ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳ ಬಳಿ ಇರುವ ಕಾರುಗಳಿವು
ಶ್ರೀಮಂತ ವ್ಯಕ್ತಿಗಳು ಐಷಾರಾಮಿ ಕಾರುಗಳತ್ತ ಒಲವು ಹೊಂದಿರುತ್ತಾರೆ. ಮುಖೇಶ್ ಅಂಬಾನಿಯಿಂದ ಅಮೆಜಾನ್ ಅಧ್ಯಕ್ಷ ಜೆಫ್ ಬೆಜೋಸ್'ರವರೆಗೆ, ಅವರು ಬಳಸುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಜೆಫ್ ಬೆಜೋಸ್:
ಅಮೆಜಾನ್ ಕಂಪನಿಯ ಸಿಇಒ ಜೆಫ್ ಬೆಜೋಸ್ ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ವಿಶ್ವದ ನಂಬರ್ 1 ಶ್ರೀಮಂತರಾಗಿದ್ದರೂ ಸಹ ಅವರು ಇನ್ನೂ ತಮ್ಮ ಪ್ರಯಾಣಕ್ಕಾಗಿ ಹೋಂಡಾ ಅಕಾರ್ಡ್ ಕಾರ್ ಅನ್ನು ಬಳಸುತ್ತಾರೆ.

ಎಲಾನ್ ಮಸ್ಕ್:
ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ ಎಲಾನ್ ಮಸ್ಕ್'ರವರು ಮೆಕ್ಲಾರೆನ್ ಎಫ್ 1 ಕಾರನ್ನು ಬಳಸುತ್ತಿದ್ದಾರೆ. ಈ ಕಾರ್ ಅನ್ನು ಜೇಮ್ಸ್ ಬಾಂಡ್ ಲೋಟಸ್ ಎಸ್ಪ್ರಿಟ್ ಸಿನಿಮಾದಲ್ಲಿ ಕಾಣಬಹುದು. ಈ ಸೂಪರ್ ಸಾಮರ್ಥ್ಯದ ಕಾರಿನ ಬೆಲೆ ರೂ.6.16 ಕೋಟಿಗಳಾಗಿದೆ.

ಬರ್ನಾರ್ಡ್ ಅರ್ನಾಲ್ಡ್:
ಫ್ರಾನ್ಸ್'ನ ಬರ್ನಾರ್ಡ್ ಅರ್ನಾಲ್ಡ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕಲೆಗಳ ಬಗ್ಗೆ ಒಲವನ್ನು ಹೊಂದಿರುವ ಅವರು ಬಿಎಂಡಬ್ಲ್ಯು 760 ಎಲ್ಐ ಕಾರ್ ಅನ್ನು ಬಳಸುತ್ತಿದ್ದಾರೆ. 2015ರ ಮಾದರಿಯ ಈ ಕಾರ್ ಅನ್ನು ಬರ್ನಾರ್ಡ್ ಅರ್ನಾಲ್ಡ್ ಈಗಲೂ ತಮ್ಮ ಪ್ರಯಾಣಕ್ಕಾಗಿ ಬಳಸುತ್ತಾರೆ.

ಬಿಲ್ ಗೇಟ್ಸ್:
91 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ತಮ್ಮ ಪ್ರಯಾಣಕ್ಕಾಗಿ ಪೋರ್ಷೆ 959 ಕಾರ್ ಅನ್ನು ಬಳಸುತ್ತಾರೆ.ಅವರು ಈ ಕಾರ್ ಅನ್ನು 1980 ರಲ್ಲಿ ಖರೀದಿಸಿದರು.

ಮಾರ್ಕ್ ಜೂಕರ್ ಬರ್ಗ್:
ಫೇಸ್ ಬುಕ್ ಸ್ಥಾಪಕರಾದ ಮಾರ್ಕ್ ಜೂಕರ್ ಬರ್ಗ್ ಸುಮಾರು 73 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು ಹೋಂಡಾ ಜಾಝ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ಅವರು ಹಲವು ಬಾರಿ ಕಾಣಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ.

ವಾರೆನ್ ಬಫೆಟ್:
ಅಮೆರಿಕಾದ ಖ್ಯಾತ ಉದ್ಯಮಿಯಾದ ವಾರೆನ್ ಬಫೆಟ್ ಹಲವು ಉದ್ಯಮಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬರ್ಕ್ಷೈರ್ ಹ್ಯಾಥ್‌ವೇಯ ಅಧ್ಯಕ್ಷ ಹಾಗೂ ಸಿಇಒ ಆಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ವಾರೆನ್ ಬಫೆಟ್'ರವರು ಕ್ಯಾಡಿಲಾಕ್ ಎಕ್ಸ್‌ಟಿಎಸ್ ಎಂಬ ಹೆಚ್ಚು ಸುರಕ್ಷಿತವಾದ ಐಷಾರಾಮಿ ಕಾರನ್ನು ಬಳಸುತ್ತಿದ್ದಾರೆ.

ಲ್ಯಾರಿ ಪೇಜ್ / ಶೆರ್ಕಿ ಬ್ರಿಯಾನ್:
ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಶೆರ್ಕಿ ಬ್ರಿಯಾನ್ ಈ ಹಿಂದೆ ಒಂದೇ ವಾಹನದಲ್ಲಿ ಕಾಣಿಸಿಕೊಂಡಿದ್ದರು. ಅವರಿಬ್ಬರು ಬಳಕೆಗಾಗಿ ಪ್ರತ್ಯೇಕವಾದ ಕಾರುಗಳನ್ನು ಸಹ ಹೊಂದಿದ್ದಾರೆ. ಲ್ಯಾರಿ ಪೇಜ್ ಟೆಸ್ಲಾ ರೋಡ್ಸ್ಟರ್ ಕಾರ್ ಅನ್ನು ಹೊಂದಿದ್ದರೆ, ಶೆರ್ಕಿ ಬ್ರಿಯಾನ್ ಟೊಯೊಟಾ ಪ್ರಿಯಸ್ ಕಾರ್ ಅನ್ನು ಹೊಂದಿದ್ದಾರೆ.

ಲ್ಯಾರಿ ಎಲಿಸನ್:
ಒರಾಕಲ್ ಕಂಪನಿಯ ಸಿಇಒ ಲ್ಯಾರಿ ಎಲಿಸನ್ 65 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು ಲೆಕ್ಸಸ್ ಎಲ್ಎಫ್ಎ, ಮೆಕ್ಲಾರೆನ್ ಎಫ್ 1 ಹಾಗೂ ಲೆಕ್ಸಸ್ ಎಲ್ಎಸ್ 600 ಹೆಚ್ ಸೇರಿದಂತೆ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಮುಖೇಶ್ ಅಂಬಾನಿ:
ಏಷ್ಯಾದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ 59 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು ರೋಲ್ಸ್ ರಾಯ್ಸ್, ಆಯ್ಸ್ಟನ್ ಮಾರ್ಟಿನ್, ಬೆಂಝ್, ಬಿಎಂಡಬ್ಲ್ಯು, ಮೇಬ್ಯಾಕ್ 62 ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಅಮಾನ್ಸಿಯೋ ಒರ್ಟೆಗಾ:
ಅಮಾನ್ಸಿಯೋ ಒರ್ಟೆಗಾ ಸ್ಪೇನ್‌ನ ಅಗ್ರ 10 ಶ್ರೀಮಂತರಲ್ಲಿ ಒಬ್ಬರು. ಅವರ ನಿವ್ವಳ ಆಸ್ತಿ ಮೌಲ್ಯ 58 ಬಿಲಿಯನ್ ಡಾಲರ್'ಗಳಾಗಿದೆ. ಅವರು ಆಡಿ ಎ 8, ಮರ್ಸಿಡಿಸ್ ಜಿಎಲ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದಾರೆ.


Click it and Unblock the Notifications