ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ಜಾರ್ಜಿಯಾ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನವೊಂದು ಸೂರ್ಯನ ಬಿಸಿಲಿನಲ್ಲಿ ನಿಲ್ಲಿಸುವ ಕಾರಿನೊಳಗಿನ ಶಾಖವು ಕರೋನಾ ವೈರಸ್ ಅನ್ನು ಕೊಲ್ಲುತ್ತದೆ ಎಂದು ಹೇಳಿದೆ. ಈ ಅಧ್ಯಯನದ ಪ್ರಕಾರ ಕಾರಿನ ಶಾಖವು ಕರೋನಾ ವೈರಸ್ ಅನ್ನು 99.99%ನಷ್ಟು ಕೊಲ್ಲುತ್ತದೆ.

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ಕರೋನಾ ವೈರಸ್ ಕಾರಿನೊಳಗಿನ ವಿವಿಧ ತಾಪಮಾನದಲ್ಲಿ 5 ರಿಂದ 20 ನಿಮಿಷಗಳ ಕಾಲ ಮಾತ್ರ ಬದುಕಬಲ್ಲದು ಎಂದು ಹೇಳಲಾಗಿದೆ. ನ್ಯೂಸ್ 18 ಆಟೋದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೊರಗಿನ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಆಗಿದ್ದಾಗ ಕಾರಿನೊಳಗಿನ ತಾಪಮಾನವು 45ಡಿಗ್ರಿ ಸೆಲ್ಸಿಯಸ್‌ಗಳಿಗೆ ತಲುಪುತ್ತದೆ. ಹೊರಗಿನ ತಾಪಮಾನವು ಹಗಲಿನಲ್ಲಿ 31 ಡಿಗ್ರಿ ಸೆಲ್ಸಿಯಸ್‌ಗಳಾಗಿದ್ದರೆ, ಕಾರಿನೊಳಗಿನ ತಾಪಮಾನವು 55 ಡಿಗ್ರಿ ಸೆಲ್ಸಿಯಸ್ ಆಗುತ್ತದೆ. ಇದು ಕಾರಿನೊಳಗೆ ಹೆಚ್ಚಿನ ಪ್ರಮಾಣದ ಶಾಖ ಸೃಷ್ಟಿಸಿ, ಕೋವಿಡ್ -19 ಸೇರಿದಂತೆ ಹಲವು ವೈರಸ್‌ಗಳನ್ನು ಕೊಲ್ಲುತ್ತದೆ.

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ಈ ಹಿಂದೆ ನಡೆಸಲಾಗಿದ್ದ ಅಧ್ಯಯನದ ಪ್ರಕಾರ ಕೋವಿಡ್ -19 ವೈರಸ್ ಪೇಪರ್ ಹಾಗೂ ರಟ್ಟಿನ ಮೇಲೆ ಒಂದು ದಿನ, ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಮೇಲೆ ಮೂರು ದಿನಗಳ ಕಾಲ ಬದುಕುತ್ತದೆ. ಕಾರಿನೊಳಗಿನ ತಾಪಮಾನವು 54 ಡಿಗ್ರಿ ಸೆಲ್ಸಿಯಸ್‌ಗಳಾಗಿದ್ದರೆ, 99.99%ನಷ್ಟು ವೈರಸ್‌ಗಳು 20 ನಿಮಿಷಗಳಲ್ಲಿ ಸಾಯುತ್ತವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ತಾಪಮಾನವು 74 ಸೆಲ್ಸಿಯಸ್‌ಗಳಾಗಿದ್ದರೆ, ವೈರಸ್ 5 ನಿಮಿಷಗಳಲ್ಲಿ ಸಾಯುತ್ತದೆ. ಜಾರ್ಜಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಟ್ರಾವಿಸ್ ಗ್ಲೆನ್‌ರವರ ಪ್ರಕಾರ ಅಧ್ಯಯನವು ಇನ್ನೂ ಮುಂದುವರೆದಿದ್ದು, ಅನೇಕ ಹೊಸ ಸಂಗತಿಗಳು ಹೊರಬರಲಿವೆ. ತಾಪಮಾನವು ಹೆಚ್ಚಾದರೆ, ವೈರಸ್‌ ಬದುಕುಳಿಯುವ ಸಮಯ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ನಾವು ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ಕಾರಿನೊಳಗಿನ ತಾಪಮಾನ ಏರಿಕೆಯಾಗಿ ಕರೋನಾ ವೈರಸ್ ಸಾಯುತ್ತದೆ ಎಂದು ಪ್ರೊಫೆಸರ್ ಟ್ರಾವಿಸ್ ಹೇಳಿದ್ದಾರೆ. ಕಾರನ್ನು ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಲಿರುವ ಸ್ಥಳದಲ್ಲಿ ನಿಲ್ಲಿಸಿದರೆ ಅದರಲ್ಲಿರುವ ವೈರಸ್‌ಗಳು ನಾಶವಾಗುತ್ತವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ವಿಶ್ವಾದ್ಯಂತ ಕರೋನಾ ವೈರಸ್ ಸೋಂಕಿತರ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚಾಗಿದ್ದು, 3.30 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಹೊಸ ಅಧ್ಯಯನ ವರದಿ, ಕರೋನಾ ವೈರಸ್ ಕೊಲ್ಲಲಿದೆ ಸೂರ್ಯನ ಬಿಸಿಲು

ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು, 3,583 ಜನರು ಸಾವನ್ನಪ್ಪಿದ್ದಾರೆ. 48,534 ಜನರು ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳು ಕರೋನಾ ವೈರಸ್‌ನಿಂದ ಹೆಚ್ಚು ಹಾನಿಗೊಳಗಾಗಿವೆ.

Most Read Articles

Kannada
English summary
Cars parked under sunlight kills coronavirus according to new study. Read in Kannada.
Story first published: Friday, May 22, 2020, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X