ಇಣುಕಿ ನೋಡಿ ಹೋಗಿಬಿಟ್ಟ: ವೈರಲ್ ಆಯ್ತು ವಿಡಿಯೋ: ಕರೆತಂದು ಆಸೆ ಈಡೇರಿಸಿದ ಮಹಾನುಭಾವ!
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಡ, ಅಂಗವಿಕಲ ವ್ಯಕ್ತಿಯೊಬ್ಬರು ಬೆಂಟ್ಲೆ ಮತ್ತು ಇತರ ಸೂಪರ್ ಕಾರುಗಳನ್ನು ಶೋರೂಂ ಆಚೆಯಿಂದ ಇಣುಕಿ ನೋಡುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಈ ವಿಡಿಯೋ ಅದೇ ಅಂಗಡಿ ಮಾಲೀಕರ ಗಮನಕ್ಕೆ ಬಂದಿದ್ದು, ಮತ್ತದೇ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರು ಈ ವ್ಯಕ್ತಿಯನ್ನು ಹುಡುಕಿ ನನಗೆ ತಲುಪಲು ಸಹಾಯ ಮಾಡಬಹುದೇ ಎಂದು ಕೇಳಿಕೊಂಡಿದ್ದಾರೆ. ಬಳಿಕ ಹೇಗೋ ಇದು ಸಾಧ್ಯವಾಗಿದ್ದು, ಈಗ ಆ ವ್ಯಕ್ತಿಗೆ 3.5 ಕೋಟಿ ರೂ.ಗಳ ಮೌಲ್ಯದ ಲ್ಯಾಂಬೊರ್ಘಿನಿ ಹುರಾಕನ್ ಸೂಪರ್ ಕಾರ್‌ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಆಗಿದ್ದೇನು? ವಿವರಗಳಿಗೆ ಹೋದರೆ ವೀಡಿಯೊವನ್ನು ನಿಶಾಂತ್ ಸಾಬೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರು ಸೆರಾಮಿಕ್ ಪ್ರೊ ಇಂಡಿಯಾದ ಸ್ಥಾಪಕ ಮತ್ತು ಮಾಲೀಕರಾಗಿದ್ದಾರೆ. ಇವರು ಹೈದರಾಬಾದ್‌ನಲ್ಲಿ ಸೆರಾಮಿಕ್ ಶೋರೂಂ ಹೊಂದಿದ್ದು, ಕೆಲವು ದಿನಗಳ ಹಿಂದೆ ವೈರಲ್ ಆದ ಈ ನಿರ್ದಿಷ್ಟ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಅಂಗಡಿಯ ಗಾಜಿನ ಮುಂದೆ ನಿಂತಿರುವುದು ಕಂಡುಬಂದಿದೆ.

ವ್ಯಕ್ತಿಯು 5 ಕೋಟಿ ರೂ. ಮೌಲ್ಯದ ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಸೆಡಾನ್ ಅನ್ನು ಇಣುಕಿ ನೋಡುತ್ತಿದ್ದರು. ನಂತರ, ಹೊರಗೆ ನಿಲ್ಲಿಸಿದ್ದ ರೋಲ್ಸ್ ರಾಯ್ಸ್ ಕಲ್ಲಿನನ್ ಎಸ್‌ಯುವಿಯೊಂದಿಗೆ ತಮ್ಮ ಚಿತ್ರವನ್ನು ತೆಗೆಸಿಕೊಂಡಿದ್ದರು. ಈ ಎಲ್ಲಾ ದೃಶ್ಯಗಳು ಕೆಮರಾದಲ್ಲಿ ಸೆರೆಯಾಗಿದ್ದವು. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದಾಗ, ನೆಟ್ಟಿಗರು ಅಂಗಡಿಯ ಮಾಲೀಕರಿಗೆ ತಮ್ಮ ಲ್ಯಾಂಬೊರ್ಘಿನಿ ಹುರಾಕಾನ್‌ನಲ್ಲಿ ಸವಾರಿ ನೀಡುವಂತೆ ವಿನಂತಿಸಿದ್ದರು.
ಮಾಲೀಕರು ವೀಡಿಯೊದಲ್ಲಿರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಹಾಯ ಮಾಡುವಂತೆ ಅಂತರ್ಜಾಲದಲ್ಲಿ ಕೇಳಿದ ಕೂಡಲೇ ಎಲ್ಲಾ ಜನರ ಪ್ರಯತ್ನದಿಂದ, ಈ ವ್ಯಕ್ತಿ ಕೊನೆಗೂ ಪತ್ತೆಯಾದನು. ಟಾರ್ಕ್ ಇಂಡಿಯಾ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಶೀಘ್ರದಲ್ಲೇ ಆ ವ್ಯಕ್ತಿ ಮಾಲೀಕರ ಲ್ಯಾಂಬೊರ್ಘಿನಿಯಲ್ಲಿ ಸವಾರಿ ಮಾಡಲಿದ್ದಾರೆ ಎಂದು ವರದಿ ಮಾಡಿತ್ತು.

ಶೋರೂಂ ಮಾಲೀಕರು ಕೂಡ ಅವರ ಸಂಪರ್ಕ ವಿವರಗಳನ್ನು ಪಡೆದು, ನಾವು ಶೀಘ್ರದಲ್ಲೇ ಆ ವ್ಯಕ್ತಿಯನ್ನು ಲ್ಯಾಂಬೊರ್ಘಿನಿ ಕಾರಲ್ಲಿ ಹೈದರಾಬಾದ್ ರಸ್ತೆಗಳಲ್ಲಿ ಸವಾರಿ ಮಾಡಿಸುವುದನ್ನು ನೋಡಲಿದ್ದೇರೆ ಎಂದು ಹೇಳಿದ್ದರು. ಇದಾದ ನಂತರ, ನಿಶಾಂತ್ ಸಾಬೂ ತಮ್ಮ ಭರವಸೆ ಈಡೇರಿಸುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
ಈ ವೀಡಿಯೊದಲ್ಲಿ, ಅಂಗವಿಕಲ ವ್ಯಕ್ತಿ ಶೋರೂಂಗೆ ಆಗಮಿಸಿದ್ದು, ಮಾಲೀಕರು ಆತನನ್ನು ಸ್ವಾಗತಿಸಿದರು. ನಂತರ ಮಾಲೀಕರು ಲ್ಯಾಂಬೊರ್ಘಿನಿ ಹುರಾಕನ್ ಅಥವಾ ಫೆರಾರಿ 812 ಸೂಪರ್‌ಫಾಸ್ಟ್ ಯಾವ ಕಾರನ್ನು ಹೆಚ್ಚು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಆತ ಹುರಾಕನ್ ಆಯ್ಕೆ ಮಾಡಿದ್ದಾರೆ. ನಂತರ ಹುರಾಕನ್‌ನಲ್ಲಿ ಸವಾರಿಗೆ ಕರೆದೊಯ್ಯಲಾಯಿತು.
ಅಂತಿಮವಾಗಿ ಸವಾರಿ ಮುಗಿಸಿ ಬಂದ ನಂತರ ಅವರಿಬ್ಬರೂ ಒಟ್ಟಿಗೆ ಕೆಲವು ಚಿತ್ರಗಳನ್ನು ತೆಗೆದುಕೊಂಡರು. ಈ ಹೃದಯಸ್ಪರ್ಶಿ ವೀಡಿಯೊ ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ನೆಟ್ಟಿಗರು ನಿಶಾಂತ್ ಸಾಬೂ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








