Just In
Don't Miss!
- Movies
Prakruti K Prasad:'ಬೆಟ್ಟದ ಹೂ'ನಲ್ಲಿ ಮಾಲಿನಿ ಧರಿಸಿದ್ದ ಸೀರೆಗಳು ಹರಾಜು.. ಬೇಕಿದ್ರೆ ಹೀಗೆ ಸಂಪರ್ಕಿಸಿ!
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹ್ಯಾಪಿ ಬರ್ತ್ ಡೇ ವಿರಾಟ್ ಕೊಹ್ಲಿ: ದುಬಾರಿ ಆಡಿ ನಿಂದ ರೆನಾಲ್ಟ್ ವರೆಗೆ ಕೊಹ್ಲಿಯ ಅದ್ಬುತ ಕಾರ್ ಕಲೆಕ್ಷನ್
ಭಾರತದ ಕ್ರಿಕೆಟ್ ಆಟಗಾರ ಕಿಂಗ್ ಕೊಹ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸದ್ಯಕ್ಕೆ ವಿಶ್ವ ಕ್ರಿಕೆಟ್ ರಂಗದಲ್ಲಿ ಕೊಹ್ಲಿಯಷ್ಟು ಜನಪ್ರಿಯತೆ ಹೊಂದಿರುವ ಆಟಗಾರ ಬೇರೆ ಯಾರೂ ಇಲ್ಲವೆಂದರೆ ಅದು ಅತಿಶಯೋಕ್ತಿಯಾಗಲಾರದು. ಕ್ರಿಕೆಟ್‌ನಷ್ಟೇ ಕೊಹ್ಲಿ ಇಷ್ಟಪಡುವ ಇನ್ನೊಂದು ವಿಷಯವೆಂಧರೆ ಅದು ಕಾರು. ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ಗಮನಿಸಿದರೆ ಸಾಕು, ಅವರಿಗೆ ಕಾರಿನ ಮೇಲಿರುವ ಪ್ರೀತಿ ಏನು ಎಂಬುದು ನಮಗೆ ತಿಳಿಯುತ್ತದೆ.

ಇನ್ನು ಕೊಹ್ಲಿ ಖುದ್ದಾಗಿ ಆಡಿ ಕಾರ್ ಕಂಪೆನಿಯ ರಾಯಭಾರಿಯೂ ಸಹ ಹೌದು. ಹೀಗಾಗಿಯ ಅವರಿಗೆ ಒಂದಷ್ಟು ದುಬಾರಿ ಕಾರುಗಳು ಉಡುಗೊರೆಯಾಗಿ ಸಿಕ್ಕರೆ, ಇನ್ನೊಂದಷ್ಟು ಕಾರುಗಳನ್ನು ಅವರೇ ಖರೀದಿಸಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ನೆಲೆಯಾಗಿರುವ ವಿರಾಟ್ ತಮ್ಮ ದೆಹಲಿಯಲ್ಲಿರುವ ಮನೆಯಲ್ಲಿ ಸಾಕಷ್ಟು ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿಯ ಬಳಿ ಕೇವಲ ದುಬಾರಿ ಕಾರುಗಳು ಮಾತ್ರವಲ್ಲದೆ, ಡಸ್ಟರ್, ಫಾರ್ಚ್ಯುನರ್ ರೀತಿಯ ಕಾರುಗಳು ಸಹ ಇದೆ. ವಿರಾಟ್ ಕೊಹ್ಲಿ ಬಳಿ ಯಾವೆಲ್ಲಾ ಕಾರುಗಳಿವೆ ಎಂಬುದರ ಒಂದು ಸಣ್ಣ ಝಲಕ್ ಇಲ್ಲಿದೆ.

Audi R8 LMX
Audi R8 LMX ಎಂಬುದು ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್‌ಗಳಲ್ಲಿಯೇ ಅತ್ಯಂತ ವೇಗದ ಕಾರು. ಈ ಸೂಪರ್ ಕಾರ್‌ನ ಬೆಲೆ ಬರೋಬ್ಬರಿ 2.97 ಕೋಟಿ ರೂಪಾಯಿಗಳು. ಇನ್ನು ಈ ಕಾರ್‌ನ ಇಂಜಿನ್ ಬಗ್ಗೆ ನೋಡುವುದಾದರೆ, 5.2 ಲೀಟರ್ V10 ಇಂಜಿನ್‌ನೊಂದಿಗೆ ಬರುತ್ತದೆ. ಇದರಲ್ಲಿ ಆಲ್ ವ್ಹೀಲ್ ಡ್ರೈವ್ ವ್ಯವಸ್ಥೆ ಇರುವುದರಿಂದ ಈ ಗಾಡಿಯ ಇಂಜಿನ್ ಸಾಮರ್ಥ್ಯವು ಕಾರಿನ ಎಲ್ಲಾ ಚಕ್ರಗಳಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಹಾಗಾಗಿ ಈ ಕಾರಿನ ಸವಾರಿಯ ಅನುಭವವನ್ನು ವರ್ಣಿಸಲಸಾಧ್ಯ.
ಈ ಕಾರು ವಿಶ್ವದಲ್ಲೇ ಕೇವಲ 99 ಯೂನಿಟ್ ಮಾತ್ರ ಇದೆ. ಅದರಲ್ಲಿ ಒಂದು ಕಾರು ನಮ್ಮ ವಿರಾಟ್ ಬಳಿ ಇದ್ದು, ಇಡೀ ದಕ್ಷಿಣ ಏಷಿಯಾದಲ್ಲೇ ಇರುವಂತಹ ಏಕೈಕ Audi R8 LMX ಕಾರು ಇದಾಗಿದೆ. ಈ ಕಾರಿನ ವೇದವಿ ಗಂಟೆಗೆ ಬರೋಬ್ಬರಿ 320 ಕಿ.ಮೀ. ೦-೧೦೦ ವೇಗವನ್ನು ಇದು ಕೇವಲ 3.4 ಸೆಕೆಂಡ್‌ಗಳಲ್ಲಿ ಇದು ತಲುಪುತ್ತದೆ. ಇನ್ನು ಈ ಕಾರಿನ ಇನ್ನೊಂದು ವಿಶೇಷತೆಯೆಂದರೆ ಇದರ ಹೆಡ್ ಲ್ಯಾಂಪ್‌ಗಳು. ಕಾರು 60 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಚಲಿಸಲು ಪ್ರಾರಂಭಿಸುವಾಗ ತಾನಾಗಿಯೇ ಹೆಡ್‌ಲ್ಯಾಂಪ್‌ಗಳು ಉರಿಯಲು ಪ್ರಾರಂಭವಾಗುತ್ತದೆ.

A8L W12 Quattro
ವಿರಾಟ್ ಕೊಹ್ಲಿ ಬಳಿ ಇರುವ ಇನ್ನೊಂದು ಆಕರ್ಷಕ ಕಾರ್ ಎಂದರೆ ಅದು ಆಡಿ A8L W12 . 6.3 litre W12 ಎಂಜಿನ್‌ನೊಂದಿಗೆ ಬರುವ ಈ ಕಾರಿನ ಬೆಲೆ ಸುಮಾರು 1.98 ಕೋಟಿ ರುಪಾಯಿಗಳು. ಈ ಕಾರಿನ ಬಲಿಷ್ಟ ಎಂಜಿನ್ ೮ ಸ್ಪೀಡ್ ಗೇರ್‌ಬಾಕ್ಸ್, ಡ್ಯುಯಲ್ ಕ್ಲಚ್, ಎಸ್-ಟ್ರಾನಿಕ್ ವ್ಯವಸ್ಥೆಯನ್ನು ಹೊಂದಿದೆ. ಈ ಗೇರ್‌ಬಾಕ್ಸ್‌ನ ಎಸ್-ಟ್ರಾನಿಕ್ ತಂತ್ರಜ್ಞಾನವು 6.3 ಲೀಟರ್ ಎಂಜಿನ್‌ನಿಂದ ಬರುವ 494 ಬಿಹೆಚ್‌ಪಿ ಪವರನ್ನು ಕಾರಿನ ಎಲ್ಲಾ ಚಕ್ರಗಳಿಗೂ ಸಮಾನವಾಗಿ ಹಂಚುತ್ತದೆ. ನಿಜಕ್ಕೂ ಈ ಕಾರು ವಿರಾಟ್ ಕೊಹ್ಲಿ ಕಾರ್ ಕಲೆಕ್ಷನ್‌ಗಳಲ್ಲೇ ಇರುವ ಅತ್ಯುತ್ತಮ ಕಾರಾಗಿದೆ.

Audi Q7
ಕಿಂಗ್ ಕೊಹ್ಲಿ ಬಳಿ ಇರುವ ಮತ್ತೊಂದು ಲಕ್ಷುರಿಯಸ್ ಕಾರೆಂದರೆ ಅದು ಆಡಿ ಕ್ಯೂ 7. ಭಾರತದಲ್ಲಂತೂ ಈ ಕಾರು ತುಂಬಾನೇ ಪ್ರಸಿದ್ಧಿ ಪಡೆದಿದೆ. 3.0 ಲೀಟರ್ V6 ಡೀಸೆಲ್ ಎಂಜಿನ್‌ನೊಂದಿಗೆ ಬರುವ Audi Q7 ಕಾರಿನ ಬೆಲೆ ಭಾರತದಲ್ಲಿ 80.95 ಲಕ್ಷ ರುಪಾಯಿಗಳು.

ಆಡಿ S6
ಆಡಿ ಎಸ್6 ವಿರಾಟ್ ಕೊಹ್ಲಿ ಬಳಿಯಿರುವ ಮತ್ತೊಂದು ಆಡಿ ಕಂಪೆನಿಯ ಕಾರು. ಇದು ನಿಜಕ್ಕೂ ಹೈ ಪರ್ಫಾರ್ಮೆನ್ಸ್ ಕಾರು ಎಂಬುದು ಇದರ ಪವರ್ ಫಿಗರ್ಸ್‌ನಿಂದ ತಿಳಿಯುತ್ತದೆ. 4 ಲೀಟರ್ V8 ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಈ ಕಾರು, ಬರೋಬ್ಬರಿ 420 ಬಿಹೆಚ್‌ಪಿ ಪವರ್ ಹಾಗೂ 550 ಎನ್‌ಎಮ್ ಟಾರ್ಕನ್ನು ಉತ್ಪಾದಿಸುತ್ತದೆ. 7 ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುವ ಈ ಕಾರಿನ ಬೆಲೆ 95.25 ಲಕ್ಷ ರುಪಾಯಿಗಳು.

Range Rover Vogue
ರೇಂಜ್ ರೋವರ್ ವೋಗ್, ವಿರಾಟ್ ಕೊಹ್ಲಿ ಬಳಿ ಇರುವ ಮತ್ತೊಂದು ಐಷಾರಾಮಿ ಕಾರು. 2.27 ಕೋಟಿ ಬೆಲೆಬಾಳುವ ಈ ಕಾರು, 4.4 ಲೀಟರ್ ಎಸ್‌ಡಿವಿ೮ ಪೆಟ್ರೋಲ್ ಎಂಜಿನ್‌ನನ್ನು ಹೊಂದಿದೆ. 4.4 ಲೀಟರ್ ಶಕ್ತಿಶಾಲಿ ಎಂಜಿನ್ ಸಹಾಯದಿಂದ ಈ ಕಾರು, ಸುಮಾರು 335 ಬಿಹೆಚ್‌ಪಿ ಪವರನ್ನು ಉತ್ಪಾದಿಸುತ್ತದೆ. ೦-೧೦೦ ಕಿ.ಮೀ ವೇಗವನ್ನು ತಲುಪಲು ಕೇವಲ 6.9 ಸೆಕೆಂಡ್‌ಗಳನ್ನು ತೆಗೆದುಕೊಳ್ಳುವ ಈ ಕಾರು, 8 ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಹೊಂದಿದೆ.

Toyota Fortuner
ವಿರಾಟ್ ಕೊಹ್ಲಿ ಗ್ಯಾರೇಜ್‌ನಲ್ಲಿ ಕೇವಲ ಆಡಿ, ರೇಂಜ್ ರೋವರ್ ಮಾತ್ರವಲ್ಲದೇ ಫಾರ್ಚ್ಯೂನರ್ ಸಹ ಇದೆ. ಭಾರತದಲ್ಲಿ ಪ್ರಸಿದ್ಧಿಯಲ್ಲಿರುವ ಕಾರುಗಳಲ್ಲಿ ಇದೂ ಸಹ ಒಂದು. ಇದು ಕೊಹ್ಲಿಯವರಿಗೆ ಟೊಯೋಟಾ ಕಿರ್ಲೋಸ್ಕರ್ ಇಂಡಿಯಾ ನೀಡಿದ ಉಡುಗೊರೆಯಾಗಿದೆ. 2.7 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಸುಮಾರು 164 ಬಿಹೆಚ್‌ಪಿ ಪವರನ್ನು ಉತ್ಪಾದಿಸುತ್ತದೆ.

Renault Duster
ವಿರಾಟ್ ಕೊಹ್ಲಿ ಗ್ಯಾರೇಜ್ ನಲ್ಲಿರುವ ಕಾರ್ ಕಲೆಕ್ಷನ್‌ನ ಅತ್ಯಂತ ಕಡಿಮೆ ಬೆಲೆಯ ಕಾರು Renault Duster . ಡಸ್ಟರ್‌ನ ಟಾಪ್ ಎಂಡ್ ಮಾದರಿಯ ಕಾರು ಇದಾಗಿದ್ದು, ಭಾರತ ಮತ್ತು ಶ್ರೀಲಂಕಾ ನಡುವೆ 2012 ರಲ್ಲಿ ನಡೆದ ಭರ್ಜರಿ ಪ್ರದರ್ಶನಕ್ಕೆ ಮ್ಯಾನ್ ಆಫ್ ದಿ ಸೀರೀಸ್ ಆಗಿ ಈ ಕಾರನ್ನು ಪಡೆದಿದ್ದರು.