ಬೇಕಂತಲೇ ಐಸ್‍ಕ್ರೀಮ್ ವಾಹನಕ್ಕೆ ಡಿಕ್ಕಿ... ರುಚಿ ಇಷ್ಟವಾಗದಿದ್ದರೇ ಹೀಗಾ ಮಾಡೋದು!

ಇದು ಸೋಷಿಯಲ್ ಮೀಡಿಯಾ ಯುಗ. ಕೆಲವು ಪೋಟೋ ಮತ್ತು ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೆಲವೇ ನಿಮಿಷಗಳಲ್ಲಿ ಭಾರೀ ವೈರಲ್ ಆಗುತ್ತದೆ. ಕೆಲವು ಅಮಾಯಕರ ಮೇಲೆ ಹಲ್ಲೇ ಅಥವಾ ಡಿಕ್ಕಿ ಹೊಡೆಯುವ ದೃಶ್ಯಗಳು ಆಗಾಗ ವೈರಲ್ ಆಗುತ್ತದೆ. ಇದರಿಂದ ಅಮಾಯಕರ ಮೇಲೆ ದೌರ್ಜನ್ಯ ಮಾಡಿದವರಿಗೆ ಶಿಕ್ಷಿಯಾಗಿದೆ.

ಮಹೀಂದ್ರಾ XUV300 ಎಸ್‍ಯುವಿಯ ಚಾಲಕ ಐಸ್ ಕ್ರೀಮ್ ಸ್ಟಾಲ್‌ಗೆ ಡಿಕ್ಕಿ ಹೊಡೆಯುತ್ತಿರುವ ವೀಡಿಯೊಂದು ಭಾರೀ ವೈರಲ್ ಆಗಿದೆ. ಈ. ಸ್ಟಾಲ್ ಬಳಿ ಇದ್ದ ಸಹೋದ್ಯೋಗಿಯೊಬ್ಬರು ವಿಡಿಯೋ ತೆಗೆದಿದ್ದಾರೆ. ನಿಖರವಾದ ವಿವರಗಳು ತಿಳಿದಿಲ್ಲವಾದರೂ, ಕಾರಿನ ಮಾಲೀಕರಿಗೆ ಐಸ್‌ಕ್ರೀಮ್ ರುಚಿ ಇಷ್ಟವಾಗಿಲ್ಲವೆಂದು, ಡಿಕ್ಕಿ ಹೊಡೆದಿದೆ ಎಂದು ವೀಡಿಯೊ ರೆಕಾರ್ಡ್ ಮಾಡಿರುವ ವ್ಯಕ್ತಿಯು ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ.

Ice Cream Van

ಮಹೀಂದ್ರಾ XUV300 XUV300 ಐಸ್ ಕ್ರೀಂ ಸ್ಟಾಲ್‌ಗೆ ಹಲವು ಬಾರೀ ಡಿಕ್ಕಿ ಹೊಡೆಯುತ್ತಿರುವುದು ವೀಡಿಯೊದಲ್ಲಿ ನೋಡಬಹುದಾಗಿದೆ. ಈ ಘಟನೆ ನಡೆದಿರುವ ಸ್ಥಳದ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ, ಬಿಳಿ ಬಣ್ಣದ ಮಹೀಂದ್ರಾ XUV300 ಉದ್ದೇಶಪೂರ್ವಕವಾಗಿ ಐಸ್ ಕ್ರೀಮ್ ಸ್ಟಾಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ವೀಡಿಯೊ ಪ್ರಕಾರ, XUV300 ಮಾಲೀಕರು ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು.

ಆತ ಅವರು ಕೇಳಿದ ಐಸ್ ಕ್ರೀಮ್ ಅನ್ನು ನೀಡಿದ್ದಾರೆ. ಆದರೆ ಆತನಗೆ ಐಸ್ ಕ್ರೀಮ್ ರುಚಿ ಇಷ್ಟವಾಗಲಿಲ್ಲ. ಐಸ್ ಕ್ರೀಮ್ ಸ್ಟಾಲ್ ಮಾಲೀಕರು ಹಣ ನೀಡುವಂತೆ ಕಾರು ಮಾಲೀಕರನ್ನು ಕೇಳಿದಾಗ, ಕೋಪಗೊಂಡ ಅವರು ತಮ್ಮ ಕಾರನ್ನು ಸ್ಟಾಲ್‌ಗೆ ನುಗ್ಗಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ. ಐಸ್ ಕ್ರೀಮ್ ಸ್ಟಾಲ್ ಮಾಲೀಕರು ಐಸ್ ಕ್ರೀಮ್ ಸ್ಟಾಲ್ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.

Ice Cream Van

ಕಾರು ಮಾಲೀಕರ ವಿರುದ್ಧವೂ ಪೊಲೀಸ್ ಕ್ರಮ ಕೈಗೊಂಡ ಬಗ್ಗೆ ಯಾವುದೇ ವರದಿಯಾಗಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮಹೀಂದ್ರಾ XUV300 ಸ್ಟಾಲ್‌ಗೆ ಡಿಕ್ಕಿ ಹೊಡೆದಾಗ ವ್ಯಾಪರಿಯು ತಪ್ಪಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ. ಆದರ್ ಆತನ ಬದುಕು ಸಾಧಿಸಲು ಬಳುಸುವ ಐಸ್ ಕ್ರೀಮ್ ಸ್ಟಾಲ್ ವಾಹನಕ್ಕೆ ಹಾನಿಯಾಗಿದೆ. ವೀಡಿಯೊ ನೋಡಿದರೆ ಡಿಕ್ಕಿಹೊಡೆದ ವ್ಯಕ್ತಿ ಕಾನೂನು ಮತ್ತು ಇತರರ ಬಗ್ಗೆ ಹೇಗೆ ಕಾಳಜಿ ವಹಿಸುವುದಿಲ್ಲ ಎಂದು ತೋರುತ್ತದೆ.

ಇದರಿಂದ ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ವೀಡಿಯೊದಲ್ಲಿ ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತದೆ. ಭಾರತೀಯ ರಸ್ತೆಗಳಲ್ಲಿ ಕಾರು ಚಾಲಕರು ಉದ್ದೇಶಪೂರ್ವಕವಾಗಿ ಇತರರಿಗೆ ಡಿಕ್ಕಿ ಹೊಡೆಯುವುದನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬೆಂಗಳೂರಿನಲ್ಲಿ ಐಟಿ ವೃತ್ತಿಪರರು ಕುಡಿದು ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದರು. ಡಿಜೆ ಹಾಡುಗಳನ್ನು ಪ್ಲೇ ಮಾಡದ ಕಾರಣ ಐಟಿ ವೃತ್ತಿಪರರು ಗಲಾಟೆ ಮಾಡಲು ಪ್ರಾರಂಭಿಸಿದರು.

ಪಬ್‌ನಿಂದ ಹೊರಹಾಕಲ್ಪಟ್ಟ ಐದು ವ್ಯಕ್ತಿಗಳು ಟೊಯೊಟಾ ಇನೋವಾ ಕಾರಿನಲ್ಲಿ ತೆರಳಿದರು. ಪಬ್‌ನಿಂದ ಹೊರಹಾಕಲ್ಪಟ್ಟಿದ್ದಕ್ಕೆ ಹತಾಶೆಗೊಂಡ ಸುಹಾಸ್, ಇನೋವಾ ಕಾರನ್ನು ಪಬ್‌ನ ಹೊರಗೆ ಅಜಾಗರೂಕತೆಯಿಂದ ಓಡಿಸಿ ಮತ್ತು ಉದ್ದೇಶಪೂರ್ವಕವಾಗಿ ಸಾವಿತ್ರು ಶೆಟ್ಟಿ ಮತ್ತು ರೋಷನ್ ಎಂಬ ವ್ಯಕ್ತಿಗಳಿಗೆ ಸೇರಿದ ಎರಡು ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇಂತಹ ಘಟನೆಗಳನ್ನು ತಡೆಗಟ್ಟಲು ಆರೋಪಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 3, 2023, 17:15 [IST]
English summary
Car driver rams into an ice cream van reason details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+