ಕಾರು ಶೋದಲ್ಲಿ ಪ್ಲೇಬಾಯ್ ಹುಡುಗಿಯ ಆಟ

Posted By:

ಆಟೋಮೊಬೈಲ್ ಜಗತ್ತು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇವೆ. ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ ವಿಶ್ವದ್ಯಾಂತ ವಾಹನ ತಯಾರಕ ಕಂಪನಿಗಳು ವಿನೂತನ ಕಾನ್ಸೆಪ್ಟ್‌ಗಳೊಂದಿಗೆ ಆಗಮಿಸುತ್ತಿದೆ. ಇದರಂತೆ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತವೆ.

ಅವುಗಳಲ್ಲಿ ಪ್ರಮುಖವಾಗಿರುವುದು ಜಾಹೀರಾತು. ಅದರಲ್ಲೂ ವಿಶೇಷವಾಗಿ ತುಂಡು ಬಟ್ಟೆ ತೊಟ್ಟ ಮಾಡೆಲ್‌ಗಳನ್ನು ಕಾರು ತಯಾರಕ ಸಂಸ್ಥೆಗಳು ಚೆನ್ನಾಗಿಯೇ ಬಳಸಿಕೊಳ್ಳುತ್ತಿವೆ. ಭಾರತ ಕೂಡಾ ಇದರಿಂದ ಹೊರತಾಗಿಲ್ಲ.

ದೇಶದ ಚಾನೆಲ್‌ಗಳಲ್ಲಿ ಓವರ್‌ಡ್ರೈವ್, ಆಟೋಕಾರು, ಕಾರು ಆಂಡ್ ಬೈಕ್‌ಗಳಂತ ಆಟೋ ಶೋಗಳಲ್ಲಿ ಬಾರತೀಯ ಆಟೋ ಮೊಬೈಲ್ ಜಗತ್ತಿನ ಬಗ್ಗೆ ವಿಸ್ತಾರವಾದ ವಿಮರ್ಶೆ ನಡೆಸಲಾಗುತ್ತದೆ. ನೀವು ಬೇಕಾದರೆ ಜೆರೆಮಿ ಕ್ಲಾರ್ಕ್‌ಸನ್, ಜೇಮ್ಸ್ ಮೇ ಹಾಗೂ ರಿಚರ್ಡ್ ಹ್ಯಾಮಂಡ್ ನಡೆಸಿಕೊಡುತ್ತಿರುವ ವಿಶ್ವದ ಜನಪ್ರಿಯ ಆಟೋ ಶೋವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಇದೇ ರೀತಿಯ ತಂತ್ರಗಾರಿಕೆಗೆ ಮುಂದಾಗಿರುವ ರಷ್ಯಾ ಟಿ.ವಿ ಚಾನೆಲ್‌ ಮಾಡೆಲ್‌ಗಳ ಮೂಲಕ ಆಟೋ ಶೋ ಪ್ರಚಾರ ಮಾಡುತ್ತಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಆಟೋ ಬೆಬೋಸ್‌ಗಳು ತುಂಡು ಬಟ್ಟೆಗಳಲ್ಲಿ ಕಾಣಿಸಿಕೊಂಡ ಬಳಿಕ ಟಿ.ವಿ ಚಾನೆಲ್ ರೇಟಿಂಗ್ ಕೂಡಾ ಗಣನೀಯವಾಗಿ ವರ್ಧಿಸತೊಡಗಿದೆ.

Car Show Hosted By Playboy Model In Russia

ರಷ್ಯಾದ ಬ್ಲೋಂಡ್ ಡ್ರೈವ್ ಡಾಟ್ ಟಿ.ವಿಯಲ್ಲಿ ಪ್ರಸಾರವಾಗುವ ಆಟೋ ಶೋವನ್ನು ಉಕ್ರೇನ್‌ನ ಮಾಡೆಲ್ ಇರಿನಾ ಒಲೋಸ್ಕಿಯಾ (Irina Olkhovskaya) ನಡೆಸಿಕೊಡುತ್ತಾಳೆ. ಈಕೆ ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕ ಪ್ಲೇಬಾಯ್ 55ನೇ ವಾರ್ಷಿಕ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ಇನ್ನು ವಿಶೇಷ.

Car Show Hosted By Playboy Model In Russia

ಈಕೆ ತನ್ನದೇ ಆದ ಮಾದಕ ಶೈಲಿಯಿಂದ ಐಷಾರಾಮಿ ಕಾರುಗಳ ಬಗ್ಗೆ ವಿಮರ್ಶೆ ಆರಂಭಿಸುತ್ತಾಳೆ. ಇದು ಪುರುಷರಿಗಂತೂ ಫೇವರಿಟ್ ಪ್ರೊಗ್ರಾಂ ಎನಿಸಿಕೊಂಡಿದೆ. ಅಂದ ಹಾಗೆ ನಿಮ್ಮ ಗ್ರರ್ಲ್ ಫ್ರೆಂಡ್ ಈ ನಿರ್ದಿಷ್ಟ ಕಾರನ್ನು ಇಷ್ಟಪಡುವರೇ ಎಂಬುದನ್ನು ಸಹ ವಿವರಿಸುತ್ತಾರೆ.

Car Show Hosted By Playboy Model In Russia

ಇಲ್ಲಿದೆ ನೋಡಿ ಲಂಬೋರ್ಗಿನಿ ಗರ್ಲಡೊ ವಿಮರ್ಶೆ ಮಾಡುತ್ತಿರುವ ಇರಿನಾ ಶೈಲಿ. ಇಲ್ಲಿ ಕಾರು ಅಥವಾ ಮಾಡೆಲ್ ಶೋ ನೋಡಬೇಕೇ ಎಂಬುದು ನೋಡುಗರ ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

Car Show Hosted By Playboy Model In Russia

ಇನ್ನು ಕಾರನ್ನು ವಾಶ್ ಮಾಡುವುದು ಹೇಗೆ ಎಂಬುದಕ್ಕೂ ಈಕೆ ಟಿಪ್ಸ್ ಕೊಡುತ್ತಾರೆ. ಇಲ್ಲಿದೆ ನೋಡಿ ಆಸ್ಟನ್ ಮಾರ್ಟಿನ್ ಡಿಬಿ9 ವಾಶ್ ಮಾಡುವ ಇಕೆಯ ಮಾದಕ ಭಂಗಿ.

Car Show Hosted By Playboy Model In Russia

ಇನ್ನು ಮುಂದಕ್ಕೆ ಸಾಗಿದರೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಹೇಗೆ ತೊಳೆಯಬೇಕು ಎಂಬುದನ್ನು ಈಕೆ ವಿವರಿಸುತ್ತಾರೆ.

Car Show Hosted By Playboy Model In Russia

ಹಾಟ್ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಇರಿನಾ, ಮಸೆರಟಿ ಗ್ರಾನ್ ಟರಿಸ್ಮೊ ಎಸ್ ಕಾರನ್ನು ಹೇಗೆ ಡ್ರೈವ್ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತಾರೆ.

Car Show Hosted By Playboy Model In Russia

ವಿಶ್ವದ ಅತಿ ಪುರಾತರ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಫಾಂಟಮ್ ಐಷಾರಾಮಿ ಕಾರು ಬಗ್ಗೆಯೂ ರಿವ್ಯೂ ಮಾಡುವುದನ್ನು ಈಕೆ ಬಿಟ್ಟಿಲ್ಲ.

Car Show Hosted By Playboy Model In Russia

ಈ ದುಬಾರಿ ರೋಲ್ಸ್ ರಾಯ್ಸ್ ಕಾರಿನ ದರ ಬರೋಬ್ಬರಿ 3.5 ಕೋಟಿ ರೂಪಾಯಿಗಳಾಗಿವೆ.

Car Show Hosted By Playboy Model In Russia

ಮರ್ಸಿಡಿಸ್ ಜಿ-ಕ್ಲಾಸ್ ಡಬ್ಲ್ಯು463 ಜಿ500, 5.0 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 296 ಹಾರ್ಸ್ ಪವರ್ ಉತ್ಪಾದಿಸಲಿದೆ. ಈ ಕಾರಿನ ಬಗ್ಗೆ ವಿಮರ್ಶೆ ಮಾಡಿರುವ ಇರಿನಾ, ತಾವು ರಷ್ಯಾ ಹೆಣ್ಮಕ್ಕಳನ್ನು ರಕ್ಷಿಸಲು ತಯಾರಾಗಿರುವುದಾಗಿ ತಿಳಿಸಿದ್ದಾರೆ.

Car Show Hosted By Playboy Model In Russia

ವಿನೂತನ ಆಕಾರ ಹೊಂದಿರುವ ಗಲರ್ಡೊ ರೊಡ್‌ಸ್ಟರ್ ಕಾರನ್ನು ಈಕೆ ಇಷ್ಟಪಡುತ್ತಾಳೆ.

Irina Olkhovskaya

Irina Olkhovskaya

Irina Olkhovskaya

Irina Olkhovskaya

English summary
BlondeDrive.tv is the name of a Russian auto show that is hosted by Ukranian Irina Olkhovskaya, a Playboy model who featured in its 55th anniversary cover.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more