ಅಜಾಗರೂಕ ಚಾಲನೆಯಿಂದ ಗಾಳಿಗೆ ಹಾರಿದ ಯುವಕ.. ಇದಕ್ಕೆ ಹೇಳುವುದು ಸೀಟ್ ಬೆಲ್ಟ್ ತುಂಬಾ ಮುಖ್ಯವೆಂದು!
ಕುವೈತ್‌ನ ಅಬು ಹಸನಿಯಾ (Kuwait Abu Hasaniya) ಸಮುದ್ರ ದಂಡೆಯಲ್ಲಿ ಜಾಯ್‌ರೈಡ್‌ಗೆಂದು ಕಾರಿನ್ನು ತೆಗೆದುಕೊಂಡು ಹೋಗಿದ್ದ ಯುವಕನೊಬ್ಬ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆತನ ಅಜಾಗರೂಕ ಚಾಲನೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಯೂಟ್ಯೂಬ್ (Youtube)ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಟೊಯೊಟಾ ಎಫ್‌ಜೆ ಕ್ರೂಸರ್ ಎಸ್‌ಯುವಿ (Toyota FJ Cruiser SUV), ಕಡಲ ಕಿನಾರೆಯಲ್ಲಿ ನಿಧಾನವಾಗಿ ಚಲಿಸುತ್ತಿರುವುದನ್ನು ನೋಡಬಹುದು. ಆ ಬಳಿಕ, ಇದ್ದಕ್ಕಿಂದಂತೆ ವೇಗವನ್ನು ಪಡೆಯುವ ಕಾರು, ಕೆಲವೇ ಕ್ಷಣಗಳಲ್ಲಿ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಪಲ್ಟಿಯಾಗುತ್ತದೆ. ಅದರಲ್ಲಿದ್ದ ಚಾಲಕ ಕೂಡ ಕಿಟಕಿಯಿಂದ ಹೊರಬಂದು ಗಾಳಿಯಲ್ಲಿ ಹಲವು ಅಡಿಗಳಷ್ಟು ಎತ್ತರಕ್ಕೆ ಹಾರಿ, ನೀರಿನಲ್ಲಿ ಬಿದ್ದಿದ್ದಾನೆ.

ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ, ಟೊಯೊಟಾ ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಜಾಗರೂಕ ಚಾಲನೆ ಮಾಡಿದ ಯುವಕನ ವಿರುದ್ದ ಯಾವ ಕ್ರಮಕೈಗೊಂಡಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಗಾಳಿಯಲ್ಲಿ ಸರಿ ಸುಮಾರು 16 ಅಡಿಗಳಷ್ಟು ಎತ್ತರಕ್ಕೆ ಆತ ಹಾರಿದ್ದಾನೆ ಎಂದು ತಿಳಿದುಬಂದಿದೆ.
ಈ ಯುವಕನ ಹುಚ್ಚಾಟವನ್ನು ಸಾಮಾಜಿಕ ಜಾಲತಾಣ (Social Media) ಬಳಕೆದಾದರೂ ಸಹ ತೀವ್ರವಾಗಿ ಖಂಡಿಸಿ, ಕಿಡಿಕಾರಿದ್ದಾರೆ. ನೆಟ್ಟಿಗರೊಬ್ಬರು, 'ಅವನು ತನ್ನ ಸುರಕ್ಷತೆಗಾಗಿ ಸೀಟ್ ಬೆಲ್ಟ್ ಧರಿಸಿಲ್ಲ. ಇದು ಮಗುವಿಗೆ ಆಟವಾಡಲು ಚಾಕು ನೀಡಿದಂತಿದೆ' ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, 'ಮೂರ್ಖ.. ಅದೃಷ್ಟಶಾಲಿ, ಬದುಕುಳಿದಿದ್ದಾನೆ' ಎಂದು ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆತ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸುಲಭವಾಗಿ ಗೊತ್ತಾಗುತ್ತದೆ. ಸೀಟ್ ಬೆಲ್ಟ್ ಹಾಕಿಕೊಂಡು ವೇಗವಾಗಿ ಕಾರನ್ನು ಓಡಿಸಿದ್ದರೂ ಕಿಟಕಿಯಿಂದ ಹೊರಬಂದು ಗಾಳಿಗೆ ಹಾರುತ್ತಿರಲಿಲ್ಲ. ಆಕಸ್ಮಿಕವಾಗಿ ಅಪಘಾತಗಳು ಎದುರಾದಾಗ ಸೀಟ್ ಬೆಲ್ಟ್ (Seat belt) ಪ್ರಯಾಣಿಕರ ಜೀವ ರಕ್ಷಕ ಸಾಧನವಾಗಿ ಕೆಲಸ ಮಾಡುತ್ತದೆ.
ಭಾರತದ ಯಾವುದೇ ಸಾರ್ವಜನಿಕ ರಸ್ತೆಯಲ್ಲಿಯೂ ಸ್ಟಂಟ್ (ಸಾಹಸ) ಮಾಡಲು ಅಥವಾ ನಿಗದಿತ ವೇಗಮಿತಿಯನ್ನು ಮೀರಿ ವಾಹನವನ್ನು ಚಲಿಸಲು ಅವಕಾಶವಿಲ್ಲ. ಆಗೊಮ್ಮೆ ಕಾರು ಅಥವಾ ಬೈಕ್‌ಗಳನ್ನು ಬಳಸಿ, ಸ್ಟಂಟ್ ಮಾಡಲೆಬೇಕು ಅಂದುಕೊಂಡರೆ, ನಿಗದಿಪಡಿಸುರುವ ಖಾಸಗಿ ಸ್ಥಳದಲ್ಲಿ ನುರಿತ ಮಾರ್ಗದರ್ಶಕರ ಸಲಹೆ ಮೇರೆಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಬಳಸಿ ಮಾಡಬಹುದು. ಆದರೂ ನಿಮ್ಮ ಜಾಗ್ರತೆಯಲ್ಲಿ ನೀವಿದ್ದರೆ ತುಂಬಾ ಒಳ್ಳೆಯದು.

ಸುರಕ್ಷಿತ ಪ್ರಯಾಣಕ್ಕೆ ಸಲಹೆಗಳು: ಕಾರು ಓಡಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಗೂ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ. ನಿಗದಿತ ವೇಗಮಿತಿಯಲ್ಲಿ ವಾಹನಗಳನ್ನು ಓಡಿಸಿ. ಎಲ್ಲ ಸಂಚಾರಿ ನಿಯಮಗಳನ್ನು ಪಾಲಿಸಿರಿ. ಜೊತೆಗೆ ಚಾಲನೆ ವೇಳೆ, ಪೋನ್ ನಲ್ಲಿ ಮಾತನಾಡಬೇಡಿ ಹಾಗೂ ಮದ್ಯಪಾನವನ್ನು ಮಾಡದಿರಿ. ಈ ಮೂಲಕ ಮುಂದೆ ಒದಗಬಹುದಾದ ದೊಡ್ಡ ಮಟ್ಟದ ಅಪಾಯವನ್ನು ಸಹ ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications