Chandrayaan-3 ಉಡಾವಣೆಗೆ ಮುಹೂರ್ತ ಫಿಕ್ಸ್... ಈ ಬಾರಿ ಗುರಿ ತಪ್ಪೋದೆ ಇಲ್ಲ... ವಿಶ್ವದ ಚಿತ್ತ ಭಾರತದತ್ತ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಬಹು ನಿರೀಕ್ಷಿತ ಚಂದ್ರಯಾನ 3 ರ ಉಡಾವಣೆ ದಿನಾಂಕವನ್ನು ದೃಢಪಡಿಸಿದೆ. ರಾಕೆಟ್ ಅನ್ನು ಜುಲೈ 13 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಉಡಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ಇಂದು ಘೋಷಿಸಿದ್ದಾರೆ.

ಇಸ್ರೋ ಚಂದ್ರನ ಅನ್ವೇಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದಕ್ಕಾಗಿ ಬಾಹ್ಯಾಕಾಶದಲ್ಲಿ ಚಂದ್ರಯಾನ ಯೋಜನೆಯನ್ನು ನಡೆಸಲಾಗುತ್ತಿದ್ದು, ಚಂದ್ರಯಾನ 1 ಅನ್ನು ಮೊದಲ ಬಾರಿಗೆ 2008 ರಲ್ಲಿ ಉಡಾವಣೆ ಮಾಡಲಾಯಿತು. ಇದು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿ ಚಂದ್ರನ ಮೇಲೆ ಅಧ್ಯಯನ ಮಾಡಿತು. ಇದಾದ ಬಳಿಕ ಕಳೆದ ಬಾರಿ (2019) ಚಂದ್ರಯಾನ 2 ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.

chandrayaan-3-launch-date-july-13-officials-revealed

2019 ರಲ್ಲಿ ಉಡಾವಣೆಯಾದ ಚಂದ್ರಯಾನ 2 ಅದರ ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಡಿಕ್ಕಿ ಹೊಡೆದಿತ್ತು. ಹೀಗಾಗಿ ಚಂದ್ರಯಾನ 2 ಯಶಸ್ಸು ಕಂಡಿರಲಿಲ್ಲ. ಆಗಲೇ ಇಸ್ರೋ Chandrayaan-3 ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಈಗ ಮುಂಬರುವ ಮಿಷನ್‌ನ ಯಶಸ್ಸಿನ ಸಾಮರ್ಥ್ಯದ ಬಗ್ಗೆ ಇಸ್ರೋ ಅಧಿಕಾರಿಗಳು ತುಂಬಾ ಉತ್ಸುಕವಾಗಿದ್ದಾರೆ.

ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸುವ ತನ್ನ ಮೊದಲ ವಿಫಲ ಪ್ರಯತ್ನದ ಸುಮಾರು ನಾಲ್ಕು ವರ್ಷಗಳ ನಂತರ, ಇಸ್ರೋ ತನ್ನ ಮೂರನೇ ಚಂದ್ರಯಾನವನ್ನು ಜುಲೈ 13 ರಂದು ಉಡಾವಣೆ ಮಾಡಲಿದೆ.

ಚಂದ್ರಯಾನ-3 ಮಿಷನ್ ಚಂದ್ರನ ಬಗ್ಗೆ ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮಿಷನ್ ಮುಖ್ಯ ಉದ್ದೇಶವು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದು ರೋಬೋಟಿಕ್ ರೋವರ್ ಕಾರ್ಯ ನಿರ್ವಹಣಾ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕ ಮತ್ತು ನೈಸರ್ಗಿಕ ಅಂಶಗಳು, ಮಣ್ಣು, ನೀರನ್ನು ಅನ್ವೇಷಿಸುವುದು ಮುಖ್ಯ ಗುರಿಯಾಗಿದೆ.

chandrayaan-3-launch-date-july-13-officials-revealed

ಈ ಮಿಷನ್‌ಗಾಗಿ ಬರೋಬ್ಬರಿ 615 ಕೋಟಿ ರೂ. ಬಜೆಟ್ ನಿಗದಿಪಡಿಸಲಾಗಿದೆ. ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ-ಲಿಫ್ಟ್ ಲಾಂಚ್ ವೆಹಿಕಲ್ ಬಳಸಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಹಿಂದಿನ ಮಿಷನ್‌ನಿಂದ ಕಲಿತ ಪಾಠಗಳ ಆಧಾರದ ಮೇಲೆ ಚಂದ್ರನ ಪೇಲೋಡ್ ಕಾನ್ಫಿಗರೇಶನ್ ಸೇರಿದಂತೆ ಮಿಷನ್ ವಿನ್ಯಾಸವನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಪಾಯಗಳನ್ನು ತಗ್ಗಿಸಲು ಮತ್ತು ಯಶಸ್ವಿ ಕಾರ್ಯಾಚರಣೆಗಾಗಿ ಚಂದ್ರಯಾನ-3 ಕಠಿಣ ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಗಳಿಗೆ ಒಳಗಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಚಂದ್ರಯಾನ-3 ಮಿಷನ್ ಚಂದ್ರಯಾನ-2 ರಂತೆಯೇ ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿರುತ್ತಾದರೂ ಆರ್ಬಿಟರ್ ಅನ್ನು ಒಯ್ಯುವುದಿಲ್ಲ. ಮಿಷನ್‌ಗೆ ಒಂದು ಪ್ರಮುಖ ಸೇರ್ಪಡೆಯೆಂದರೆ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಅನ್ನು ಸೇರಿಸುವುದಾಗಿದೆ.

ಈ ಉಪಕರಣವು ಚಂದ್ರನ ಕಕ್ಷೆಯಿಂದ ಭೂಮಿಯ ರೋಹಿತ ಮತ್ತು ಧ್ರುವೀಯ ಅಳತೆಗಳನ್ನು ಅಧ್ಯಯನ ಮಾಡಿ ವಿಜ್ಞಾನಿಗಳಿಗೆ ಅಮೂಲ್ಯವಾದ ಡೇಟಾವನ್ನು ನೀಡುತ್ತದೆ. ಚಂದ್ರಯಾನ 3 ಯೋಜನೆಯು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬಾಹ್ಯಾಕಾಶ ಪರಿಶೋಧನೆಗೆ ಬಹಳ ಮುಖ್ಯ ಯೋಜನೆಯಾಗಿದೆ. ಈ ಚಂದ್ರಯಾನ 3 ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ನಂತರ ಬಿಡುಗಡೆಯಾಗಲಿದೆ.

Article Published On: Thursday, June 29, 2023, 15:47 [IST]
English summary
Chandrayaan 3 launch date july 13 officials revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+