ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಪೊಲೀಸರು ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ನಡೆಸುವಾಗ ವಿಭಿನ್ನ ಜನರನ್ನು ಭೇಟಿಯಾಗುತ್ತಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್'ನ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಿಯಾ ಕಾರೊಂದನ್ನು ತಡೆದು ನಿಲ್ಲಿಸಿದ್ದರು.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಆ ಕಾರಿನ ರೂಫ್ ಮೇಲೆ ಹತ್ತು ಸೈಕಲ್‌ಗಳನ್ನು ಅಳವಡಿಸಲಾಗಿತ್ತು. ಆ ಕಾರಿನ ಚಾಲಕ ಪರವಾನಗಿ ಹೊಂದಿದ್ದ. ಆದರೆ ಕಾರಿನ ರೂಫ್ ಮೇಲೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸರಕುಗಳನ್ನು ಸಾಗಿಸಿದ ಕಾರಣಕ್ಕೆ ಆತನ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಈಗ ಅಮೆರಿಕಾ ಪೊಲೀಸರು ಸಹ ವಿಚಿತ್ರ ಸನ್ನಿವೇಶವನ್ನು ಎದುರಿಸಿದ್ದಾರೆ. ಕ್ಯಾಲಿಫೋರ್ನಿಯಾ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟೊಯೊಟಾ ಪ್ರಿಯಸ್ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಆ ಕಾರಿನ ಬಾನೆಟ್‌ ಮೇಲೆ ಸ್ಯಾಟಲೈಟ್ ಡಿಶ್ ಅಳವಡಿಸಿದ್ದ ಕಾರಣ ಪೊಲೀಸರು ಕಾರ್ ಅನ್ನು ತಡೆದಿದ್ದಾರೆ. ಪೊಲೀಸರು ಆ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಈ ರೀತಿ ಕಾರಿನ ಬಾನೆಟ್ ಮೇಲೆ ಸ್ಯಾಟಲೈಟ್ ಡಿಶ್ ಅಳವಡಿಸುವುದು ಕಾನೂನುಬಾಹಿರವೆಂದು ಅವರು ಹೇಳಿದ್ದಾರೆ. ಕಾರಿನಲ್ಲಿ ಸ್ಯಾಟಲೈಟ್ ಡಿಶ್ ಅಳವಡಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಪೊಲೀಸರು ಹೇಳಿದ್ದಾರೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಭದ್ರತಾ ಕಾರಣಗಳಿಗಾಗಿ ವಾಹನ ಸವಾರರು ಈ ರೀತಿ ಮಾಡಬಾರದೆಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಸ್ಯಾಟಲೈಟ್ ಡಿಶ್ ಅಳವಡಿಸಿರುವ ಬಗ್ಗೆ ಪೊಲೀಸರು ಕಾರು ಚಾಲಕನನ್ನು ಪ್ರಶ್ನಿಸಿದ್ದಾರೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಕಾರಿನ ಬಾನೆಟ್‌ನಲ್ಲಿ ಅಳವಡಿಸಲಾಗಿರುವ ಸ್ಯಾಟಲೈಟ್ ಡಿಶ್'ನಿಂದ ಉತ್ತಮ ಸಿಗ್ನಲ್ ಹಾಗೂ ಇಂಟರ್'ನೆಟ್ ದೊರೆಯುವುದರಿಂದ ಈ ರೀತಿ ಮಾಡಲಾಗಿದೆ ಎಂದು ಆತ ಉತ್ತರ ನೀಡಿದ್ದಾನೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಆತನಿಗೆ ಎಷ್ಟು ದಂಡ ವಿಧಿಸಲಾಯಿತು ಎಂಬುದು ಖಚಿತವಾಗಿಲ್ಲ. ಚಾಲಕ ತನ್ನ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾನೆ ಎಂದು ಹೇಳಲಾಗಿದೆ.

ಕಾರಿನ ಬಾನೆಟ್ ಮೇಲೆ ಡಿಶ್ ಅಳವಡಿಸಿಕೊಂಡ ಕಾರಣಕ್ಕೆ ದಂಡ ತೆತ್ತ ಕಾರು ಚಾಲಕ

ಭಾರತದಲ್ಲಿಯೂ ಹಲವು ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ ವಾಹನ ಮಾಡಿಫೈಗೊಳಿಸುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ. ವಾಹನ ಮಾರ್ಪಾಡು ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದರಿಂದ ಪೊಲೀಸರು ಮಾಡಿಫೈಗೊಂಡ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Car driver fined for installing satellite dish on car bonnet. Read in Kannada.
Story first published: Friday, July 9, 2021, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X