ಚೈತ್ರ ಕುಂದಾಪುರ ಅವರ ಸೀಜ್ ಆದ ದುಬಾರಿ ಕಾರಿನ ಬಗ್ಗೆ ಗೊತ್ತಾ?
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ಪಡೆದುಕೊಂಡು ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ತಂಡ ವಂಚನೆ ಮಾಡಿದೆ. ಉದ್ಯಮಿಯಿಂದ ಕಿತ್ತುಕೊಂಡ ಕೋಟ್ಯಾಂತರ ಹಣದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು.
ಈ ದುಡ್ಡಿನಲ್ಲಿ ಕಿಯಾ ಕಂಪನಿಯ ದುಬಾರಿ ಕಾರನ್ನು ಖರೀದಿಸಿದ್ದರು. ಚೈತ್ರಾ ಕುಂದಾಪುರಳ ಕಿಯಾ ಕಾರು ಮುಧೋಳ ನಗರದಲ್ಲಿ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಹಿಂದೂ ಕಾರ್ಯಕರ್ತನೋರ್ವನ ಮನೆಯಲ್ಲಿ ಚೈತ್ರಾ ಕುಂದಾಪುರಳ ಕಿಯಾ ಕಾರೆನ್ಸ್ ಕಾರು ಪತ್ತೆಯಾಗಿದೆ. 32 ವರ್ಷದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಎಂಬವರ ಮನೆಯಲ್ಲಿದ್ದ ಚೈತ್ರಾ ಕುಂದಾಪುರಳ KA-20 ME 7253 ನಂಬರ್ ಹೊಂದಿರುವ ಕಿಯಾ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಿರಣ್ ಗಣಪ್ಪಗೋಳ ಮುಧೋಳದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಾನೆ. ಈ ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ತಂದೆಯ ನಂತರ ಕಿರಣ್ ಈ ಸ್ಕೂಲ್ ನಡೆಸುತ್ತಿದ್ದನು. ಚೈತ್ರಾ ಗ್ಯಾಂಗ್ ಡೀಲ್ ಪ್ರಕರನ ಹೊರಬಿದ್ದಾಗ, ಚೈತ್ರಾ ಪಿಎ ಶ್ರೀಕಾಂತ್, ಕಿರಣ್ಗೆ ಕರೆ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಕಾರ್ ಇದೆ.
ಆ ಕಾರನ್ನು ತಂದು ನಿಮ್ಮಬಳಿ ಇಟ್ಕೊಳ್ಳಿ ಎಂದು ಹೇಳಿದ್ದಾನೆ, ಅದರಂತೆ ಕಿರಣ್, ಸೆಪ್ಟೆಂಬರ್ 9ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ ತಂದಿದ್ದಾನೆ ಎಂದು ಹೇಳಿದ್ದಾನೆ. ಚೈತ್ರಾಳ ಫೋನ್ ಕಾಲ್ ಡೀಟೇಲ್ಸ್ ಆಧಾರದ ಮೇಲೆ ಕಿರಣ್ ಮನೆಗೆ ಹೋದಾಗ ಕಾರು ಪತ್ತೆಯಾಗಿದೆ. ಆಗ ಸಿಸಿಬಿ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚೈತ್ರಾ ಕುಂದಾಪುರಳ ಕಾರು ಕಿಯಾ ಕಾರೆನ್ಸ್ ಆಗಿದೆ. ಈ ಕಿಯಾ ಕಾರೆನ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಈ ಕಿಯಾ ಕಾರೆನ್ಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ಆನ್ ರೋಡ್ ಬೆಲೆಯು ರೂ.13.01 ಲಕ್ಷದಿಂದ ರೂ.23.44 ಲಕ್ಷವಾಗಿದೆ. ಕಿಯಾ ಕಾರೆನ್ಸ್ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಕಿಯಾ ಕಾರೆನ್ಸ್ ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿದೆ. ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯುವಂತೆಯೇ ಕಾರೆನ್ಸ್ ಕಾರಿನಲ್ಲೂ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯವಿದೆ.

ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ. ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ. ಈ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 115 ಬಿಎಚ್‌ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140 ಬಿಎಚ್‌ಪಿ, 242 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115 ಬಿಎಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಈ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ನೀಡುತ್ತದೆ.
ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ. ಈ ಕಾರಿನ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications