ಗ್ಯಾಲರಿಗೆ ಹಾರಿದ ರೇಸ್ ಕಾರು; ತಪ್ಪಿದ ಭಾರಿ ದುರಂತ
ರೇಸ್ ಟ್ರ್ಯಾಕ್‌ನಲ್ಲಿ ರುಯಿಂ ರುಯಿಂ ಶಬ್ದದೊಂದಿಗೆ ಶರವೇಗದಲ್ಲಿ ಧಾವಿಸುವ ರೇಸಿಂಗ್ ಕಾರುಗಳನ್ನು ನಾವು ಟಿ.ವಿಗಳಲ್ಲಿ ನೋಡಿರುತ್ತೇವೆ. ಅಂತಹುದೇ ಒಂದು ರೇಸ್ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ರೇಸ್ ಕಾರೊಂದು ಗ್ಯಾಲರಿಗೆ ಬಿದ್ದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 30ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಅಮೆರಿಕದ ಫ್ಲೋರಿಡಾದ ಡೇಟೋನಾ ಅಂತರಾಷ್ಟ್ರೀಯ ಸ್ಪೀಡ್‌ವೇದಲ್ಲಿ (Daytona International Speedway) ಸಾಗುತ್ತಿರುವ ನಾಸ್ಕರ್ (NASCAR) ರೇಸ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಶನಿವಾರ ನಡೆದ ಮೊದಲ ಸುತ್ತಿನ ರೇಸ್ ಸಂದರ್ಭದಲ್ಲಿ ಚಾಲಕ ಕೈಲೆ ಲಾರ್ಸನ್ ನಿಯಂತ್ರಣ ತಪ್ಪಿದ ಕಾರು ಅಭಿಮಾನಿಗಳು ನೆರೆದಿದ್ದ ಗ್ಯಾಲರಿಗೆ ನುಗ್ಗಿತ್ತು. ಘಟನೆಯಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ.
ನಿಜಕ್ಕೂ ಅಲ್ಲಿ ಏನು ನಡೆದಿತ್ತು? ಫೋಟೋ ಫೀಚರ್ ತಿರುವುತ್ತಾ ಹೆಚ್ಚಿನ ಮಾಹಿತಿ ಪಡೆಯಿರಿ...

ರಾಷ್ಟ್ರವ್ಯಾಪಿ ನಾಸ್ಕರ್ ರೇಸ್‌ನಲ್ಲಿ ಈ ದುರಂತ ಸಂಭವಿಸಿದ್ದು, ಒಟ್ಟು 10 ರೇಸ್ ಕಾರುಗಳು ಅಪಘಾತಕ್ಕೀಡಾಗಿದ್ದವು. ರೇಸ್‌ನ ಅಂತಿಮ ಸುತ್ತಿನ ವೇಳೆ ರೇಗನ್ ಸ್ಮಿತ್ ಮುನ್ನುಗ್ಗಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಪರಸ್ಪರ ಢಿಕ್ಕಿಯಾಗಿ ಆಗಿ ಲಾರ್ಸನ್ ಕಾರು ಗ್ಯಾಲರಿಗೆ ಚಿಮ್ಮಿತ್ತು.

ರೇಸ್ ಕಾರಿನ ಬಿಡಿಭಾಗಗಳು ಪೀಸ್ ಪೀಸ್ ಆಗಿ ಪ್ರೇಕ್ಷಕರ ಮೇಲೆ ಬಿದ್ದಿದ್ದರಿಂದ ಗಾಯಾಳುಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಘಟನೆಯಲ್ಲಿ ಒಬ್ಬ ಚಾಲಕ ಕೂಡಾ ಗಾಯಾಳುವಾಗಿದ್ದಾರೆ.

ಕಾರು ಢಿಕ್ಕಿಯಾದ ತಕ್ಷಣ ಬೆಂಕಿ ಹೊತ್ತಿಕೊಂಡಿತು. ಈ ಎಲ್ಲ ಘಟನೆ ಕೆಲವೇ ಸೆಕೆಂಡುಗಳ ವ್ಯತ್ಯಾಸದಲ್ಲಿ ಆಗಿ ಹೋಗಿದ್ದರಿಂದ ಅಭಿಮಾನಿಗಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವಲ್ಲಿ ಎಡವಿದ್ದರು.

ಹಾಗಿದ್ದರೂ ರೇಸ್ ಟ್ರ್ಯಾಕ್ ಸರಿಪಡಿಸಿರುವ ಸಿಬ್ಬಂದಿಗಳು ಭಾನುವಾರದಿಂದಲೇ ರೇಸ್ ಪುನರಾರಂಭಗೊಳಿಸಲು ನೆರವಾಗಿದ್ದಾರೆ.

ಈ ಮಧ್ಯೆ ರೇಸಿಂಗ್ ಟ್ರ್ಯಾಕ್ ಹಾಗೂ ಸಮೀಪದಲ್ಲಿ ಹೆಚ್ಚಿನ ಸುರಕ್ಷಾ ಮಾನದಂಡ ಅನುಸರಿಸುವಂತೆ ಕೂಗು ಕೇಳಿಬಂದಿದೆ.

ಗ್ಯಾಲರಿಗೆ ಹಾರಿದ ರೇಸ್ ಕಾರು; ತಪ್ಪಿದ ಭಾರಿ ದುರಂತ

ಗ್ಯಾಲರಿಗೆ ಹಾರಿದ ರೇಸ್ ಕಾರು; ತಪ್ಪಿದ ಭಾರಿ ದುರಂತ

ಗ್ಯಾಲರಿಗೆ ಹಾರಿದ ರೇಸ್ ಕಾರು; ತಪ್ಪಿದ ಭಾರಿ ದುರಂತ

ಗ್ಯಾಲರಿಗೆ ಹಾರಿದ ರೇಸ್ ಕಾರು; ತಪ್ಪಿದ ಭಾರಿ ದುರಂತ



Click it and Unblock the Notifications








