Chandrayaan 3: ಯಶಸ್ವಿಯಾಗಿ ನಭಕ್ಕೆ ರಾಕೆಟ್ ಚಿಮ್ಮಿಸಿ ಇತಿಹಾಸ ನಿರ್ಮಿಸಿದ ಇಸ್ರೋ

ದೇಶವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ 3 (Chandrayaan 3) ವಿಷನ್‌ನ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಲ್ಯಾಂಡರ್ ಹಾಗೂ ರೋವರ್ ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿದೆ.

ಮಧ್ಯಾಹ್ನ 2:35ರ ಸುಮಾರಿಗೆ ಇಸ್ರೋ ವಿಜ್ಞಾನಿಗಳು, ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದ್ದು, ಆಗಸ್ಟ್ 23ರಂದು ಅಂದರೆ, 40 ದಿನಗಳ ನಂತರ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಸಾಧ್ಯತೆಯಿದೆ. ವಿಶೇಷವೆಂದರೆ ಇದು ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್‌ಗಿಂತ ಅರ್ಧದಷ್ಟು ಎತ್ತರವಿದೆ. ಈ ಮಿಷನ್ ಉದ್ದೇಶವೆಂದರೆ, ಚಂದ್ರನ ಮಣ್ಣು ಹಾಗೂ ಮೇಲ್ಮೈಯನ್ನು ಅಧ್ಯಯನ ಮಾಡುವುದಾಗಿದೆ.

Chandrayaan 3: ಯಶಸ್ವಿಯಾಗಿ ನಭಕ್ಕೆ ರಾಕೆಟ್ ಚಿಮ್ಮಿಸಿ ಇತಿಹಾಸ ನಿರ್ಮಿಸಿದ ಇಸ್ರೋ

ಇಸ್ರೋ ವಿಜ್ಞಾನಿಗಳು, 2019ರಲ್ಲಿ ನಡೆಸಿದ್ದ ಚಂದ್ರಯಾನ 2 ಕಡೆ ಕ್ಷಣದಲ್ಲಿ ವೈಪಲ್ಯವಾಗಿತ್ತು. ಆ ಕಾರಣಕ್ಕೆ ಚಂದ್ರನ ಮೇಲೆ ಗುರುತ್ವಾಕರ್ಷಣ ಶಕ್ತಿ ಕಡಿಮೆ ಇರುವುದರಿಂದ ಈ ಬಾರಿ, ಲ್ಯಾಂಡರ್‌ನ್ನು 'ಸಾಫ್ಟ್ ಲ್ಯಾಂಡಿಂಗ್' ಮಾಡಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಒಂದೊಮ್ಮೆ ಇದರಲ್ಲಿ ಯಶಸ್ಸು ಕಂಡರೆ, ಅಮೆರಿಕ, ಚೀನಾ ಹಾಗೂ ರಷ್ಯಾ ಬಳಿಕ, ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಸೇರ್ಪಡೆಯಾಗಲಿದೆ.

ಮೊದಲಿಗೆ ಚಂದ್ರನ ಮೇಲೆ ಲ್ಯಾಂಡರ್‌ ಇಳಿಯಲಿದೆ. ಆ ಬಳಿಕ, ರೋವರ್ ಅದರಿಂದ ಬೇರ್ಪಟ್ಟು ಅಧ್ಯಯನವನ್ನು ನಡೆಸಿ, ಮಾಹಿತಿಯನ್ನು ಕಳುಹಿಸಲಿದೆ. ಇಸ್ರೋ, ಚಂದ್ರಯಾನ 3 ಯೋಜನೆಗೆ ಬರೋಬ್ಬರಿ 630 ಕೋಟಿ ರೂಪಾಯಿ ವ್ಯಯಿಸಿದೆ. ಚಂದ್ರಯಾನ 2ಕ್ಕೆ ಸುಮಾರು 978 ಕೋಟಿ ರೂಪಾಯಿ ವೆಚ್ಚವಾಗಿತ್ತು. ಚಂದ್ರಯಾನ 3 ಈ ಬಾರಿ ವಿಫಲವಾಗಲು ಸಾಧ್ಯವೇ ಇಲ್ಲ ಎಂದು ಇಸ್ರೋದ ಹಲವು ಮಾಜಿ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Chandrayaan 3: ಯಶಸ್ವಿಯಾಗಿ ನಭಕ್ಕೆ ರಾಕೆಟ್ ಚಿಮ್ಮಿಸಿ ಇತಿಹಾಸ ನಿರ್ಮಿಸಿದ ಇಸ್ರೋ

ಚಂದ್ರಯಾನ ಮಿಷನ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿತ್ತು. ಈ ಯೋಜನೆಯನ್ನು 2003ರ ಆಗಸ್ಟ್ 15ರಂದು ಘೋಷಣೆ ಮಾಡಿದ್ದರು. ಇಸ್ರೋ ವಿಜ್ಞಾನಿಗಳ ದೊಡ್ಡಮಟ್ಟದ ಪ್ರಯತ್ನದಿಂದ 2008ರ ಅಕ್ಟೋಬರ್ ತಿಂಗಳಲ್ಲಿ ಚಂದ್ರಯಾನ 1 ಪ್ರಾರಂಭವಾಗಿ, 2009ರ ಆಗಸ್ಟ್ ತನಕ ಕಾರ್ಯನಿರ್ವಹಿಸಿತ್ತು. 2019ರಲ್ಲಿ, ಚಂದ್ರಯಾನ 2ರ ಲ್ಯಾಂಡರ್ ಕಡೆ ಹಂತದಲ್ಲಿ ವಿಫಲವಾಗಿತ್ತು. ಆರ್ಬಿಟರ್ ಇವತ್ತಿಗೂ ಚಂದ್ರನನ್ನು ಸುತ್ತುತ್ತಿದ್ದು, ಮಾಹಿತಿಯನ್ನು ಕಳುಹಿಸುತ್ತಿದೆ.

ಈ ಯೋಜನೆ ಯಶಸ್ವಿಗೆ ದೇಶವೇ ತುದಿಗಾಲಿನಲ್ಲಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಚಂದ್ರಯಾನ 3 ಯೋಜನೆಗೆ ಟ್ವೀಟ್ ಮಾಡಿ, ಶುಭ ಹಾರೈಸಿದ್ದಾರೆ. 'ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜುಲೈ 14ನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಿದೆ. ನಮ್ಮ ಮೂರನೇ ಚಂದ್ರಯಾನ ಅದರ ಪ್ರಯಾಣವನ್ನು ಶುರು ಮಾಡಲಿದ್ದು, ದೇಶದ ಭರವಸೆ ಹಾಗೂ ಕನಸುಗಳನ್ನು ಹೊತ್ತೊಯ್ಯುತ್ತದೆ' ಎಂದು ಹೇಳಿದ್ದರು.

ಇನ್ನು, ಚಂದ್ರಯಾನ 3 ಯೋಜನೆಯ ಲ್ಯಾಂಡರ್ ಹಾಗೂ ರೋವರ್ ಹೊತ್ತ ರಾಕೆಟ್ ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ್ದು, ರಾಕೆಟ್ ನಿಂದ ಪೇಲೋಡ್ ಬೇರ್ಪಟ್ಟಿದೆ. ಆಗಸ್ಟ್ 23 ರಂದು ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಎಂಬುದು ಕೋಟ್ಯಾಂತರ ಭಾರತೀಯರ ಆರೈಕೆಯಾಗಿದೆ. ಈ ಮಿಷನ್ ಮೂಲಕ ಭಾರತವು ಅಮೆರಿಕ, ಚೀನಾ ಹಾಗೂ ರಷ್ಯಾ ದೇಶಗಳಂತೆ ಚಂದ್ರ ಮೇಲೆ ವಿವಿಧ ಅಧ್ಯಯನಗಳನ್ನು ಮಾಡಲು ಸಾಧ್ಯವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 14, 2023, 14:46 [IST]
English summary
Chandrayaan 3 isro launch successful details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+