ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಇತ್ತೀಚೆಗೆ ಚಂಡೀಗಢ ಪೊಲೀಸರು ಚಂಡೀಗಢದ ರಸ್ತೆಯೊಂದರಲ್ಲಿ ಲ್ಯಾಂಬೊರ್ಗಿನಿ ಹುರಾಕನ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಕಾರಣಕ್ಕೆ ಬಹು ಕೋಟಿ ಬೆಲೆಯ ಸೂಪರ್‌ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಈ ಕಾರಿನ ಚಾಲಕನು ಕಾರಿನ ದಾಖಲೆಗಳನ್ನು ತೋರಿಸದ ಕಾರಣಕ್ಕೆ ಕಾರು ಈಗಲೂ ಪೊಲೀಸರ ವಶದಲ್ಲಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಕಾರ್ ಅನ್ನು ದೆಹಲಿಯಲ್ಲಿ ರಿಜಿಸ್ಟರ್ ಮಾಡಲಾಗಿದೆ. ಪೊಲೀಸರ ತಪಾಸಣೆ ವೇಳೆಯಲ್ಲಿ ಈ ಕಾರನ್ನು ನಗರದ ಮಮತಾ ಚೌಕ್‌ನಲ್ಲಿ ತಡೆದು ನಿಲ್ಲಿಸಲಾಗಿದೆ. ಈ ಕಾರನ್ನು ಚಾಲನೆ ಮಾಡುತ್ತಿದ್ದವನು ಅತಿ ವೇಗದಲ್ಲಿ ಚಾಲನೆ ಮಾಡುತ್ತಾ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ.

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ವರದಿಗಳ ಪ್ರಕಾರ, ಪೊಲೀಸರು ಲ್ಯಾಂಬೊರ್ಗಿನಿ ಹುರಾಕನ್ ಕಾರನ್ನು ತಡೆದು ನಿಲ್ಲಿಸಿದಾಗ, ಕಾರು ಸುಮಾರು 150 ಕಿ.ಮೀ ವೇಗದಲ್ಲಿತ್ತು. ಈ ಕಾರು ಚಾಲಕನು ಆರ್ ಸಿ, ಇನ್ಶ್ಯೂರೆನ್ಸ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದೇ ದಾಖಲೆಗಳನ್ನು ತೋರಿಸಿಲ್ಲ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಈ ಕಾರನ್ನು ಸದ್ಯಕ್ಕೆ ಸೆಕ್ಟರ್ 28ರ ಐಟಿಐ ಪೊಲೀಸ್ ಯಾರ್ಡ್‌ನಲ್ಲಿರಿಸಲಾಗಿದೆ. ಈ ಕಾರನ್ನು ಇಟಾಲಿಕಾ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕಂಪನಿಯು ಲ್ಯಾಂಬೊರ್ಗಿನಿ ಕಂಪನಿಯ ಅಧಿಕೃತ ಡೀಲರ್ ಆಗಿದೆ. ಎಷ್ಟು ಪ್ರಮಾಣದ ದಂಡ ವಿಧಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಆದರೆ ಸುಮಾರು ರೂ.20,000ಗಳ ದಂಡ ವಿಧಿಸಬಹುದು. ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ವಾಹನದ ಚಾಲಕ ಪೊಲೀಸ್ ಠಾಣೆಯಲ್ಲಿ ಹಾಜರಾದಾಗ ಮಾತ್ರ ದಂಡದ ಮೊತ್ತ ತಿಳಿದು ಬರಲಿದೆ. ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರೆ ದಂಡದ ಮೊತ್ತ ಹೆಚ್ಚಾಗಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಚಾಲಕನ ಡ್ರೈವಿಂಗ್ ಲೈಸೆನ್ಸ್ ಅನ್ನು 3 ತಿಂಗಳವರೆಗೆ ಅಮಾನತುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಇಡೀ ದೇಶಕ್ಕೆ ಅನ್ವಯಿಸುವಂತೆ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗುವುದೆಂದು ಹೇಳಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣಕ್ಕೆ ಬಹುತೇಕ ರಸ್ತೆಗಳು ಖಾಲಿಯಾಗಿದ್ದು, ಸೂಪರ್‌ಕಾರ್‌ ಹಾಗೂ ಸೂಪರ್‌ಬೈಕ್ ಗಳ ಮಾಲೀಕರು ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಅತಿ ವೇಗವಾಗಿ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ನಿನ್ನೆಯಷ್ಟೇ ಬೆಂಗಳೂರಿನಲ್ಲಿ 300 ಕಿ.ಮೀ ವೇಗದಲ್ಲಿ ಸಂಚರಿಸಿದ ಸೂಪರ್‌ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಯಮಹಾ ಆರ್ 1 ಮಾಲೀಕ ಅತಿ ವೇಗದಲ್ಲಿ ಬೈಕ್ ಚಾಲನೆ ಮಾಡಿ ಅದರ ವೀಡಿಯೊವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.

ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರು ವಶಕ್ಕೆ ಪಡೆದ ಪೊಲೀಸರು

ಈ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿ, ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಭಾರತದ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಯಾರು ಬೇಕಾದರೂ ಏಕಾಏಕಿ ಅಡ್ಡ ಬರಬಹುದು. ಈ ಕಾರಣಕ್ಕೆ ಭಾರತದ ರಸ್ತೆಗಳಲ್ಲಿ ನಿಗದಿತ ವೇಗದಲ್ಲಿ ವಾಹನ ಚಾಲನೆ ಮಾಡುವುದು ಒಳ್ಳೆಯದು.

ಚಿತ್ರಕೃಪೆ: ಪಂಜಾಬ್ ಕೇಸರಿ ಹರಿಯಾಣ

Most Read Articles

Kannada
English summary
Chandigarh cops seized Lamborghini Huracan for over speeding. Read in Kannada.
Story first published: Wednesday, July 22, 2020, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X