ಆಸ್ಟ್ರೇಲಿಯ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು! ಇಸ್ರೋ ಯಶಸ್ಸಿಗೆ ಕಲ್ಲು ಹಾಕ್ತಿದ್ದಾರಾ?

ಇತ್ತೀಚೆಗಷ್ಟೇ ವಿಶ್ವವೇ ತಿರುಗಿ ನೋಡುವಂತೆ ಚಂದ್ರಯಾನ-3 ರಾಕೆಟ್‌ ಅನ್ನು ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಲಾಗಿದೆ. ಈ ಮಿಷನ್ ಯಶಸ್ವಿಯಾದ್ರೆ ಅಮೆರಿಕಾ, ಚೀನಾ, ರಷ್ಯಾ ದೇಶಗಳ ನಂತರ ಈ ಸಾಧನೆ ಮಾಡಿದ ದೇಶವಾಗಿ ಭಾರತ ಗುರ್ತಿಸಿಕೊಳ್ಳಲಿದೆ. ಆದ್ರೆ ಅದಕ್ಕೂ ಮುನ್ನ ಚಂದ್ರಯಾನ-3 ಅವಶೇಷಗಳು ಸಿಕ್ಕಿರುವುದಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ.

ಆಸ್ಟ್ರೇಲಿಯಾದ ಕಡಲತೀರದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದ್ದು, ಅವಶೇಷಗಳು ಇಸ್ರೋದ ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ್ದವಾಗಿವೆ ಎಂಬ ವದಂತಿಯನ್ನು ಹುಟ್ಟುಹಾಕಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಜೂರಿಯನ್ ಬೇ ಬಳಿ ಈ ವಸ್ತು ಪತ್ತೆಯಾಗಿದೆ. ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆಯು ಈ ವಸ್ತುವನ್ನು ತನಿಖೆ ಮಾಡುತ್ತಿದ್ದು, ವಸ್ತುವಿನ ಮೂಲವನ್ನು ನಿರ್ಧರಿಸಲು ಅಂತರರಾಷ್ಟ್ರೀಯವಾಗಿ ಸಹಾಯವನ್ನು ಪಡೆಯುತ್ತಿದ್ದೇವೆ ಎಂದು ಹೇಳಿದೆ.

chandrayaan-3-debris-on-australian-beach

ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ, ಎಎಸ್‌ಎ, ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಬೇ ಬಳಿಯ ಕಡಲತೀರದಲ್ಲಿರುವ ಈ ವಸ್ತುವಿಗೆ ಸಂಬಂಧಿಸಿದಂತೆ ನಾವು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದೇವೆ. ವಸ್ತುವು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು, ಹೆಚ್ಚಿನ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವ ಜಾಗತಿಕ ಕೌಂಟರ್‌ಪಾರ್ಟ್‌ನೊಂದಿಗೆ ನಾವು ಸಂಪರ್ಕ ಹೊಂದಿದ್ದೇವೆ ಎಂದು ಟ್ವೀಟ್ ಮಾಡಿದೆ.

ಹೆಮ್ಮೆಯ ಮಿಷನ್ ಚಂದ್ರಯಾನ-3: ಚಂದ್ರಯಾನ 1 ಅನ್ನು ಮೊದಲ ಬಾರಿಗೆ 2008 ರಲ್ಲಿ ಉಡಾವಣೆ ಮಾಡಲಾಯಿತು. ಇದು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿ ಚಂದ್ರನ ಮೇಲೆ ಅಧ್ಯಯನ ಮಾಡಿತು. ಇದಾದ ಬಳಿಕ 2019 ರಲ್ಲಿ ಚಂದ್ರಯಾನ 2 ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಆದ್ರೆ ಇದು ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿತ್ತು.

ಹಾಗಾಗಿಯೇ ಇಸ್ರೋ ಈಗ ಚಂದ್ರಯಾನ-3 ಅನ್ನು ಸವಾಲಾಗಿ ಸ್ವೀಕರಿಸಿ ವಿಶ್ವ ಅಗ್ರ ದೇಶಗಳೊಂದಿಗೆ ಸಮಾನವಾಗಿ ಈ ಮಿಷನ್‌ ಅನ್ನು ಕೈಗೊತ್ತಿಂಡಿದೆ. ಸದ್ಯ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಚಂದ್ರನ ಮೇಲೆ ಕಾಲಿಡುವುದೊಂದೆ ಬಾಕಿಯಿದೆ. ಮೂಲಗಳ ಪ್ರಕಾರ ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ ಎಂದು ತಿಳಿದುಬಂದಿದೆ.

ಚಂದ್ರಯಾನ-3 ಮಿಷನ್ ಮುಖ್ಯ ಉದ್ದೇಶವು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದು ರೋಬೋಟಿಕ್ ರೋವರ್ ಕಾರ್ಯ ನಿರ್ವಹಣಾ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕ ಮತ್ತು ನೈಸರ್ಗಿಕ ಅಂಶಗಳು, ಮಣ್ಣು, ನೀರನ್ನು ಅನ್ವೇಷಿಸುವುದು ಇದರ ಮುಖ್ಯ ಗುರಿಯಾಗಿದ್ದು, ಅಂದುಕೊಂಡಂತೆ ಎಲ್ಲವೂ ಆದರೆ ವಿಶ್ವದ ಅಗ್ರ ದೇಶಗಳಂತೆ ಭಾರತವೂ ಮಿಂಚಲಿದೆ.

chandrayaan-3-debris-on-australian-beach

ಇಸ್ರೋ, ಚಂದ್ರಯಾನ 2ಕ್ಕೆ ಸುಮಾರು 978 ಕೋಟಿ ರೂಪಾಯಿ ವೆಚ್ಚಿಸಿತ್ತು. ಚಂದ್ರಯಾನ 3 ಯೋಜನೆಗೆ ಬರೋಬ್ಬರಿ 630 ಕೋಟಿ ರೂಪಾಯಿ ವ್ಯಯಿಸಿದೆ. ಈ ಬಾರಿ ಮಿಷನ್ ವಿಫಲವಾಗಲು ಸಾಧ್ಯವೇ ಇಲ್ಲ ಎಂದು ಇಸ್ರೋದ ಹಲವು ಮಾಜಿ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೂ ಮುನ್ನವೇ ಈ ರೀತಿಯ ಅಪಪ್ರಚಾರಗಳು ಹಬ್ಬುತ್ತಿರುವುದು ಎಷ್ಟು ಸರಿ ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

Article Published On: Tuesday, July 18, 2023, 17:34 [IST]
English summary
Chandrayaan 3 debris on australian beach
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+