ಕೇವಲ ಭಾರತದಲ್ಲಿ ಮಾತ್ರ ಸಾಧ್ಯ: ಬಹುಕೋಟಿ ಐಷಾರಾಮಿ ಕಾರನ್ನು ಏತಕ್ಕೆ ಬಳಸುತ್ತಿದ್ದಾರೆ ನೋಡಿ...

ಎಲ್ಲರಿಗೂ ತಿಳಿದಂತೆ ಮರ್ಸಿಡಿಸ್-ಬೆಂಝ್ ಐಷಾರಾಮಿ ಬ್ರಾಂಡ್, ಭಾರತದಲ್ಲಿ ಬೆಂಝ್ ಕಾರುಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಾವು ನೋಡಿರಲ್ಲ. ಏಕೆಂದರೆ ಅವುಗಳನ್ನು ಖರೀದಿಸಿ ನಿರ್ವಹಿಸುವುದೇ ದೊಡ್ಡ ಸವಾಲಾಗಿರುತ್ತದೆ. ಆದ್ರೆ ಇಲ್ಲಿ ಬಹುಕೋಟಿ ಬೆಲೆಯ ಮರ್ಸಿಡಿಸ್-ಬೆಂಝ್ ಜಿ-ವ್ಯಾಗನ್ ಅನ್ನು ಸಿಮೆಂಟ್ ಸಾಗಿಸಲು ಬಳಸುತ್ತಿದ್ದಾರೆ. ಈ ಕುರಿತ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.

ವೀಡಿಯೋವನ್ನು TeamSCEII841 ಎಂಬವರು ತಮ್ಮ Instagram ಪುಟದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಯಾರೋ ರೆಕಾರ್ಡ್ ಮಾಡಿದ ಅತ್ಯಂತ ಸಣ್ಣ ವೀಡಿಯೊ ಇದಾಗಿದೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋದಲ್ಲಿ ಬಿಳಿ ಬಣ್ಣದ ಮರ್ಸಿಡಿಸ್ ಜಿ-ವ್ಯಾಗನ್ ಕಾರನ್ನು ರಸ್ತೆಯ ಬದಿಯಲ್ಲಿ ಟೈಲ್ ಗೇಟ್ ತೆರೆದು ನಿಲ್ಲಿಸಿರುವುದನ್ನು ನೋಡಬಹುದು.

carrying-cement-bags-in-mercedes-g-wagon-suv-viral-video

ವಿಡಿಯೋದಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಕಾಣುತ್ತದೆ ಆದ್ರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗುಂಪೊಂದು ವಾಹನದ ಹಿಂಭಾಗದಲ್ಲಿ ವಸ್ತುಗಳನ್ನು ಲೋಡ್ ಮಾಡುವುದನ್ನು ಗಮನಿಸಬಹುದು. ಅವರು ವಾಸ್ತವವಾಗಿ ಈ ಬಹುಕೋಟಿ ಐಷಾರಾಮಿ ಎಸ್‌ಯುವಿಯ ಬೂಟ್‌ಗೆ ಸಿಮೆಂಟ್ ಚೀಲಗಳನ್ನು ಲೋಡ್ ಮಾಡುತ್ತಿದ್ದಾರೆ. ಜಿ-ವ್ಯಾಗನ್ ನ ನೋಂದಣಿ ಸಂಖ್ಯೆ ಸರಿಯಾಗಿ ಕಾಣಿಸಿಲ್ಲ.

ಅದೇ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ದೆಹಲಿ ನೋಂದಣಿಯನ್ನು ತೋರಿಸಿದೆ. ಇದರರ್ಥ ಜಿ-ವ್ಯಾಗನ್ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಎಲ್ಲೋ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ ಕಂಡುಬರುವ SUV, G63 AMG ಅಥವಾ G 350d ಎರಡರಲ್ಲಿ ನಿಖರವಾಗಿ ಯಾವುದು ಎಂಬುದು ನಮಗೆ ಖಚಿತವಾಗಿಲ್ಲ. ಜಿ-ವ್ಯಾಗನ್ ಅನ್ನು ಈ ರೀತಿಯಲ್ಲಿ ಬಳಸಿರುವುದು ಬಹುಶಃ ಇದೇ ಮೊದಲಿರಬಹುದು.

carrying-cement-bags-in-mercedes-g-wagon-suv-viral-video

ಜಿ-ವ್ಯಾಗನ್ ಬಗ್ಗೆ ನಿಮಗೆಷ್ಟು ಗೊತ್ತು? G-Wageನ್ ಒಂದು ಬೃಹತ್ SUV, ಆಫ್-ರೋಡಿಂಗ್ ಅನ್ನು ಸಹ ನಿಭಾಯಿಸಬಲ್ಲದು. ಇದು 480 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. ಇದು Mercedes-Benz ಶ್ರೇಣಿಯ ಅತ್ಯಂತ ಹಳೆಯ SUV ಗಳಲ್ಲಿ ಒಂದಾಗಿದೆ. ಇತರ ಮರ್ಸಿಡಿಸ್-ಬೆನ್ಜ್ ಮಾದರಿಗಳಂತೆ, ಜಿ-ವ್ಯಾಗನ್ ಕೂಡ ತನ್ನದೇ ಇತಿಹಾಸವನ್ನು ಹೊಂದಿದೆ.

ಇದನ್ನು ಆರಂಭದಲ್ಲಿ ಸೈನ್ಯಕ್ಕಾಗಿ ನಿರ್ಮಿಸಲಾಯಿತು ನಂತರ, ಜಿ-ವ್ಯಾಗನ್‌ನ ಹೆಚ್ಚು ಪ್ರೀಮಿಯಂ ಆವೃತ್ತಿಯನ್ನು ಕಂಪನಿ ನಾಗರಿಕರಿಗಾಗಿ ಪರಿಚಯಿಸಲಾಯಿತು. ಬಿಡುಗಡೆಯಾದಾಗಿನಿಂದ ಈ SUV ವಿನ್ಯಾಸ ಬದಲಾಗಿಲ್ಲ ಹಾಗೆಯೇ ಮುಂದುವರೆಸಲಾಗುತ್ತಿದೆ. ಮರ್ಸಿಡಿಸ್ ಮುಂಬರುವ ಎಲೆಕ್ಟ್ರಿಕ್ ಆವೃತ್ತಿ ಸೇರಿದಂತೆ ಎಲ್ಲಾ ತಲೆಮಾರುಗಳಲ್ಲಿ ಜಿ-ವ್ಯಾಗನ್‌ನ ಬಾಕ್ಸ್ ವಿನ್ಯಾಸವನ್ನೇ ಮುಂದುವರೆಸುತ್ತಿದೆ.

carrying-cement-bags-in-mercedes-g-wagon-suv-viral-video

ಪ್ರಸ್ತುತ ಪೀಳಿಗೆಯ G63 AMG, 4.0-ಲೀಟರ್ ಬೈ-ಟರ್ಬೊ V8 ಪೆಟ್ರೋಲ್ ಎಂಜಿನ್‌ನಿಂದ 585 Bhp ಪವರ್ ಮತ್ತು 850 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ಮತ್ತು ಕ್ರೀಡಾಪಟುಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. G63 AMG ಖರೀದಿಸಿದ ಇತ್ತೀಚಿನ ಭಾರತೀಯ ವ್ಯಕ್ತಿಗಳಲ್ಲಿ MS ಧೋನಿ ಕೂಡ ಒಬ್ಬರು.

G63 AMG ನ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆಯು 3.3 ಕೋಟಿ ರೂ. ಇದೆ. G350d ಅನ್ನು ನವೀಕರಿಸಿದ G400d ನೊಂದಿಗೆ ಬದಲಾಯಿಸಲಾಗಿದ್ದು, ಇದರ ಬೆಲೆ ರೂ 2.55 ಕೋಟಿ ಎಕ್ಸ್ ಶೋರೂಂ ಇದೆ. ಇಂತಹ ಐಷಾರಾಮಿ ಕಾರಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 13:31 [IST]
English summary
Carrying cement bags in mercedes g wagon suv viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+