ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಕಾರೊಂದನ್ನು ತಡೆದಿದ್ದಾರೆ. ಕಾರನ್ನು ನಿಲ್ಲಿಸುವ ಬದಲು ಕಾರು ಚಾಲಕ ತಡೆಯಲು ಬಂದ ಪೊಲೀಸ್ ಪೇದೆಗೆ ಗುದ್ದಿದ್ದಾನೆ. ಆ ಪೊಲೀಸ್ ಪೇದೆ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಆದರೂ ಕಾರು ಚಾಲಕ ಕಾರನ್ನು ನಿಲ್ಲಿಸದೇ ಚಾಲನೆ ಮಾಡಿಕೊಂಡು ಸಾಗಿದ್ದಾನೆ. ಕೆಲ ಬೈಕ್ ಚಾಲಕರು ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಬಾನೆಟ್ ಮೇಲಿದ್ದ ಪೊಲೀಸ್ ಪೇದೆಯನ್ನು ರಕ್ಷಿಸಿದ್ದಾರೆ. ಫೇಸ್ ಮಾಸ್ಕ್ ಧರಿಸದೆ ಕಾರು ಚಾಲನೆ ಮಾಡುತ್ತಿದ್ದ ಕಾರನ್ನು ತಡೆದಾಗ ಈ ಘಟನೆ ನಡೆದಿದೆ. ಕಾರು ಚಾಲಕನು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾನೆ.

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಇದರಿಂದಾಗಿ ಆ ಪೊಲೀಸ್ ಪೇದೆ ಕಾರಿನ ಬಾನೆಟ್‌ ಮೇಲೆ ಬಿದ್ದಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸಲಿಲ್ಲ. ಬದಲಿಗೆ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಮುಂದೆ ಸಾಗಿದ್ದಾನೆ. ಈ ಸಂಪೂರ್ಣ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಕೆಲವು ಬೈಕ್ ಸವಾರರು ಕಾರನ್ನು ತಡೆದು ಪೊಲೀಸ್ ಪೇದೆಯನ್ನು ರಕ್ಷಿಸಿದ್ದಾರೆ. ಕಾರನ್ನು ನಿಲ್ಲಿಸಿದ ನಂತರ ಚಾಲಕನನ್ನು ಬಂಧಿಸಲಾಗಿದೆ ಎಂದು ವರದಿಗಳಾಗಿವೆ.

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಪೊಲೀಸರಿಗೆ ಹಾನಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಬಗ್ಗೆ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ಪೇದೆ ಕಾಲಿಗೆ ಗಾಯಗಳಾಗಿವೆ. ಪಿಂಪ್ರಿ-ಚಿಂಚ್‌ವಾಡ್ ಪೊಲೀಸರ ಪ್ರಕಾರ, ಘಟನೆಯ ನಡೆದಾಗ ಈ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದ್ದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ಅವರು ಫೇಸ್ ಮಾಸ್ಕ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದವರನ್ನು ತಪಾಸಣೆ ನಡೆಸುತ್ತಿದ್ದರು. ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಕರ್ತವ್ಯ ನಿರತ ಪೊಲೀಸರಿಗೆ ಗಾಯ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 307, 353, 323, 279, 24 (ಎ) ಹಾಗೂ 177ರಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಕ್ಕಿಬಿದ್ದ ಕಾರು ಚಾಲಕನನ್ನು 49 ವರ್ಷದ ಯುವರಾಜ್ ಹನುವಾಟೆ ಎಂದು ಗುರುತಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಕಾರು ಚಾಲಕ

ವಾಹನ ತಪಾಸಣೆ ವೇಳೆಯಲ್ಲಿ ಸಂಚಾರಿ ಪೊಲೀಸರಿಗೆ ಸಹಕರಿಸದೇ ಇರುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ತನಿಖೆ ವೇಳೆಯಲ್ಲಿ ತಪ್ಪಿಸಿಕೊಳ್ಳುವುದು ಅಥವಾ ಪೊಲೀಸರಿಗೆ ಯಾವುದೇ ಹಾನಿ ಮಾಡುವುದು ಸಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಶಿಕ್ಷೆ ನೀಡಲು ಮೋಟಾರು ವಾಹನ ಕಾಯ್ದೆ 2019 (ತಿದ್ದುಪಡಿ) ಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

Most Read Articles

Kannada
English summary
Car driver carries traffic police on car bonnet during vehicle check up. Read in Kannada.
Story first published: Friday, November 6, 2020, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X