ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಕರೋನಾ ವೈರಸ್ ಇಡೀ ಜಗತ್ತನ್ನು ವ್ಯಾಪಿಸಿದೆ. ಕರೋನಾ ವೈರಸ್ ಕೆಲವೇ ತಿಂಗಳುಗಳಲ್ಲಿ ಹೋಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಯಾವುದೇ ಲಸಿಕೆಗಳು ಲಭ್ಯವಿಲ್ಲದ ಕಾರಣ ಕರೋನಾ ವೈರಸ್‌ನೊಂದಿಗೆ ಬದುಕುವುದು ಅನಿವಾರ್ಯವಾಗಿದೆ.

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. ಅದರಲ್ಲೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವಾಗ ಹೆಚ್ಚು ಮುಂಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಗೆ ಬಂದ ನಂತರ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿತ್ತು.

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಈಗ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಲಾಗಿದೆ. ಆಟೋ, ಕ್ಯಾಬ್‌ಗಳ ಸೇವೆಯನ್ನು ಸಹ ಪುನರಾರಂಭಿಸಲಾಗಿದೆ. ಈ ಎಲ್ಲ ವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಕೆಲ ದಿನಗಳ ಹಿಂದೆ ಗೋವಾದ ಕ್ಯಾಬ್ ಚಾಲಕರು ತಮ್ಮ ಕಾರಿನಲ್ಲಿ ಪ್ಲಾಸ್ಟಿಕ್ ಸ್ಕ್ರೀನ್ ಅಳವಡಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿರುವ ಬಗ್ಗೆ ವರದಿಯಾಗಿತ್ತು. ಪ್ಲಾಸ್ಟಿಕ್ ಸ್ಕ್ರೀನ್ ಮೂಲಕ ಕಾರನ್ನು ಪ್ರತ್ಯೇಕ ಕ್ಯಾಬಿನ್‌ನಂತೆ ಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು.

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಈಗ ಚೆನ್ನೈ ಮೂಲದ ಇಬ್ಬರು ವ್ಯಕ್ತಿಗಳು ಕಾರುಗಳಲ್ಲಿ ಸೇಫ್ಟಿ ಶೀಲ್ಡ್‌ಗಳನ್ನು ಅಳವಡಿಸಿದ್ದಾರೆ. ಚೆನ್ನೈ ಮೂಲದ ಗವಾಸ್ಕರ್ ಹಾಗೂ ಸೆಲ್ವಂ ಎಂಬುವವರು ಜಂಟಿಯಾಗಿ ಜಾಟ್ ಕ್ರಿಯೇಷನ್ ಅನ್ನು ನಡೆಸುತ್ತಿದ್ದು, ಚೆನ್ನೈ ನಗರದ ಉತ್ತರ ಉಸ್ಮಾನ್ ರಸ್ತೆಯಲ್ಲಿ ಕಚೇರಿಯನ್ನು ಹೊಂದಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಕರೋನಾ ವೈರಸ್ ಸಮಸ್ಯೆ ಉಂಟಾಗುವ ಮೊದಲು ಗವಾಸ್ಕರ್ ಈವೆಂಟ್ ಮ್ಯಾನೇಜ್ಮೆಂಟ್ ಕೆಲಸಗಳನ್ನು ಮಾಡುತ್ತಿದ್ದರು. ಜೊತೆಗೆ ಮದುವೆಯಾಗಲು ಸಿದ್ದತೆಗಳನ್ನು ನಡೆಸುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಗವಾಸ್ಕರ್ ಹಾಗೂ ಸೇಲ್ವಂ ಇಬ್ಬರೂ ನಷ್ಟವನ್ನು ಅನುಭವಿಸಿದರು. ಪರಿಸ್ಥಿತಿಗೆ ಅನುಗುಣವಾಗಿ ಹೊಸ ವ್ಯವಹಾರವನ್ನು ಆರಂಭಿಸಿದರು.

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಕರೋನಾ ವೈರಸ್‌ನಿಂದ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಎದುರಾಗಿದೆ. ಈ ಕಾರಣಕ್ಕೆ ಅವರಿಬ್ಬರು ಟೆಂಪೊ ಟ್ರಾವೆಲರ್ ಹಾಗೂ ಕಾರುಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸುವ ವ್ಯವಹಾರವನ್ನು ಆರಂಭಿಸಲು ನಿರ್ಧರಿಸಿದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಪಾರದರ್ಶಕವಾಗಿರುವ ಪಿವಿಸಿ ಸೀಟ್ ಮೂಲಕ ಕಾರು ಹಾಗೂ ಟೆಂಪೊ ಟ್ರಾವೆಲರ್ ವಾಹನಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸುತ್ತಿದ್ದಾರೆ. ಅದೂ ಸಹ ಕಡಿಮೆ ಬೆಲೆಯಲ್ಲಿ. ಈ ಬಗ್ಗೆ ಮಾತನಾಡಿರುವ ಗವಾಸ್ಕರ್‌ರವರು, ಬೇರೆ ರಾಜ್ಯಗಳಲ್ಲಿ ಹಲವರು ಸೇಫ್ಟಿ ಶೀಲ್ಡ್ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಕಾರಣ ನಾವು ಸಹ ಚೆನ್ನೈನಲ್ಲಿ ಈ ಕೆಲಸಕ್ಕೆ ಮುಂದಾದೆವು.

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾಬ್‌ಗಳಿರುವ ಕಾರಣಕ್ಕೆ ತಡ ಮಾಡದೇ ಕೆಲಸವನ್ನು ಆರಂಭಿಸಿದೆವು ಎಂದು ಹೇಳಿದರು. ಅವರು ಜನಪ್ರಿಯ ಟ್ರಾವೆಲ್ಸ್ ಕಂಪನಿಗಳ ವಾಹನಗಳಲ್ಲಿ ಸೇಫ್ಟಿ ಶೀಲ್ಡ್‌ಗಳನ್ನು ಅಳವಡಿಸುತ್ತಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ನಮ್ಮ ಕಂಪನಿಯಲ್ಲಿ 20 ಜನರು ಕೆಲಸ ಮಾಡುತ್ತಿದ್ದು, ಸರ್ಕಾರ ಹೊರಡಿಸಿರುವ ಎಲ್ಲ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದ್ದೇವೆ. ಪರ್ಯಾಯ ವ್ಯವಹಾರಕ್ಕೆ ಹೊಂದಿಕೊಳ್ಳಲು ಈ ಹೊಸ ಉದ್ಯಮವನ್ನು ಆರಂಭಿಸಿದ್ದೇವೆ. ಸದ್ಯಕ್ಕೆ ದಿನಕ್ಕೆ 150 ವಾಹನಗಳಿಗೆ ಸೇಫ್ಟಿ ಶೀಲ್ಡ್ ಅಳವಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಸಾಮಾನ್ಯ ಕಾರುಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸಲು 15ರಿಂದ 20 ನಿಮಿಷಗಳು ಬೇಕಾಗುತ್ತವೆ. ಟೆಂಪೊ ಟ್ರಾವೆಲರ್‌ನಂತಹ ದೊಡ್ಡ ವಾಹನಗಳಿಗೆ 30ರಿಂದ 45 ನಿಮಿಷ ಬೇಕಾಗುತ್ತದೆ. ಸಣ್ಣ ಕಾರುಗಳನ್ನು ನಾಲ್ಕು ಕ್ಯಾಬಿನ್‌ಗಳಾಗಿ ಹಾಗೂ ದೊಡ್ಡ ಕಾರುಗಳನ್ನು 6 ಕ್ಯಾಬಿನ್‌ಗಳಾಗಿ ವಿಂಗಡಿಸಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್

ಇದರಿಂದಾಗಿ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ವಾಹನಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸಲು ಕನಿಷ್ಠ ರೂ.600ರಿಂದ ಗರಿಷ್ಠ ರೂ.4,500ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ.

Article Published On: Thursday, May 28, 2020, 11:05 [IST]
English summary
Chennai based company installs safety shield in cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+