ಭೂಮಿಯಲ್ಲಿನ 'ಚಂದ್ರಯಾನ'.. ಮೂನ್‌ಡಸ್ಟ್‌ನಿಂದ ಕಾರಿಗೆ ಪೇಂಟ್ ಮಾಡಿಸಿದ ಭಾರತೀಯ ಉದ್ಯಮಿ, 31 ಕೋಟಿ ಖರ್ಚು!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇತ್ತೀಚೆಗೆ ಚಂದ್ರಯಾನ-3 ಮಿಷನ್ ಯಶಸ್ವಿಗೊಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ, ಹೀಗೊಂದು ಸುದ್ದಿ ಇಂಟರ್ನೆಟ್ ನಲ್ಲಿ ಹರಿದಾಡುತ್ತದೆ. ಕೆಲವು ವರ್ಷಗಳ ಹಿಂದೆ, ಭಾರತೀಯ ಮೂಲದ ಉದ್ಯಮಿಯೊಬ್ಬ, ತನ್ನ ಕಾರಿಗೆ ಚಂದ್ರನ ಧೂಳಿನ (moondust) ಮಿಶ್ರಣ ಬಳಸಿ ಪೇಂಟ್ ಮಾಡಿಸಿದ್ದರು.
ಹೊಲ್ಟೆಕ್ ಇಂಟರ್‌ನ್ಯಾಷನಲ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಸಿಂಗ್, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಯಾಗಿದ್ದು, ಕಾರುಗಳ ಮೇಲೆ ವಿಪರೀತಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಹಲವು ವಿಲಕ್ಷಣ ಹಾಗೂ ದುಬಾರಿ ಬೆಲೆಯ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಅವರಿಗೊಂದು ವಿಶಿಷ್ಟ ಆಲೋಚನೆ ಬರುತ್ತದೆ.

ಅದು, ಸರಿ ಸುಮಾರು 20 ಕೋಟಿ ಬೆಲೆಯ ತಮ್ಮ ಹೊಸ ಆಸ್ಟನ್ ಮಾರ್ಟಿನ್ ವಾಲ್ಕೈರಿ (Aston Martin Valkyrie) ಕಾರಿಗೆ ವಿಶಿಷ್ಟದ ಬಣ್ಣ ಬಳಿಸಲು ತೀರ್ಮಾನಿಸುತ್ತಾರೆ. ಅದಕ್ಕಾಗಿ, 2020ರಲ್ಲಿ ಈವರೆಗೆ ವಿಶ್ವದಲ್ಲಿ ಯಾರು ಮಾಡಿರದ ಕೆಲಸಕ್ಕೆ ಕೈಹಾಕುತ್ತಾರೆ. ಅಂದಿನ ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಬರೋಬ್ಬರಿ 31 ಕೋಟಿ ರೂಪಾಯಿ ವೆಚ್ಚದಲ್ಲಿ ಚಂದ್ರನ ಧೂಳಿನಿಂದ ಮಿಶ್ರಣದ ಪೇಂಟ್ ಮಾಡಿಸುತ್ತಾರೆ.
ಬಹುಶಃ ಆಟೋಮೊಬೈಲ್ ಇತಿಹಾಸದಲ್ಲಿ ಇದೊಂದು ಅತ್ಯಂತ ದುಬಾರಿ ಬಣ್ಣ ಬಳಿಯುವ ಕೆಲಸವಾಗಿದೆ. ಅದೇ, ಈ ಕಾರಿನ ಮೇಲೆ ಸಣ್ಣ ಕ್ರಾಚ್ ಅಥವಾ ಡೆಂಟ್ ಆದ್ರೆ ರಿಪೇರಿಗೆ ಕೋಟಿ - ಕೋಟಿ ಹಣ ಖರ್ಚು ಮಾಡಬೇಕಾಗಿಯೂ ಬರಬಹುದು. ಕಾರಿಗೆ ಚಂದ್ರನ ಧೂಳಿನ ಮಿಶ್ರಣದಿಂದ ಬಣ್ಣ ಬಳಿದಿರುವ ವಿಚಾರವನ್ನು ಸ್ವತಃ ಕ್ರಿಸ್ ಸಿಂಗ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.

ವಾಸ್ತವವಾಗಿ, ಕಾರಿಗೆ ಪೇಂಟ್ ಮಾಡಲು ಬಳಸಿದ್ದ ಚಂದ್ರನ ಧೂಳನ್ನು (moondust) ಹಲವು ವರ್ಷಗಳ ಹಿಂದೆ, ನಾಸಾ ನಡೆಸಿದ್ದ ಅಪೊಲೊ ಮಿಷನ್ ನಲ್ಲಿ ತರಲಾಗಿತ್ತು. ಅಮೆರಿಕದಲ್ಲಿ ಇದನ್ನು ಖರೀದಿಸುವುದು ಕಾನೂನುಬಾಹಿರವಾಗಿದೆ. ಆದರೆ, ಕ್ರಿಸ್ ಸಿಂಗ್ ಅವರಿಗೆ ಹೇಗೆ ದೊರೆಯಿತು. ಯಾರು ನೀಡಿದರೂ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಬ್ರಿಟಿಷ್ ಕಾರು ಕಂಪನಿ ಆಸ್ಟನ್ ಮಾರ್ಟಿನ್, 'ವಾಲ್ಕಿರೀ' ಕಾರಿನ 25 ಯುನಿಟ್ ಮಾತ್ರ ತಯಾರಿಸಿತ್ತು. ಈ ಕಾರಿನ ಬೆಲೆ ರೂ.20 ಕೋಟಿ ಇದ್ದು, ಉದ್ಯಮಿ ಕ್ರಿಸ್ ಸಿಂಗ್ 31 ಕೋಟಿ ರೂಪಾಯಿ ವ್ಯಯಿಸಿ, ಚಂದ್ರನ ಧೂಳಿನಿಂದ ಪೇಂಟ್ ಮಾಡಿಸಿ ಕಸ್ಟಮೈಸೇಶನ್ ಗೊಳಿಸಿದ ಹಿನ್ನೆಲೆ, ಅದರ ಮೌಲ್ಯ 51 ಕೋಟಿ ರೂಪಾಯಿಗೆ ತಲುಪಿತ್ತು. ಈ ಕಾರು, 6.5 ಲೀಟರ್ ವಿ12 ಎಂಜಿನ್ ಹೊಂದಿದೆ.
ಇನ್ನುಳಿದಂತೆ ಕ್ರಿಸ್ ಸಿಂಗ್, ರೂ.25 ಕೋಟಿ ಬೆಲೆಯ ಲಂಬೋರ್ಗಿನಿ ಕಾರನ್ನು ಹೊಂದಿದ್ದಾರೆ. ಬೆಲೆಗೆ ತಕ್ಕಂತೆ 6.5 ಲೀಟರ್ ಆಸ್ಪಿರೇಟೆಡ್ ವಿ12 ಎಂಜಿನ್ ಒಳಗೊಂಡಿದ್ದು, ಗಂಟೆಗೆ 355 ಕಿಮೀ ವೇಗವನ್ನು ಪಡೆಯುತ್ತದೆ. ರಸ್ತೆಯಲ್ಲಿ ವಿಮಾನದಷ್ಟೇ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ದರಕ್ಕೆ ಅನುಗುಣವಾಗಿ ಅತ್ಯಾಧುನಿಕ ವೈಶಿಷ್ಟ್ಯ ಹಾಗೂ ಸೌಕರ್ಯಗಳನ್ನು ಹೊಂದಿದೆ.
ಮತ್ತೊಂದು, ಕೊಯೆನಿಗ್ಸೆಗ್ ಅಗೇರಾ ಎಕ್ಸ್ಎಸ್, ರೂ.19 ಕೋಟಿ ಬೆಲೆಯನ್ನು ಪಡೆದಿದ್ದು, ಕ್ರಿಸ್ ಸಿಂಗ್ ಈ ಕಾರು ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಕೊಯೆನಿಗ್ಸೆಗ್ ಅಗೇರಾ, 5.0 - ಲೀಟರ್ ವಿ8 ಎಂಜಿನ್ ಒಳಗೊಂಡಿದ್ದು, 6,900 rpmನಲ್ಲಿ 1,100 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications