಹಾಗೂ ಕಾರುಗಳಿವು

ಈ ಬೈಕ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ, ಸುಶಾಂತ್ ಸಿಂಗ್ ರಜಪೂತ್ ಜೊತೆ ಕುಳಿತಿರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಸುಶಾಂತ್ ಸಿಂಗ್ ರಜಪೂತ್ ರೇಂಜ್ ರೋವರ್ ಹಾಗೂ ಮಸೆರಾಟಿ ಕ್ವಾಟ್ರೋಪೋರ್ಟ್‌ನಂತಹ ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದರು.

Most Read Articles

Kannada
English summary
Sushant Singh Rajput's car and bike collection. Read in Kannada.
Story first published: Monday, June 22, 2020, 9:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X