Viral video: ನೋಡ ನೋಡುತ್ತಲೇ 12 ಅಡಿ ಎತ್ತರದಿಂದ ಪ್ರಯಾಣಿಕರ ಸಮೇತ ಉರುಳಿದ ಕಾರು!

ಮಧ್ಯಪ್ರದೇಶದ ಇಂದೋರ್‌ನ ಲೋಧಿಯಾ ಕುಂಡದಲ್ಲಿ ಹೋಂಡಾ ಬ್ರಿಯೊ ಕಾರು ನೀರಿನ ಕೊಳಕ್ಕೆ ಬಿದ್ದ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದ ತಂದೆ ಮತ್ತು ಮಗಳು ಇಬ್ಬರೂ ಸಹಾಯಕ್ಕಾಗಿ ತುರ್ತಾಗಿ ಕೂಗುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಾಣಬಹುದು. ಪ್ರತ್ಯಕ್ಷ ದರ್ಶಿಗಳ ಪ್ರಕಾರ 12 ಅಡಿ ಎತ್ತರದಿಂದ ಕಾರು ಉರುಳಿದೆ ಎನ್ನಲಾಗಿದೆ.

ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ಹೋಂಡಾ ಬ್ರಿಯೊ ಕಾರು ಸುಮಾರು 12 ಅಡಿ ಎತ್ತರದ ಪ್ರದೇಶದಲ್ಲಿ ಅಪಾಯಕಾರಿಯಾಗಿ ನಿಂತಿದ್ದು, ದುರದೃಷ್ಟವಶಾತ್ ಚಾಲಕ ಹ್ಯಾಂಡ್ ಬ್ರೇಕ್ ಅನ್ನು ಹಾಕುವಲ್ಲಿ ವಿಫಲನಾಗಿದ್ದಾನೆ. ಪರಿಣಾಮವಾಗಿ, ಕಾರು ಮುಂದಕ್ಕೆ ಸಾಗಲು ಪ್ರಾರಂಭಿಸಿದೆ. ಇದೇ ವೇಳೆ ಕಾರಿನಲ್ಲಿ ತಂದೆ, ಮಗಳು ಇದ್ದರು ಎನ್ನಲಾಗಿದ್ದು, ಎತ್ತರದಿಂದ ಕೊಳಕ್ಕೆ ಉರುಳುತ್ತಿದ್ದಂತೆ ಸಹಾಯಕ್ಕಾಗಿ ಕೂಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

car-fell-12-feet-height-with-passengers-viral-video

ಕೆಳಕ್ಕೆ ಬೀಳುತ್ತಿದ್ದಂತೆ ಕಾರು ನೀರಿನಲ್ಲಿ ಮುಳುಗಿದ್ದು, ಮತ್ತೊಮ್ಮೆ ಮೇಲಕ್ಕೆ ಬಂದಾಗ ಇಬ್ಬರು ಪ್ರಯಾಣಿಕರು ಕಾರಿನಿಂದ ಹೊರಕ್ಕೆ ಬಂದಿದ್ದಾರೆ. ಸಹಾಯಕ್ಕಾಗಿ ಅವರು ಕೂಗುತ್ತಿದ್ದಂತೆ ಹತ್ತಿರದ ಪ್ರವಾಸಿಗರು ಅಪಾಯಕ್ಕೀಡಾದ ತಂದೆ-ಮಗಳನ್ನು ರಕ್ಷಿಸಲು ಧಾವಿಸಿದರು. ಅಂತಿಮವಾಗಿ ಅವರನ್ನು ರಕ್ಷಿಸಿದ್ದಾರೆ. ಅದೃಷ್ಟವಾಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಇನ್ನು ಕಾರಿನ ಹಾನಿಯ ಬಗ್ಗೆ ಹೇಳುವುದಾದ್ರೆ, ನೀರಿಗೆ ಧುಮುಕಿದ ನಂತರ ಗಮನಾರ್ಹ ಯಾಂತ್ರಿಕ ದುರ್ಬಲತೆಯನ್ನು ಅನುಭವಿಸಿರುವುದು ತಿಳಿದುಬಂದಿದೆ. ಆದ್ರೆ ಹೊರಭಾಗಕ್ಕೆ ಹೆಚ್ಚಾಗಿ ಯಾವುದೇ ಹಾನಿಯಾಗಿಲ್ಲ, ಇನ್ನು ಕಾರು ಕೊಳಕ್ಕೆ ಧುಮುಕಲು ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹ್ಯಾಂಡ್ ಬ್ರೇಕ್‌ನ ಅನುಪಸ್ಥಿತಿ ಅಥವಾ ಹ್ಯಾಂಡ್ ಬ್ರೇಕ್‌ನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಸಂಭಾವ್ಯ ಕೊರತೆ ಇರಬಹುದು ಎನ್ನಲಾಗಿದೆ.

car-fell-12-feet-height-with-passengers-viral-video

ಸದ್ಯ ಯಾರಿಗೂ ಯಾವುದೇ ಹಾನಿಯಾಗದಿರುವುದು ಅವರ ಅದೃಷ್ಟವೆಂದೇ ಹೇಳಬಹುದು. ಡೋರ್‌ಗಳು ಲಾಕ್ ಆಗಿ ಕಾರು ಮುಳುಗಿದ್ದರೇ ಅಹಿತಕರ ಘಟನೆಗೆ ಕಾರಣವಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಚಾಲಕ ತುಂಬಾ ಎಚ್ಚರದಿಂದ ಇದ್ದರೇ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು. ಇದನ್ನು ತಪ್ಪಿಸಲು ಎಲ್ಲರಿಗೂ ತಿಳಿದಿರುವ ಟ್ರಿಕ್ ಇದೆ. ಇದು ಹಳೆಯದಾದ್ರು ತುಂಬಾ ಉಪಯುಕ್ತ.

ನಿಮ್ಮ ವಾಹನವು ಕೆಳಕ್ಕೆ ಉರುಳದಂತೆ ತಡೆಯಲು ಹ್ಯಾಂಡ್ ಬ್ರೇಕ್ ಇದ್ದರೂ ಇದು ಕೆಲವೊಮ್ಮೆ ಕೈಕೊಡಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಹಾಗಾಗಿ ಚಕ್ರದ ಮುಂದೆ ಕಲ್ಲನ್ನು ಇಟ್ಟರೇ ಇಳಿಜಾರಿನಲ್ಲಿ ವಾಹನವು ಸ್ಥಿರವಾಗಿ ಉಳಿಯುತ್ತದೆ. ಈ ತಂತ್ರವನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದ್ರೆ ಇತ್ತಿಚೆಗೆ ಹ್ಯಾಂಡ್ ಬ್ರೇಕ್ ಇದೆಯೆಂಬ ಧೈರ್ಯದಿಂದ ಹಳೆಯ ಟ್ರಿಕ್ಸ್ ಬಳಸುತ್ತಿಲ್ಲ.

ಆದ್ರೂ ಇಂತಹ ಅಪಘಾತಗಳನ್ನು ತಡೆಗಟ್ಟಲು, ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ಬಳಸುವುದು ನಿರ್ಣಾಯಕವಾಗಿದೆ. ಮತ್ತೊಂದು ಮುನ್ನೆಚ್ಚರಿಕೆ ಕ್ರಮವೆಂದರೆ ನಿಮ್ಮ ವಾಹನವನ್ನು ಗೇರ್ ನಲ್ಲಿ ನಿಲ್ಲಿಸುವುದು. ವಾಹನದ ಗೇರ್ ಹಾಕಿ ನಿಲ್ಲಿಸಿದರೆ ಸ್ಥಿರವಾಗಿ ಉಳಿಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಹಳೆಯ ವಾಹನಗಳು ದುರ್ಬಲ ಹ್ಯಾಂಡ್ಬ್ರೇಕ್ ಸಾಮರ್ಥ್ಯವನ್ನು ಹೊಂದಿರಬಹುದು, ಹಾಗಾಗಿಯೇ ಇಂತಹ ಘಟನೆಗಳಿಗೆ ಕಾರಣವಾಗಬಹುದು.

ಗೇರ್‌ನಲ್ಲಿ ಪಾರ್ಕ್ ಮಾಡಿದಾಗ ಇದು ಟ್ರಾನ್ಸ್‌ಮಿಷನ್‌ ಮೇಲೆ ಹೆಚ್ಚು ಒತ್ತಡವನ್ನು ಬೀರಬಹುದಾದರೂ, ನಿಮ್ಮ ವಾಹನವು ಇಳಿಜಾರಿನಲ್ಲಿ ಉರುಳುವುದನ್ನು ತಡೆಯಲು ಇದು ಪ್ರಾಯೋಗಿಕ ಪರಿಹಾರವಾಗಿದೆ. ಗೇರ್‌ನಲ್ಲಿ ಪಾರ್ಕ್‌ ಮಾಡಿದಾಗ ಅಪಘಾತದ ಸಂದರ್ಭದಲ್ಲಿ ಟ್ರಾನ್ಸ್‌ಮಿಷನ್‌ ಸಂಭಾವ್ಯ ಹಾನಿಗೆ ಒಳಗಾಗುತ್ತದೆ, ಆದರೆ ಪರ್ವತದಿಂದ ಕೆಳಗೆ ಉರುಳುವ ವಾಹನವನ್ನು ಬೆನ್ನಟ್ಟುವುದಕ್ಕಿಂತ ಇದು ಉತ್ತಮ ಆಯ್ಕೆ ಅಲ್ಲವೇ?

car-fell-12-feet-height-with-passengers-viral-video

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 8, 2023, 12:27 [IST]
English summary
Car fell 12 feet height with passengers viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+