ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಭಾರತದ ಬಹುತೇಕ ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಈ ಕಾರಣದಿಂದಾಗಿ ಭಾರತವು ವಿಶ್ವದಲ್ಲೇ ಹೆಚ್ಚು ಅಪಘಾತಕ್ಕೊಳಗಾಗುವ ದೇಶಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಭಾರತದಲ್ಲಿ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಭಾರತದಲ್ಲಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೇ ನಿರ್ದಾಕ್ಷಿಣ್ಯವಾಗಿ ವಾಹನ ಚಾಲನೆ ಮಾಡುತ್ತಾರೆ. ನವದೆಹಲಿ ಟ್ರಾಫಿಕ್ ಪೊಲೀಸ್ ಒಬ್ಬರು ನಿಯಮಗಳನ್ನು ಉಲ್ಲಂಘಿಸಿದ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಅವರಿಗೆ ಕಾರನ್ನು ಗುದ್ದಿ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ನಡೆದಿದೆ.

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ನವದೆಹಲಿಯ ಡೌಲಾ ಕುವಾನ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಕಾರೊಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಮುಂದೆ ಬಂದಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾರನ್ನು ನಿಲ್ಲಿಸಿ ಪೊಲೀಸರು ವಿಚಾರಣೆ ನಡೆಸಲು ಮುಂದಾದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಟ್ರಾಫಿಕ್ ಪೊಲೀಸ್ ಒಬ್ಬರು ಮಾತನಾಡುತ್ತಾ ಕಾರಿನ ಮುಂಭಾಗದಲ್ಲಿ ನಿಂತಿದ್ದಾಗ ಕಾರಿನ ಚಾಲಕ ಇದ್ದಕ್ಕಿದ್ದಂತೆ ಕಾರು ಚಾಲನೆ ಮಾಡಿದ್ದಾನೆ. ಇದರಿಂದಾಗಿ ಟ್ರಾಫಿಕ್ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಟ್ರಾಫಿಕ್ ಪೊಲೀಸ್ ಬಾನೆಟ್ ಮೇಲೆ ಬಿದ್ದಿರುವುದು ಗೊತ್ತಿದ್ದರೂ ಚಾಲಕನು ಕಾರನ್ನು ನಿಲ್ಲಿಸದೆ ಚಾಲನೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾರು ಚಾಲಕನು ಕಾರನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ರಸ್ತೆ ತುಂಬಾ ವಾಹನಗಳಿದ್ದ ವೇಳೆಯಲ್ಲಿಯೇ ಈ ಘಟನೆ ನಡೆದಿದೆ. ಬಾನೆಟ್ ಮೇಲಿದ್ದ ಪೊಲೀಸ್ ಕಾರಿನ ವ್ಹೀಲ್ ಬಳಿಯೇ ಬಿದ್ದಿದ್ದಾರೆ. ಕಾರಿನ ವ್ಹೀಲ್ ಅವರ ಮೇಲೆ ಹತ್ತಿದ್ದರೆ ಅಥವಾ ಹಿಂದಿನಿಂದ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಅದೃಷ್ಟವಶಾತ್ ಅಂತಹ ಅನಾಹುತ ಸಂಭವಿಸಿಲ್ಲ. ಈ ವೀಡಿಯೊದಲ್ಲಿ ಕೆಳಗೆ ಬಿದ್ದ ತಕ್ಷಣ ಮೇಲೇಳುವ ಪೊಲೀಸ್ ಮತ್ತೊಂದು ದ್ವಿಚಕ್ರ ವಾಹನದ ಮೂಲಕ ಆ ಕಾರನ್ನು ಬೆನ್ನಟ್ಟುತ್ತಾರೆ. ಟ್ರಾಫಿಕ್ ಪೊಲೀಸ್ ಕೆಳಗೆ ಬಿದ್ದ ತಕ್ಷಣ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಆದರೆ ಸುಮಾರು ಒಂದು ಕಿ.ಮೀ ಸಾಗಿದ ನಂತರ ಆತ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಸಿಕ್ಕಿಬಿದ್ದವನನ್ನು ಸುಬಾಮ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟ್ರಾಫಿಕ್ ಪೊಲೀಸ್ ಗೆ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಈ ಹಿಂದೆಯೂ ದೇಶದ ವಿವಿಧ ಭಾಗಗಳಲ್ಲಿ ಈ ರೀತಿಯ ಘಟನೆಗಳು ವರದಿಯಾಗಿದ್ದವು. ನವದೆಹಲಿಯಲ್ಲಿ ನಡೆದ ಈ ಘಟನೆಯು ವಾಹನ ತಪಾಸಣೆಯಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಯಲ್ಲಿ ಭೀತಿಯನ್ನುಂಟು ಮಾಡಿರುವುದು ಸುಳ್ಳಲ್ಲ.

Most Read Articles
 

Kannada
English summary
Car driver takes traffic constable on car bonnet. Read in Kannada.
Story first published: Thursday, October 15, 2020, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X