ಕೆಸರಿನಲ್ಲಿ ಸಿಲುಕಿದ ಕಾರನ್ನು ಹೊರತೆಗೆಯುವ ವಿಧಾನ ಹೇಗೆ?
ಇದು ಎಲ್ಲ ವಾಹನ ಚಾಲಕರು ಎದುರಿಸುವ ಸಮಸ್ಯೆಯಾಗಿದೆ. ಭಾರತೀಯ ರಸ್ತೆ ಪರಿಸ್ಥಿತಿಯಲ್ಲಂತೂ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ತೀರಾ ಸಾಮಾನ್ಯವಾಗಿ ಎದುರಾಗುತ್ತದೆ.
ಇವನ್ನೂ ನೋಡಿ: ನೈಜತೆ ಕಾಪಾಡಿದ ತ್ರಿಡಿ ರಸ್ತೆ ಕಲೆಗಾರಿಕೆ
ಕೆಸರಿನಲ್ಲಿ ಸಿಲುಕಿದ ಕಾರು ಅಥವಾ ಇತರ ಘನ ವಾಹನಗಳು ಎಷ್ಟೇ ವೇಗವರ್ಧಿಸಿದರೂ ಚಕ್ರಗಳು ಮಾತ್ರ ಅಲ್ಲೇ ಸರ್ರನೆ ತಿರುಗುತ್ತಿರುತ್ತದೆ. ಇದರಿಂದ ವಾಹನಗಳು ಅಲ್ಲೇ ತಟಸ್ಥವಾಗಿಬಿಡುತ್ತದೆಯಲ್ಲದೆ ಚಕ್ರಗಳು ಇನ್ನಷ್ಟು ಕೆಸರಿನೊಳಗೆ ಹೂತು ಬಿಡುವ ಅಪಾಯವಿದೆ. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾದಿತ್ತು. ಹಾಗಾಗಿ ಇಂತಹ ಸಮಸ್ಯೆಗಳು ಎದುರಾದ್ದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವೆನಿಸುತ್ತದೆ.

ಕೆಸರಿನಲ್ಲಿ ಸಿಲುಕಿದ ವಾಹನವನ್ನು ಮೇಲೆತ್ತಲು ಟ್ರಕ್ ಸಹಾಯ ಪಡೆಯಬಹುದು. ಆದರೆ ಇದಕ್ಕಾಗಿ ತುಂಬಾನೇ ಸಮಯ ತಗಲುಲಿದೆ. ಇದು ನಿಮ್ಮ ಜೇಬಿಗೂ ಕತ್ತರಿ ಪ್ರಯೋಗ ಸಹ ಮಾಡಬಹುದು.

ಹಾಗಾಗಿ ನಾವಿಂದು ಹೇಳಿ ಕೊಡಲಿರುವ ವಿಧಾನವನ್ನು ಅನುಸರಿಸಿದರೆ ಆದಷ್ಟು ಬೇಗ ಅಪಾಯದಿಂದ ಪಾರಾಗಬಹುದು.

ನಿಮ್ಮ ಕಾರಲ್ಲಿ ಸಹ ಪ್ರಯಾಣಿಕರಿದ್ದಲ್ಲಿ ಮೊದಲು ಅವರಲ್ಲಿ ಕಾರಿನಿಂದ ಹೊರಗಿಳಿಯಲು ವಿನಂತಿಸಿಕೊಳ್ಳಿ. ಇದು ಕಾರಿನ ಭಾರ ಕಡಿಮೆ ಮಾಡಲು ನೆರವಾಗಲಿದೆ.

ಈ ಮೂಲಕ ನಿಮ್ಮ ಕಾರಿನ ಚಕ್ರಗಳು ಇನ್ನಷ್ಟು ಕೆಸರಿನೊಳಗೆ ಸಿಲುಕುವುದನ್ನು ತಡೆಯಲಿದೆ.

ಇದೇ ಸಂದರ್ಭದಲ್ಲಿ ನೀವು ವೇಗವರ್ಧಿಸುವಾಗ ಸಹ ಪ್ರಯಾಣಿಕರು ಚಕ್ರಗಳ ಸಮೀಪ ನಿಲ್ಲದಂತೆ ಸೂಚಿಸಬೇಕಾಗುತ್ತದೆ. ಇದು ಅವರ ಮೇಲೂ ಕೆಸರಿನ ಅಭಿಷೇಕವಾಗದಂತೆ ತಡೆದುಕೊಳ್ಳುತ್ತದೆ.

ಎರಡನೇಯದಾಗಿ ಗಾಡಿ ಆನ್ ಮಾಡಿ ಬಿಟ್ಟು ಸ್ಟೀರಿಂಗ್ ವೀಲ್ ಸ್ವಲ್ಪ ಆಕಡೆ ಈಕಡೆ ಜೋರಾಗಿ ತಿರುಗಿಸಿ. ಇದು ಕೆಸರನ್ನು ಸ್ವಲ್ಪ ಮಟ್ಟಿಗಾದರೂ ಚಲ್ಲಾಪಿಲ್ಲಿ ಮಾಡಲು ನೆರವಾಗಲಿದೆ.

ಇದಾದ ಬಳಿಕ ನಿಧಾನವಾಗಿ ವೇಗವರ್ಧಿಸಲು ಪ್ರಯತ್ನಿಸಿ. ಹೆಚ್ಚು ವೇಗವರ್ಧನೆಗೆ ಪ್ರಯತ್ನಿಸಿದ್ದಲ್ಲಿ ನಿಮ್ಮ ಕಾರು ಇನ್ನಷ್ಟು ಒಳಕ್ಕೆ ಸರಿಯಲಿದೆ ಎಂಬುದರ ಬಗ್ಗೆ ಎಚ್ಚರ ವಹಿಸಿ.

ನಿಧಾನವಾಗಿ ಚಲಿಸಿದ್ದಷ್ಟು ಕಾರಿನ ಒಟ್ಟಾರೆ ಭಾರದ ಜೊತೆ ಸಮತೋಲನ ಕಾಪಾಡಿಕೊಳ್ಳಲಿದೆ.

ಹಾಗೊಂದು ವೇಳೆ ಕಾರು ಮುಂದಕ್ಕೆ ಚಲಿಸಲು ಸಾಧ್ಯವಾಗದಿದ್ದಲ್ಲಿ ರಿವರ್ಸ್ ಗೇರ್ ಹಾಕಿ ಮತ್ತೆ ನಿಧಾನವಾಗಿ ವೇಗವರ್ಧಿಸಲು ಪ್ರಯತ್ನಿಸಿ.

ಇದು ಸಾಧ್ಯವಾಗದಿದ್ದಲ್ಲಿ ಕೈಯಿಂದಲೇ ಕೆಸರನ್ನು ಸ್ವಲ್ಪ ದೂರಕ್ಕೆ ಸರಿಸಿ ಚಕ್ರಗಳ ಕೆಳಗಡೆಯಾಗಿ ಸಣ್ಣ ಕಲ್ಲುಗಳನ್ನಿಡಿ. ಇದು ಕಾರಿನ ಚಕ್ರಗಳಿಗೆ ಗ್ರಿಪ್ ಪ್ರದಾನ ಮಾಡಲಿದೆ.

ಅಕ್ಕಪಕ್ಕದಲ್ಲಿ ಯಾವುದೇ ವಸ್ತುಗಳು ಲಭ್ಯವಾಗದಿದ್ದಲ್ಲಿ ಕಾರಿನ ಫ್ಲೋರ್ ಮ್ಯಾಟ್ ಅಥವಾ ಹಳೆಯ ಬ್ಲಾಂಕೆಟ್ ಸಹ ಬಳಕೆ ಮಾಡಬಹುದಾಗಿದೆ.

ಮತ್ತೆ ಕಾರಿಗೆ ಬಂದು ಗಾಡಿ ಸ್ಟಾರ್ಟ್ ಮಾಡಿ ಚಕ್ರಗಳು ಗ್ರಿಪ್ ಗಿಟ್ಟಿಸಿಕೊಳ್ಳುತ್ತಿದೆ ಎಂಬುದನ್ನು ಖಾತ್ರಿಪಡಿಸುವ ವರೆಗೂ ನಿಧಾನವಾಗಿ ವೇಗವರ್ಧಿಸಿ. ಈ ಪ್ರಕ್ರಿಯೆಯನ್ನು ಸಮಸ್ಯೆಯಿಂದ ಹೊರಬರುವ ವರೆಗೆ ಮುಂದುವರಿಸಿ.

ಕೆಸರಿನಿಂದ ಕಾರು ಮೇಲೆತ್ತಿದ ಬಳಿಕ ಸುರಕ್ಷಿತ ಹಾಗೂ ಗಟ್ಟಿಯಾದ ಸ್ಥಳದಲ್ಲಿ ಕಾರನ್ನು ನಿಧಾನವಾಗಿ ಚಲಿಸಿ. ಇದು ಚಕ್ರಗಳ ಥ್ರೆಡ್‌ನಲ್ಲಿ ಅಂಟಿಕೊಂಡಿರುವ ಕೆಸರನ್ನು ಹೊರಚಿಮ್ಮಿಸಲು ನೆರವಾಗಲಿದೆ.

ಕೆಸರು ಸಂಪೂರ್ಣ ಮುಕ್ತವಾದ ಬಳಿಕ ನೀವು ಕಾರಿನ ವೇಗವರ್ಧಿಸಿಕೊಳ್ಳಬಹುದಾಗಿದೆ. ಅಲ್ಲದೆ ಸಹ ಪ್ರಯಾಣಿಕರು ಕಾರಿನೊಳಗೆ ಪ್ರವೇಶಕ್ಕೆ ಅನುವು ಮಾಡಿಕೊಡಬಹುದಾಗಿದೆ.

ಇವೆಲ್ಲ ಆದ ಮೇಲೆ ಹತ್ತಿರದ ಸರ್ವೀಸ್ ಸ್ಟೇಷನ್ ಅಥವಾ ಗ್ಯಾರೇಜ್‌ಗೆ ತೆರಳಿ ಕಾರಿಗೆ ಯಾವುದೇ ತೊಂದರೆಗಳಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಪಯಣ ಪೂರ್ಣಗೊಂಡ ಬಳಿಕ ಕಾರನ್ನು ತೊಳೆದು ಸ್ವಚ್ಚಗೊಳಿಸಲು ಮರೆಯದಿರಿ.

ಸದ್ಯ ಇಲ್ಲಿ ಕೊಟ್ಟಿರುವ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ಆಸಕ್ತಿದಾಯಕ ವಾಹನಗಳ ಚಿತ್ರಗಳನ್ನು ಆನಂದಿಸಿರಿ.

ನಿಮಗೆ ಈ ಲೇಖನ ಇಷ್ಟವಾದ್ದಲ್ಲಿ ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿರಿ.

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ

ಕೆಸರಿನಲ್ಲಿ ಸಿಲುಕಿರುವ ಕಾರುಗಳ ಸಂಗ್ರಹ


Click it and Unblock the Notifications








