ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಇಟಲಿಯ ಲುಕಾ ಕೊರ್ಬೆರಿ ವಿಶ್ವ ವಿಖ್ಯಾತ ಕಾರ್ಟ್ ರೇಸಿಂಗ್ ಆಟಗಾರ. ಅವರು ಕಾರ್ಟ್ ರೇಸಿಂಗ್ ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ. ಕಾರ್ಟ್ ರೇಸಿಂಗ್ ಪ್ರಿಯರು ಅವರನ್ನು ಮರೆಯಲು ಸಾಧ್ಯವೇ ಇಲ್ಲ.

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಈಗ ಲುಕಾ ಕೊರ್ಬೆರಿ ತಮ್ಮ ನಡೆಯಿಂದಾಗಿ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಎಫ್‌ಐಎ ಕಾರ್ಟಿಂಗ್ ವಿಶ್ವ ಚಾಂಪಿಯನ್‌ಶಿಪ್ ಕಳೆದ ಭಾನುವಾರ ಇಟಲಿಯ ಲೋನಾಡಾದ ಸೌತ್ ಗಾರ್ಡಾ ಕಾರ್ಟಿಂಗ್ ಸರ್ಕ್ಯೂಟ್‌ನಲ್ಲಿ ನಡೆಯಿತು. ಅದರಲ್ಲಿ ಲುಕಾ ಕಾರ್ಬೆರಿ ಸೇರಿದಂತೆ ವಿಶ್ವದ ಹಲವು ದೇಶಗಳ ಕಾರ್ಟಿಂಗ್ ರೇಸರ್ ಗಳು ಭಾಗವಹಿಸಿದ್ದರು.

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಉತ್ತಮವಾಗಿಯೇ ಆಡುತ್ತಿದ್ದ ಅವರ ವಾಹನಕ್ಕೆ ಅವರದೇ ತಂಡದ ಆಟಗಾರ ಪಾವೊಲೊ ಇಪ್ಪೊಲಿಟೊರವರಿದ್ದ ವಾಹನವು ಒಂಬತ್ತನೇ ಸುತ್ತಿನಲ್ಲಿ ಡಿಕ್ಕಿ ಹೊಡೆದಾಗ ಅವರ ಕಾರ್ಟಿಂಗ್ ವಾಹನವು ತೀವ್ರವಾಗಿ ಹಾನಿಗೊಳಗಾಯಿತು. ಇದರಿಂದಾಗಿ ಅವರಿಗೆ ಸ್ಪರ್ಧೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಇದರಿಂದ ಲುಕಾ ಕೊರ್ಬೆರಿ ಕೋಪಗೊಂಡಿದ್ದಾರೆ. ತನ್ನ ವಾಹನದಿಂದ ಹೊರಗೆ ಬಂದಿದ್ದ ಬಂಪರ್ ಅನ್ನು ಪಾಲೊ ಇಪ್ಪೊಲಿಟೊ ಮೇಲೆ ಎಸೆದಿದ್ದಾರೆ. ಲುಕಾ ಅವರ ಈ ವರ್ತನೆಯು ವೀಕ್ಷಕರಿಗೆ ಆಘಾತವನ್ನುಂಟು ಮಾಡಿದೆ.

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಪಂದ್ಯದ ನಂತರವೂ ಪಾರ್ಕಿಂಗ್ ಸ್ಥಳದಲ್ಲಿ ಇವರಿಬ್ಬರ ನಡುವೆ ಘರ್ಷಣೆ ಮುಂದುವರೆದಿದೆ. ಸಹ ಕ್ರೀಡಾಪಟುಗಳು ಹಾಗೂ ಕ್ರೀಡಾಂಗಣದ ಸಿಬ್ಬಂದಿ ಜಗಳ ಬಿಡಿಸಿದ್ದಾರೆ. ಇವರಿಬ್ಬರ ನಡುವಿನ ಜಗಳದ ವೀಡಿಯೊಗಳು ವೈರಲ್ ಆಗಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಈ ಘಟನೆಯು ವಿವಾದವನ್ನು ಸೃಷ್ಟಿಸಿದೆ. ಎಫ್‌ಐಎ ಈ ಬಗ್ಗೆ ತನಿಖೆ ನಡೆಸಿದೆ. ಲುಕಾ ಅವರು ಸಮಿತಿಗೆ ನೀಡಿದ ಉತ್ತರ ಸ್ವೀಕಾರಾರ್ಹವಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಲುಕಾ ಕೊರ್ಬೆರಿ ಅವರು ಕಾರ್ಟ್ ರೇಸಿಂಗ್‌ನಲ್ಲಿ ಪಾಲ್ಗೊಳ್ಳದಂತೆ ಆಜೀವನ ಪರ್ಯಂತ ನಿಷೇಧ ಹೇರಲಾಗಿದೆ.

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಇದರ ನಡುವೆ ಲುಕಾ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕೃತ್ಯಗಳಿಗಾಗಿ ಕ್ಷಮೆಯಾಚಿಸಿದ್ದಾರೆ. ನನ್ನ ಈ ಕೃತ್ಯಕ್ಕಾಗಿ ನಾನು ಮೋಟಾರ್ ಸ್ಪೋರ್ಟ್ ಸಮುದಾಯದ ಕ್ಷಮೆ ಕೋರುತ್ತೇನೆ ಎಂದು ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಈ ರೀತಿಯ ನಾಚಿಕೆಗೇಡಿನ ಕೆಲಸ ಮಾಡಲು ಯಾವುದೇ ಕಾರಣಗಳಿಲ್ಲ. ನನ್ನ 15 ವರ್ಷಗಳ ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಕೆಲಸ ಮಾಡಿದ್ದೇನೆ. ಭವಿಷ್ಯದಲ್ಲಿ ಇನ್ನೆಂದು ಈ ರೀತಿಯ ಕೃತ್ಯವನ್ನು ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಅವರ ಕಾರ್ಟ್ ರೇಸ್ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಲುಕಾ ಕಾರ್ಬಿನ್ ತನ್ನ ಕೃತ್ಯಕ್ಕೆ ಶಿಕ್ಷೆ ಅನುಭವಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಇನ್ನು ಮುಂದೆ ಯಾವುದೇ ಮೋಟಾರ್ ರೇಸಿಂಗ್‌ನಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

23 ವರ್ಷದ ಲುಕಾ ಕೊರ್ಬೆರಿಯವರ ಈ ನಡೆ ಖಂಡನೀಯವಾದರೂ, ಅವರ ಮೇಲಿನ ನಿಷೇಧ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಭಾನುವಾರ ನಡೆದ ಪಂದ್ಯದಿಂದಲೂ ಅವರನ್ನು ಹೊರಹಾಕಲಾಯಿತು ಎಂಬುದು ಗಮನಾರ್ಹ.

ಸಹ ಆಟಗಾರನ ಮೇಲೆ ಬಂಪರ್ ಎಸೆದು ಜೀವನ ಪರ್ಯಂತ ನಿಷೇಧಕ್ಕೆ ಒಳಗಾದ ಕಾರ್ಟ್ ರೇಸರ್

ಲುಕಾ ಅವರಿಗೆ ಆಜೀವನ ಪರ್ಯಂತ ನಿಷೇಧ ಹೇರಿರುವುದರ ಜೊತೆಗೆ ದಂಡ ವಿಧಿಸುವ ಸಾಧ್ಯತೆಗಳೂ ಇವೆ. ಲುಕಾ ಕೊರ್ಬೆರಿ ಯಾವುದೇ ರೀತಿಯ ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸುವುದಾಗಿ ಹೇಳಿದ್ದಾರೆ.

Most Read Articles

Kannada
English summary
Carting racer Luca Corberi banned for lifetime. Read in Kannada.
Story first published: Tuesday, October 6, 2020, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X