ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

ರಾಯಲ್ ಎನ್‌ಫೀಲ್ಡ್ ವಿಶ್ವದ ಅತಿದೊಡ್ಡ ಬೈಕ್ ತಯಾರಕ ಕಂಪನಿಗಳಲ್ಲಿಒಂದಾಗಿದೆ. ಈ ಬೈಕ್ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಸಾಮಾನ್ಯ ಜನರಿಗೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ನೆಚ್ಚಿನ ಬೈಕ್ ಆಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳು ಯಾರು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

1. ಜಾನ್ ಅಬ್ರಹಾಂ

ನಟ ಜಾನ್ ಅಬ್ರಹಾಂ ಬೈಕ್ ಪ್ರಿಯ. ಅವರು ಅನೇಕ ಸೂಪರ್‌ಬೈಕ್‌ಗಳನ್ನು ಹೊಂದಿದ್ದಾರೆ. ಹೊಸ ಹೊಸ ಬೈಕ್ ಗಳನ್ನು ಖರೀದಿಸುತ್ತಲೇ ಇರುತ್ತಾರೆ. ಜಾನ್ ಅಬ್ರಹಾಂ ಎರಡು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹೊಂದಿದ್ದು, ಈ ಎರಡೂ ಬೈಕ್‌ಗಳನ್ನು ಕಸ್ಟಮೈಸ್ ಮಾಡಲಾಗಿದೆ. ಜಾನ್ ಅಬ್ರಹಾಂರವರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್ ಗಳೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

2. ಗುಲ್ ಪನಾಗ್

ನಟಿ ಗುಲ್ ಪನಾಗ್ ತಮ್ಮ ನೇರ ನಡೆ ನುಡಿಗೆ ಹೆಸರುವಾಸಿಯಾಗಿದ್ದಾರೆ. ಗುಲ್ ಪನಾಗ್ ಹಲವಾರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹೊಂದಿದ್ದು, ಅವುಗಳನ್ನು ಚಂಡೀಗಢದಲ್ಲಿರುವ ಅವರ ಮನೆಯ ಪಾರ್ಕಿಂಗ್ ನಲ್ಲಿರಿಸಲಾಗಿದೆ. ಅವರು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಈ ಬೈಕಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

3. ವರುಣ್ ಧವನ್

ನಟ ವರುಣ್ ಧವನ್ ಯುವಜನರ ನೆಚ್ಚಿನ ನಟ. ಅವರು ಅನೇಕ ದುಬಾರಿ ಬೆಲೆಯ ಬೈಕುಗಳನ್ನು ಹೊಂದಿದ್ದಾರೆ. ಜೊತೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 500 ಬೈಕ್ ಸಹ ಹೊಂದಿದ್ದಾರೆ. ಕಸ್ಟಮೈಸ್ ಮಾಡಲಾದ ಈ ಬೈಕ್ ಆಲಿವ್ ಗ್ರೀನ್ ಬಣ್ಣವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

4. ನಾನಾ ಪಾಟೆಕರ್

ನಾನಾ ಪಾಟೆಕರ್ ರವರು ಬೈಕ್‌ಗಳನ್ನು ಹೆಚ್ಚು ಇಷ್ಟಪಡದೇ ಇದ್ದರೂ ರಾಯಲ್ ಎನ್‌ಫೀಲ್ಡ್ ಡಸರ್ಟ್ ಸ್ಟಾರ್ಮ್‌ ಬೈಕಿನೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ರಾಯಲ್ ಎನ್‌ಫೀಲ್ಡ್ ಡಸರ್ಟ್ ಸ್ಟಾರ್ಮ್ 500 ಬೈಕ್ ಬಿಡುಗಡೆಯಾದಾಗ ದುಬಾರಿ ಬೆಲೆಯನ್ನು ಹೊಂದಿತ್ತು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

5. ಮೋಹನ್ ಲಾಲ್

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅನೇಕ ಕಾರುಗಳನ್ನು ಹೊಂದಿದ್ದಾರೆ. ಜೊತೆಗೆ ಬೈಕುಗಳ ಸಂಗ್ರಹವನ್ನು ಹೊಂದಿದ್ದಾರೆ. ಮೋಹನ್ ಲಾಲ್ ಕ್ರೋಮ್ ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿದ್ದಾರೆ. ಈ ಬೈಕಿನಲ್ಲಿ ಅವರು ಮನೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಎಂದಿಗೂ ಈ ಬೈಕಿನಲ್ಲಿ ಹೊರಬಂದಿಲ್ಲ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

6. ಆದಿತ್ಯ ರಾಯ್ ಕಪೂರ್

ನಟ ಆದಿತ್ಯ ರಾಯ್ ಕಪೂರ್, ರಾಯಲ್ ಎನ್‌ಫೀಲ್ಡ್‌ನ ಮ್ಯಾಕಿಸ್ಮೊ 500 ಬೈಕ್ ಹೊಂದಿದ್ದಾರೆ. ಈ ಬೈಕ್‌ ಅನ್ನು ಎವಿಎಲ್ ಎಂಜಿನ್ ಹಾಗೂ ಐರನ್-ಕಾಸ್ಟ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕ್ ರಾಯಲ್ ಎನ್‌ಫೀಲ್ಡ್ ಕಂಪನಿಯ ಅತ್ಯುತ್ತಮ ಬೈಕುಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

7. ಜಾಕಿ ಶ್ರಾಫ್

ಜಾಕಿ ಶ್ರಾಫ್ ತಮ್ಮ ಯೌವನದಿಂದಲೂ ಬೈಕ್ ಉತ್ಸಾಹಿಯಾಗಿದ್ದಾರೆ. ತಮ್ಮ ಬೈಕ್ ಅನ್ನು ಘೋಸ್ಟ್ ರೈಡರ್ ನಿಂದ ಸ್ಫೂರ್ತಿ ಪಡೆದು ಮಾಡಿಫೈಗೊಳಿಸಿದ್ದರು. ಈಗ ಅವರು ಕ್ರೋಮ್ ಬಣ್ಣದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಹೊಂದಿದ್ದು, ಹಲವು ಬಾರಿ ಈ ಬೈಕಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

8. ಜಾಂಟಿ ರೋಡ್ಸ್

ಜಾಂಟಿ ರೋಡ್ಸ್ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಭಾರತವನ್ನು ಹೆಚ್ಚು ಇಷ್ಟ ಪಡುವ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ಇಂಡಿಯಾ ಎಂದುಹೆಸರನ್ನಿಟ್ಟಿದ್ದಾರೆ. ಜಾಂಟಿ ರೋಡ್ಸ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್ ಹೊಂದಿದ್ದು, ಈ ಬೈಕಿನಲ್ಲಿ ಮುಂಬೈನ ರಸ್ತೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

9. ಬ್ರಾಡ್ ಪಿಟ್

ಬೈಕ್ ಪ್ರಿಯ ಬ್ರಾಡ್ ಪಿಟ್ ಹಲವಾರು ಬೈಕ್‌ಗಳನ್ನು ಹೊಂದಿದ್ದಾರೆ. ಬ್ರಾಡ್ ಪಿಟ್ ದಶಕಗಳಷ್ಟು ಹಳೆಯದಾದ ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಈ ಬೈಕ್‌ನೊಂದಿಗೆ ಕಾಣಿಸಿಕೊಂಡಿಲ್ಲ.

ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿರುವ ಸೆಲೆಬ್ರಿಟಿಗಳಿವರು

10. ಬಿಲ್ಲಿ ಜೋಯಲ್

ಅಮೆರಿಕಾದ ಗಾಯಕ ಹಾಗೂ ಬರಹಗಾರರಾದ ಬಿಲ್ಲಿ ಜೋಯೆಲ್, ರಾಯಲ್ ಎನ್‌ಫೀಲ್ಡ್ ಸೇರಿದಂತೆ ಹಲವು ಬೈಕ್‌ಗಳನ್ನು ಹೊಂದಿದ್ದಾರೆ. ಬಿಲ್ಲಿ ಜೋಯೆಲ್ ರವರು ಮಿಲಿಟರಿ ಗ್ರೀನ್ ಬಣ್ಣದಲ್ಲಿರುವ ಐರನ್-ಕಾಸ್ಟ್ ಎಂಜಿನ್ ಹೊಂದಿರುವ ಬುಲೆಟ್ ಬೈಕ್ ಅನ್ನು ಹೊಂದಿದ್ದಾರೆ. ಭಾರತದಲ್ಲಿ ಈ ಬಣ್ಣವನ್ನು ಹೊಂದಿರುವ ಬೈಕ್ ಗಳನ್ನು ಖಾಸಗಿಯವರು ಬಳಸುವುದಕ್ಕೆ ನಿಷೇಧ ಹೇರಲಾಗಿದೆ.

Most Read Articles

Kannada
English summary
Celebrities having Royal Enfield motorcycle, John Abraham to Brad Pitt. Read in Kannada.
Story first published: Wednesday, July 15, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X