ಕೈಗಳಿಲ್ಲದ ಯುವಕನಿಗೆ ಕಾರು ಓಡಿಸಲು ಡಿಎಲ್ ಸಿಕ್ತು.. ಕುಟುಂಬವನ್ನು ದೇಗುಲಕ್ಕೆ ಕರೆದುಕೊಂಡು ಹೋದ ಛಲಗಾರ!

ಸಾಧಿಸುವ ಛಲ ಇದ್ದರೆ, ಯಾವುದೂ ಅಸಾಧ್ಯವಲ್ಲ. ಮನಸ್ಸಿನಲ್ಲಿ ಛಲ ಇದ್ದರೆ ನಾವು ಪಡೆಯುವುದಕ್ಕೆ ಆಗದೆ ಇರುವ ವಸ್ತು ಈ ಭೂಮಿಯ ಮೇಲೆ ಯಾವುದು ಇಲ್ಲ.. ಬಾಲ್ಯದಲ್ಲಿ ವಿದ್ಯುತ್ ಅವಘಡದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಚೆನ್ನೈನ 31 ವರ್ಷದ ಯುವಕನಿಗೆ ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಚಾಲನಾ ಪರವಾನಗಿಯನ್ನು ನೀಡಲಾಗಿದೆ.

ಡಾ.ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಕೆ.ಥಾನ್ಸೀನ್ ಅವರು, ತಮಿಳುನಾಡಿನಲ್ಲಿಯೇ ಪ್ರಪ್ರಥಮ ಬಾರಿಗೆ ವಿಶೇಷ ಚಾಲನಾ ಪರವಾನಗಿ (Special Driving Licence)ಯನ್ನು ಪಡೆದಿರುವ ವ್ಯಕ್ತಿಯಾಗಿದ್ದಾರೆ. ಸರ್ಕಾರಿ ವೈದ್ಯರು ನೀಡಿದ ಫಿಟ್ನೆಸ್ (ದೈಹಿಕ ಅರ್ಹತೆ) ಪ್ರಮಾಣ ಪತ್ರದ ಆಧಾರದ ಮೇಲೆ ಕಾರು ಚಲಾಯಿಸಲು 10 ವರ್ಷಗಳ ಅವಧಿಗೆ ಮಾನ್ಯವಾಗಿರುವ ಪರವಾನಗಿಯನ್ನು ಕೊಡಲಾಗಿದೆ.

Chennai 30 years young Man Gets Driving Licence Without Hands Car Drive With Legs

ಡ್ರೈವಿಂಗ್ ಲೈಸೆನ್ಸ್ ಪಡೆದಿರುವ ಕುರಿತು ಖಾಸಗಿ ಮಾಧ್ಯಮದೊಂದಿಗೆ ಸಂತಸವನ್ನು ಹಂಚಿಕೊಂಡಿರುವ ಥಾನ್ಸೀನ್, 'ಪರವಾನಗಿ ದೊರೆತ ಕೂಡಲೇ ನನ್ನ ಕುಟುಂಬವನ್ನು ಕಾರಿನಲ್ಲಿ ಪೆರಂಬೂರಿನ ದೇಗುಲಕ್ಕೆ ಕರೆದುಕೊಂಡು ಹೋದೆ. ನಾನು ಡ್ರೈವಿಂಗ್ ಮಾಡುವುದನ್ನು ನೋಡಿದ ಜನರು ಆಶ್ಚರ್ಯಚಕಿತರಾದರು. ಕಾಲುಗಳ ನೆರವಿನಿಂದ ಕಾರನ್ನು ಓಡಿಸಿದ್ದಕ್ಕಾಗಿ ಹಲವರು ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು' ಎಂದು ಹೇಳಿದರು.

'ಕಾರನ್ನು ಆರಾಮದಾಯಕವಾಗಿ ಚಲಾಯಿಸಲು ಅದರೊಳಗೆ ವಿವಿಧ ಬದಲಾವಣೆಗಳನ್ನು ಮಾಡಲಾಗಿದೆ. ಹಾರ್ನ್, ಇಂಡಿಕೇಟರ್, ವೈಪರ್ & ಲೈಟ್ ಸ್ವಿಚ್‌ಗಳನ್ನು ಹ್ಯಾಂಡ್ ಬ್ರೇಕ್ ಸಮೀಪದಲ್ಲಿ ಜೋಡಿಸಲಾಗಿದೆ. ಸದ್ಯ, ಡ್ರೈವಿಂಗ್ ಮಾಡುವುದಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗುತ್ತಿಲ್ಲ. ಒಂದು ಕಾಲಿನಿಂದ ಸ್ಟೀರಿಂಗ್ ವೀಲ್, ಮತ್ತೊಂದು ಕಾಲಿನಿಂದ ಆಕ್ಸಿಲರೇಟರ್ ಹಾಗೂ ಬ್ರೇಕ್ ಅನ್ನು ನಿಯಂತ್ರಿಸುತ್ತಿದ್ದೇನೆ. ಕೆಲವೊಮ್ಮೆ ಕೈಗಳನ್ನು ಬಳಸುತ್ತೇನೆ' ಎಂದು ಅವರು ತಿಳಿಸಿದರು.

Chennai 30 years young Man Gets Driving Licence Without Hands Car Drive With Legs

ಥಾನ್ಸೀನ್ ಅವರಿಗೆ ಕಾರುಗಳಂತೆ ಮೋಟಾರ್‌ಸೈಕಲ್ ಓಡಿಸುವ ಆಸೆಯೂ ಇದೆ. 'ಕಾರು ಚಲಾಯಿಸುವುದು ನನ್ನ ಹಲವು ವರ್ಷಗಳ ಕನಸಾಗಿತ್ತು. ಕೊನೆಗೆ ಡ್ರೈವಿಂಗ್ ಕಲಿಯುವ ಮೂಲಕ ಅದು ಈಡೇರಿತು. ನನ್ನ ಮುಂದಿನ ಗುರಿ ಬೈಕ್ ಓಡಿಸುವುದು ಆಗಿದೆ. ಈಗ ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿದ್ದೇನೆ. ಇನ್ನೂ ಪರವಾನಿಗೆ ದೊರೆಯಬೇಕಾಗಿದೆ' ಎಂದು ಅವರು ಹೇಳಿದರು.

ಈ ಯುವಕ ಚಾಲನಾ ಪರವಾನಿಗೆಯನ್ನು ಪಡೆದಿರುವ ಕಥೆಯು ತುಂಬಾ ಸ್ವಾರಸ್ಯಕರವಾಗಿದೆ. 'ಕೇರಳದಲ್ಲಿ ಕೈಗಳಿಲ್ಲದ ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿರುವ ಸುದ್ದಿಯೊಂದು ಪ್ರಕಟಗೊಂಡಿತ್ತು. ಆ ಪೇಪರ್ ಕಟಿಂಗ್ ಅನ್ನು ತೆಗೆದುಕೊಂಡು ಹೋಗಿ ಆರ್‌ಟಿಒ ಅಧಿಕಾರಿಗಳು ಮತ್ತು ವೈದ್ಯರಿಗೆ ತೋರಿಸಿದೆ. ಹಲವು ಪರೀಕ್ಷೆಗಳನ್ನು ನಡೆಸಿದ ನಂತರ, ವೈದ್ಯರು ದೈಹಿಕ ಅರ್ಹತೆಯನ್ನು ಪ್ರಮಾಣ ಪತ್ರವನ್ನು ನೀಡಿದರು. ಆ ಬಳಿಕ ಚಾಲನಾ ಪರವಾನಿಗೆ ಸಿಕ್ಕಿತು' ಎಂದು ಥಾನ್ಸೀನ್ ತಿಳಿಸಿದರು.

ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ - ಕೇಂದ್ರ ಮೋಟಾರು ವಾಹನ ನಿಯಮಗಳ ಅನ್ವಯ ವಿಶೇಷ ಚೇತನ ವ್ಯಕ್ತಿಗೆ ಚಾಲನಾ ಪರವಾನಗಿಯನ್ನು ನೀಡಬಹುದು ಎಂದು ಚೆನ್ನೈನ ಆರ್‌ಟಿಒ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ. ವೈದ್ಯರು ನೀಡುವ ಅರ್ಹತಾ ಪತ್ರ ಮತ್ತು ಸಾಮಾನ್ಯ ರಸ್ತೆಯಲ್ಲಿ ವಾಹನವನ್ನು ಓಡಿಸಲು ಅದರಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿದರೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಸುಲಭವಾಗಿ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 4, 2024, 14:03 [IST]
English summary
Chennai 30 years young man gets driving licence without hands car drive with legs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+