ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಜನರು ಪ್ರತಿಯೊಂದರಲ್ಲೂ ಭಿನ್ನತೆಯನ್ನು ಹುಡುಕುತ್ತಾರೆ. ಹಾಕುವ ಬಟ್ಟೆಯಿಂದ ಹಿಡಿದು ಮಾಡುವ ಕೆಲಸದವರೆಗೂ ಇತರರಿಗಿಂತ ಭಿನ್ನವಾಗಿರಬೇಕು ಎಂದುಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ವಾಹನಗಳ ವಿಷಯದಲ್ಲಿ ವಿಭಿನ್ನತೆಯನ್ನು ಕಾಣಲು ಕ್ರೇಜ್ ಹೆಚ್ಚಾಗಿರುತ್ತದೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಕೆಲವೊಮ್ಮೆ ವಾಹನದ ಹಿಂಬದಿಯಲ್ಲಿ ಪ್ರಚೋದನಕಾರಿ ಸ್ಟಿಕ್ಕರ್ ಅನ್ನು ಹಾಕುವುದು, ನಂಬರ್ ಪ್ಲೇಟ್‌ ಅನ್ನು ಡಿಸೈನ್‌ ಮಾಡಿಸುವಂತಹ ಕೆಲಸಗಳನ್ನು ಹೆಚ್ಚಾಗಿ ಮಾಡುತ್ತಾರೆ. ಈ ಕ್ರಮದಲ್ಲಿ ಕೆಲವೊಮ್ಮೆ ಕಾನೂನನ್ನು ಉಲ್ಲಂಘಿಸಿ ದಂಡ ಹಾಕಿಸಿಕೊಂಡವರು ಇದ್ದಾರೆ. ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ನಂಬರ್ ಪ್ಲೇಟ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಪೊಲೀಸರು ವ್ಯಕ್ತಿಯೊಬ್ಬನಿಗೆ ದಂಡ ಹಾಕಿ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿ ಕಳುಹಿಸಿದ್ದಾರೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಮಾಹಿತಿ ಪ್ರಕಾರ, ಉತ್ತರಾಖಂಡ ಮೂಲದ ಈ ವ್ಯಕ್ತಿ ತನ್ನ ಕಾರಿನ ನೋಂದಣಿ ಸಂಖ್ಯೆ 4141 ಅನ್ನು ‘ಪಾಪಾ' ಎಂದು ಹಿಂದಿಯಲ್ಲಿ ಕಾಣುವಂತೆ ಬದಲಾಯಿಸಿದ್ದ. ಈ ಬಗ್ಗೆ ಪೊಲೀಸರು ಟ್ವಿಟರ್ ಹ್ಯಾಂಡಲ್‌ನಿಂದ ದೂರನ್ನು ಪಡೆದಿದ್ದರು, ನಂತರ ಪೊಲೀಸರು ಕಾರಿನ ಸಂಖ್ಯೆಯನ್ನು ಟ್ರ್ಯಾಕ್ ಮಾಡಿ ಕಾರ್ ಮಾಲೀಕರನ್ನು ಪತ್ತೆಹಚ್ಚಿದರು.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಕಾರಿನ ನಂಬರ್ ಪ್ಲೇಟ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಕಾರು ಮಾಲೀಕರಿಗೆ ದಂಡ ವಿಧಿಸಿ, ನಂತರ ನಂಬರ್ ಪ್ಲೇಟ್ ಅನ್ನು ಸಹ ಸರಿಪಡಿಸಲಾಗಿದೆ. ಉತ್ತರಾಖಂಡ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಾರಿನ ನಂಬರ್ ಪ್ಲೇಟ್‌ನ ಬಿಫೋರ್ ಹಾಗೂ ಆಫ್ಟರ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

"ಟ್ವಿಟ್ ಮೂಲಕ ದೂರನ್ನು ಸ್ವೀಕರಿಸಿದ ನಂತರ ಉತ್ತರಾಖಂಡ ಪೊಲೀಸರು ವಾಹನ ಮಾಲೀಕರನ್ನು ಕಚೇರಿಗೆ ಕರೆಸಿ, ನಂಬರ್ ಪ್ಲೇಟ್ ಬದಲಾಯಿಸಿದರು ಮತ್ತು ಮಾಲೀಕರಿಗೆ ದಂಡ ವಿಧಿಸಿದರು" ಎಂದು ಇಲಾಖೆ ಹೇಳಿದೆ. ಪೊಲೀಸ್ ಇಲಾಖೆ ಶೇರ್ ಮಾಡಿರುವ ಚಿತ್ರಕ್ಕೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಜನರು ಟ್ವೀಟ್‌ಗೆ ಹಾಸ್ಯದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ, ಜೊತೆಗೆ ಹೆಚ್ಚಿನ ಸಂಖ್ಯೆಯ ಅಂತಹ ನಂಬರ್ ಪ್ಲೇಟ್‌ಗಳ ಚಿತ್ರಗಳನ್ನು ವಿವಿಧ ಪದಗಳೊಂದಿಗೆ ಬರೆಯುತ್ತಿದ್ದಾರೆ. ಇಂತಹ ನಂಬರ್ ಪ್ಲೇಟ್‌ಗಳೊಂದಿಗೆ ನಗರದಲ್ಲಿ ಹಲವು ವಾಹನಗಳು ಸಂಚರಿಸುತ್ತಿವೆ, ಭವಿಷ್ಯದಲ್ಲಿ ಇಂತಹವುಗಳನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಳಕೆದಾರರು ಸಲಹೆ ನೀಡಿದರು.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಮೋಟಾರು ವಾಹನ ಕಾಯ್ದೆಯಲ್ಲಿ ವಾಹನಗಳ ನಂಬರ್ ಪ್ಲೇಟ್‌ಗಳ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲಾಗಿದೆ. ನಿಯಮಗಳ ಪ್ರಕಾರ, ನಂಬರ್ ಪ್ಲೇಟ್‌ನಲ್ಲಿ ಯಾವುದೇ ರೀತಿಯ ಟ್ಯಾಂಪರಿಂಗ್ ಅಥವಾ ಲಿಖಿತ ಕೈಬರಹವನ್ನು ಬದಲಾಯಿಸುವುದು ಅಪರಾಧದ ಅಡಿಗೆ ಬರುತ್ತದೆ. ಹಾಗಾಗಿ ವಾಹನ ಚಾಲಕರು ಇಂತಹ ಬರವಣಿಗೆಗಳು ಇದ್ದಲ್ಲಿ ತೆರವುಗೊಳಿಸುವುದು ಉತ್ತಮ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ದ್ವಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳಾದ ಕಾರು ಮತ್ತು ಜೀಪ್‌ಗಳಿಗೆ ಬಿಳಿ ಬಣ್ಣದ ಪ್ಲೇಟ್‌ನಲ್ಲಿ ಕಪ್ಪು ಬಣ್ಣದಲ್ಲಿ ಸಂಖ್ಯೆಯನ್ನು ಬರೆಯಬೇಕು. ಅದೇ ಸಮಯದಲ್ಲಿ, ವಾಣಿಜ್ಯ ವಾಹನಗಳ ಲೈಸೆನ್ಸ್ ಪ್ಲೇಟ್‌ನಲ್ಲಿ ಹಳದಿ ಬಣ್ಣದ ಪ್ಲೇಟ್‌ನಲ್ಲಿ ಕಪ್ಪು ಬಣ್ಣದಲ್ಲಿ ಸಂಖ್ಯೆಯನ್ನು ಬರೆಯುವುದು ಕಡ್ಡಾಯವಾಗಿದೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ನಂಬರ್ ಪ್ಲೇಟ್‌ನಲ್ಲಿ ಅಲಂಕಾರಿಕ ಅಕ್ಷರಗಳು, ಚಿತ್ರಗಳು ಮತ್ತು ಕಲೆಗಳನ್ನು ಅನುಮತಿಸಲಾಗುವುದಿಲ್ಲ. ದ್ವಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳಾದ ಕಾರು ಮತ್ತು ಜೀಪ್‌ಗಳಿಗೆ ಬಿಳಿ ಬಣ್ಣದ ಪ್ಲೇಟ್‌ನಲ್ಲಿ ಕಪ್ಪು ಬಣ್ಣದಲ್ಲಿ ಸಂಖ್ಯೆಯನ್ನು ಬರೆಯಬೇಕು.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಅದೇ ಸಮಯದಲ್ಲಿ, ವಾಣಿಜ್ಯ ವಾಹನಗಳ ಲೈಸೆನ್ಸ್ ಪ್ಲೇಟ್‌ನಲ್ಲಿ ಹಳದಿ ಬಣ್ಣದ ಪ್ಲೇಟ್‌ನಲ್ಲಿ ಕಪ್ಪು ಬಣ್ಣದಲ್ಲಿ ಸಂಖ್ಯೆಯನ್ನು ಬರೆಯುವುದು ಕಡ್ಡಾಯವಾಗಿದೆ. ನಂಬರ್ ಪ್ಲೇಟ್‌ನಲ್ಲಿ ಅಲಂಕಾರಿಕ ಅಕ್ಷರಗಳು, ಚಿತ್ರಗಳು ಮತ್ತು ಕಲೆಗಳನ್ನು ಅನುಮತಿಸಲಾಗುವುದಿಲ್ಲ. ಆದರೂ ಹಲವರು ತಮ್ಮ ವಾಹನಗಳು ಭಿನ್ನವಾಗಿ ಕಾಣಲು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ.

ನಂಬರ್‌ ಪ್ಲೇಟ್‌ನಲ್ಲಿ ಅಪ್ಪ ಎಂದು ಬರೆಸಿಕೊಂಡಿದ್ದವನನ್ನು ಠಾಣೆಗೆ ಕರೆಸಿ ದಂಡ ಹಾಕಿದ ಪೊಲೀಸರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕರ್ನಾಟಕದಲ್ಲೂ ನಂಬರ್‌ ಪ್ಲೇಟ್‌ಗಳಲ್ಲಿ ಡಿಸೈನ್ ಬಳಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಟ್ರಾಫಿಕ್ ಪೊಲೀಸರು ಇದಕ್ಕೆ ದಂಡ ವಿಧಿಸಿ ಬದಾಲಾಯಿಸುವಂತೆ ಎಚ್ಚಾರಿಕೆ ನೀಡಿದರು ಕೆಲವರು ತಲೆಕೆಡಿಸಿಕೊಳ್ಳದೇ ಹಾಗೇ ಉಳಿಸಿಕೊಂಡು ಓಡಾಡುತ್ತಿದ್ದಾರೆ. ಇದನ್ನು ನಿಯಂತ್ರಣಕ್ಕೆ ತರಬೇಕಾದರೆ ಪೊಲೀಸರೆ ಖುದ್ದು ಸ್ಥಳದಲ್ಲೇ ಅದನ್ನು ಬದಲಾಯಿಸಿ ಕಳುಹಿಸಬೇಕಿದೆ.

More from DriveSpark

Article Published On: Thursday, July 14, 2022, 16:52 [IST]
English summary
Car with papa number plate challaned in uttarakhand details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+