ರತನ್ ಟಾಟಾ ಬಳಸುತ್ತಿರುವ ಕಡಿಮೆ ಬೆಲೆಯ ಕಾರುಗಳು ಯಾವುದು ಗೊತ್ತೇ? ನಿಮ್ಮ ಬಳಿಯೂ ಇರಬಹುದು
ಭಾರತೀಯ ವಾಹನ ನಿರ್ಮಾಣ ಕ್ಷೇತ್ರದಲ್ಲಿ ರತನ್ ಟಾಟಾ (Ratan TATA) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರ ಬಗ್ಗೆ ತಿಳಿಯಲು ಪ್ರತ್ಯೇಕವಾಗಿ ಒಂದು ಪರಿಚಯದ ಅಗತ್ಯವಿಲ್ಲ ಎಂದೇ ಹೇಳಬಹುದು. ರೇಂಜ್ ರೋವರ್, ಜಾಗ್ವಾರ್‌ನಂತಹ ವಿಶ್ವಪ್ರಸಿದ್ದ ಬ್ರ್ಯಾಂಡ್‌ಗಳನ್ನು ಟಾಟಾ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಕಂಪನಿ ಟಾಟಾ.
ರತನ್ ಟಾಟಾ ಅವರ ಬಳಿ ಸಾಕಷ್ಟು, ಐಷಾರಾಮಿ, ಆಡಂಬರದಿಂದ ಕೂಡಿರುವಂತಹ ಕಾರುಗಳಿದೆ. ಅವರು ಬಯಸಿದರೆ ವಿಶ್ವದ ಎಷ್ಟೇ ದುಬಾರಿಯಾದ ಕಾರುಗಳನ್ನು ಸಹ ತಮ್ಮ ಗ್ಯಾರೇಜ್‌ನಲ್ಲಿ ತಂದು ನಿಲ್ಲಿಸಬಹುದು. ಆದರೆ, ಇವತ್ತಿನ ಈ ಲೇಖನದಲ್ಲಿ ನಾವು ಭಾರತದ ಐಕಾನ್ ರತನ್ ಟಾಟಾ ಅವರು ಉಪಯೋಗಿಸುತ್ತಿರುವ ಅತ್ಯಂತ ಕಡಿಮೆ ಬೆಲೆಯ ಕಾರುಗಳು ಯಾವುದೆಂದು ನೋಡೋಣ.

ಟಾಟಾ ನೆಕ್ಸಾನ್: ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಭಾರತಕ್ಕೆ ಟಾಟಾ ಪರಿಚಯಿಸಿದ ಮೊದಲ ಕಾರು ಟಾಟಾ ನೆಕ್ಸಾನ್. ಬಿಡುಗಡೆಯದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗನ್ನು ಗಳಿಸಿ ಭಾರತದ ಸುರಕ್ಷಿತ ಕಾರುಗಳಲ್ಲಿ ಒಂದೆನಿಸಿದೆ. ರತನ್ ಟಾಟಾ ಬಳಸುತ್ತಿರುವ ಕಾರುಗಳಲ್ಲಿ ಇದೂ ಸಹ ಒಂದು.
ಈ ಟಾಟಾ ನೆಕ್ಸಾನ್ ಕಾರು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಲಭ್ಯವಿದ್ದು ಈ ಕಾರನ್ನು ನಾನಾ ಎಡಿಷನ್‌ಗಳಲ್ಲಿ ಬಿಡುಗಡೆಗೊಳಿಸಿದ್ದರು. ಸದ್ಯಕ್ಕೆ ಕಂಪನಿಯು ಈ ಟಾಟಾ ನೆಕ್ಸಾನ್‌ನ ಫೇಸ್‌ಲಿಫ್ಟ್ ಹೊರತರುವತ್ತ ಗಮನ ಹರಿಸಿದ್ದು, ಇದು ಟಾಟಾ ಕಾರು ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲ ಗರಿಗೆದರುವಂತೆ ಮಾಡಿದೆ.

ಹೋಂಡಾ ಸಿವಿಕ್: ಹೋಂಡಾ ಕಂಪನಿ ತಯಾರಿಸಿದ ಅತ್ಯಂತ ಸ್ಟೈಲಿಶ್ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿ ಹೋಂಡಾ ಸಿವಿಕ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಹೋಂಡಾ ಸಿವಿಕ್ ಕಾರಿನ ಆಕರ್ಷಕ ವಿನ್ಯಾಸ, ಪ್ರೀಮಿಯಂ ಫೀಚರ್‌ಗಳು, ಮತ್ತು ಹೆಚ್ಚು ಸ್ಥಳಾವಕಾಶದಿಂದ ಕೂಡಿರುವ ಕ್ಯಾಬಿನ್‌ನಿಂದಾಗಿ ಅನೇಕ ಸೆಲೆಟ್ರಿಟಿಗಳು ಮತ್ತು ಬ್ಯುಸಿನೆಸ್‌ಮೆನ್‌ಗಳ ಫೇವರೀಟ್ ಕಾರಾಗಿತ್ತು. 1.8 ಲೀಟರ್ ವಿ-ಟೆಕ್ ಇಂಜಿನ್ ಅನ್ನು ಹೊಂದಿರುವ ಈ ಕಾರು 130 bhp ಮತ್ತು 172 nm ಟಾರ್ಕ್ ಉತ್ಪಾದಿಸುತ್ತದೆ.
ಕಸ್ಟಂ ಬಿಲ್ಟ್ ಟಾಟಾ ನ್ಯಾನೋ ಇವಿ: ಈ ಕಸ್ಟಮ್ ಬಿಲ್ಟ್ ಟಾಟಾ ನ್ಯಾನೋ ಕಾರನ್ನು ಭಾರತದ ಪ್ರಮುಖ ಇವಿ ಎಲೆಕ್ಟ್ರಿಕ್ ವಾಹನಗಳ ಪವರ್‌ಟ್ರೈನ್ ಸೊಲ್ಯೂಷನ್ ಸಂಸ್ಥೆಯಾದ ಎಲೆಕ್ಟ್ರಾ ಇವಿಯು ರತನ್ ಟಾಟಾ ಅವರಿಗೆ ಉಡುಗೊರೆಯಾಗಿ ನೀಡಿತ್ತು. ಅವರು ತಯಾರಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಇವಿ ಕಾರನ್ನು ರತನ್ ಟಾಟಾ ಅವರ ಅಭಿಪ್ರಾಯಗಳನ್ನು ಕಲೆ ಹಾಕಲು ಉಡುಗೊರೆಯಾಗಿ ನೀಡಿದ್ದರು.
ಈ ಮೇಲೆ ತಿಳಿಸಿದಂತಹ ಟಾಟಾ ನೆಕ್ಸಾನ್, ಹೋಂಡಾ ಸಿವಿಕ್ ಮತ್ತು ಕಸ್ಟಂ ಬಿಲ್ಟ್ ಟಾಟಾ ನ್ಯಾನೋ ಇವಿ ಕಾರುಗಳನ್ನು ರತನ್ ಟಾಟಾ ಅವರು ಬಳಸುತ್ತಿರುವ ಕಡಿಮೆ ಬೆಲೆ ಕಾರುಗಳು. ಅವರು ಬಳಸುತ್ತಿರುವ ಈ ಎಲ್ಲಾ ಕಾರುಗಳು ಸಹ ಭಾರತೀಯರ ನೆಚ್ಚಿನ ಕಾರ್ ಆಗಿದ್ದು, ಪ್ರತೀ ಕಾರಿಗೂ ಅದರದೇ ಆದ ಫ್ಯಾನ್ ಬೇಸ್ ಇದೆ ಎಂಬುದು ಇನ್ನೊಂದು ವಿಶೇಷ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications