ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣವೆಂದು ಹೇಳಲಾಗಿದೆ.

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಕೆಲವೊಮ್ಮೆ ಬೇರೊಬ್ಬರು ಮಾಡುವ ತಪ್ಪುಗಳಿಂದಲೂ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿರುವುದು ಸಹ ಸೇರಿದೆ.

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾದ ಸಾಫ್ಟ್‌ವೇರ್ ಅನ್ನು ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ಮೋಹಿತ್ ಯಾದವ್ ಎಂಬುವವರು ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ರೋಡ್ ಪಲ್ಸ್ ಎಂಬ ಹೆಸರಿನ ಈ ಸಾಫ್ಟ್‌ವೇರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಸಾಫ್ಟ್‌ವೇರ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಸಾಫ್ಟ್‌ವೇರ್ ಕಾರ್ಯ ನಿರ್ವಹಣೆ

ರೋಡ್ ಪಲ್ಸ್ ಸಾಫ್ಟ್‌ವೇರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ಕಾರು ಚಾಲಕ ಮದ್ಯ ಸೇವಿಸಿದ ನಂತರ ತನ್ನ ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೆ, ಕಾರು ಆನ್ ಆಗುವುದಿಲ್ಲ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಇದೇ ವೇಳೆ ಕಾರು ಚಾಲಕ ಸೀಟ್ ಬೆಲ್ಟ್ ಧರಿಸುವವರೆಗೆ ಕಾರು ಸ್ಟಾರ್ಟ್ ಆಗುವುದಿಲ್ಲ. ಮೋಹಿತ್ ಅವರ ಪ್ರಕಾರ, ಸ್ಟೀಯರಿಂಗ್‌ನಲ್ಲಿ ಸೆನ್ಸಾರ್'ಗಳನ್ನು ಅಳವಡಿಸಿರುವ ಕಾರಣ ಚಾಲಕನ ದೇಹದಲ್ಲಿ 0.08%ಗಿಂತ ಹೆಚ್ಚು ಆಲ್ಕೋಹಾಲ್ ಇದ್ದರೆ ಕಾರು ಸ್ಟಾರ್ಟ್ ಆಗುವುದಿಲ್ಲ.

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಸಾಫ್ಟ್‌ವೇರ್ ವೈಶಿಷ್ಟ್ಯ

ಈ ಅಪಘಾತದಿಂದ ರಕ್ಷಿಸುವುದರ ಜೊತೆಗೆ ಇಂಡಿಕೇಟರ್ ಆನ್ ಮಾಡುವಲ್ಲಿ ಉಂಟಾಗುವ ತಪ್ಪನ್ನು ಸರಿ ಪಡಿಸುತ್ತದೆ. ಮೋಹಿತ್ ಅವರು ಈ ವಿಶಿಷ್ಟ ಫೀಚರ್ ಅನ್ನು ಈ ಸಾಫ್ಟ್‌ವೇರ್‌ನಲ್ಲಿ ಸೇರಿಸಿದ್ದಾರೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಇದರಿಂದ ಟರ್ನ್ ತೆಗೆದು ಕೊಳ್ಳುವ 50 ಮೀಟರ್ ಮೊದಲು ಇಂಡಿಕೇಟರ್ ಆಕ್ಟಿವೇಟ್ ಆಗುತ್ತದೆ. ಈ ಫೀಚರ್ ಅನ್ನು ಬಳಸಲು ಗೂಗಲ್ ಮ್ಯಾಪ್ ಹೊಂದಿರಬೇಕಾಗುತ್ತದೆ.

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಮಂಜು ಕವಿದ ವಾತಾವರಣದಲ್ಲಿ ಸಹಕಾರಿ

ಮಂಜು ಬೀಳುವಾಗ ಹಾಗೂ ಮಬ್ಬು ಇರುವ ಸಮಯದಲ್ಲಿ ರೋಡ್ ಪಲ್ಸ್ ಸಾಫ್ಟ್‌ವೇರ್ ಚಾಲಕನಿಗೆ ನೆರವಾಗುತ್ತದೆ. ಕಾರಿನಲ್ಲಿ ಅಳವಡಿಸಲಾದ ಸೆನ್ಸಾರ್'ಗಳ ಸಹಾಯದಿಂದ, ಈ ಸಾಫ್ಟ್‌ವೇರ್ ಕಾರು ಚಾಲನೆ ವೇಳೆ ಚಾಲಕನಿಗೆ ಮಾಹಿತಿ ನೀಡುತ್ತದೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ರಸ್ತೆ ಅಪಘಾತಗಳನ್ನು ತಡೆಯಲಿದೆ ರೋಡ್ ಪಲ್ಸ್ ಸಾಫ್ಟ್‌ವೇರ್

ಮಂಜು ಬೀಳುವ ಸಮಯದಲ್ಲಿ ಹಾಗೂ ಮಬ್ಬು ಇರುವ ಸಮಯದಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತದೆ. ರೋಡ್ ಪಲ್ಸ್ ಸಾಫ್ಟ್‌ವೇರ್ ಬಳಕೆಯಿಂದ ಮಂಜು ಬೀಳುವ ಸಮಯದಲ್ಲಿ ಹಾಗೂ ಮಬ್ಬು ಇರುವ ಸಮಯದಲ್ಲಿ ಉಂಟಾಗುವ ಅಪಘಾತಗಳಿಂದ ಪಾರಾಗಬಹುದು.

Most Read Articles

Kannada
English summary
Chandigarh university student develops software to prevent road accidents. Read in Kannada.
Story first published: Monday, April 26, 2021, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X