ಹಾರುವ ಕಾರು - ಇದು ಕನಸು ನನಸಾಗುವ ಕಾಲ
ಹೌದು, ನಿಜ. ಹಾರುವ ಕಾರು ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಜಗತ್ತಿನ ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ನಾವೀನ್ಯ ತಂತ್ರಜ್ಞಾನಗಳನ್ನು ಹೊರತರುತ್ತಿದೆ. ಈ ಪಟ್ಟಿಯಲ್ಲಿ ಟೆರ್ರಾಫುಜಿಯಾ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡರೂ ಸಹ ಇದಕ್ಕೊಂದು ಹೊಸ ಸೇರ್ಪಡೆಯನ್ನು ನಾವಿಂದು ಪರಿಚಯಿಸಲಿದ್ದೇವೆ.
ಅದುವೇ, ಕಾರ್ ಪ್ಲೇನ್
ಹೆಸರಲ್ಲೇ ಸೂಚಿಸಿರುವಂತೆಯೇ ಕಾರು ಹಾಗೂ ವಿಮಾನದ ಸಾಮರ್ಥ್ಯವನ್ನು ಇದು ಹೊಂದಿರಲಿದ್ದು, ಈಗಾಗಲೇ ಮೊದಲ ಮಾದರಿಯು ಯಶಸ್ವಿ ಹಾರಾಟವನ್ನು ನಡೆಸಿದೆ. ಜರ್ಮನಿ ತಳಹದಿಯ ಕಾರ್ ಪ್ಲೇನ್ ಸಂಸ್ಥೆಯು ಅವಳಿ ಮೈಕಟ್ಟಿನ ಜೋಡಿರೆಕ್ಕೆಯ ವಾಹನವಾಗಿರಲಿದೆ.

ಜರ್ಮನಿಯ ಏರ್ ಶೋದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ದರ್ಶನ ನೀಡಿರುವ ಕಾರ್ ಪ್ಲೇನ್ 833 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಕಳೆದೊಂದು ಶತಮಾನದಲ್ಲಿ ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸಿದೆ. ಇದೀಗ ಆಗಮನವಾಗಲಿರುವ ಕಾರ್ ಪ್ಲೇನ್ ಖಾಸಗಿ, ವಾಣಿಜ್ಯ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ಬಳಕೆ ಮಾಡಬಹುದಾಗಿದೆ.

ಪ್ರತಿಯೊಂದು ವಾಹನದ ಸಂಚಾರಕ್ಕೂ ಪರವಾನಗಿ ಗಿಟ್ಟಿಸಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ಇದೀಗ ಕಾರ್ ಪ್ಲೇನ್ ಸಹ ಅತಿ ಹಗುರ ವಿಮಾನ ವಿಭಾಗದಲ್ಲಿ ಲೈಸನ್ಸ್ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಆಗಲೇ ರಸ್ತೆಯಲ್ಲಿ ತನ್ನ ಸಾಮರ್ಥ್ಯ ತೋರ್ಪಡಿಸಿದೆ.

ಎಮಿಷನ್ ಗುಣಮಟ್ಟತೆಯನ್ನು ಕಾಯ್ದುಕೊಂಡಿರುವ ಕಾರ್ ಪ್ಲೇನ್ ಈಗ ಪರಿಸರ ಸ್ನೇಹಿ ಕೂಡಾ ಎಂದೆನಿಸಿಕೊಳ್ಳಲಿದೆ.

ವಿಶಿಷ್ಟತೆಗಳು
ಜೋಡಿ ರೆಕ್ಕೆಗಳು
ನಾಲ್ಕು ಚಕ್ರಗಳು
ಏರೋಡೈನಾಮಿಕ್ ವಿನ್ಯಾಸ

ಎರಡು ಸೀಟುಗಳ ಕಾರ್ ಪ್ಲೇನ್ ನಲ್ಲಿ ಇಬ್ಬರಿಗೆ ಪ್ರತ್ಯೇಕ ವಿಭಜಿತ ಕೊಠಡಿಗಳಿರಲಿದೆ. ಅಲ್ಲದೆ ರಸ್ತೆಯಲ್ಲಿ ಸಂಚರಿಸುವಾಗ ಇದರ ರೆಕ್ಕೆಗಳು ಮುದುಡಿಕೊಳ್ಳಲಿದೆ.

ಒಟ್ಟಿನಲ್ಲಿ 2017ನೇ ಇಸವಿಯ ಕಾರ್ ಪ್ಲೇನ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಗಗನ ಚುಂಬಿಸಿದ ಏರೋಮೊಬೈಲ್ ಹಾರುವ ಕಾರು


Click it and Unblock the Notifications








