Chennai-Bengaluru-Mysuru High-Speed Rail: 2.25 ಗಂಟೆ ಪ್ರಯಾಣ.. ಮೈಸೂರಲ್ಲಿ ಹತ್ತಿದರೆ, ಚೆನ್ನೈನಲ್ಲಿ ಇಡ್ಲಿ ತಿನ್ನಬಹುದು!

ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು (Chennai-Bengaluru-Mysuru High-Speed Rail - HSR) ಯೋಜನೆ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. 435 ಕಿಮೀ ಉದ್ದದ ಈ ರೈಲು ಮಾರ್ಗ ಆಟೋಮೊಬೈಲ್ (Automobile) ಹಬ್ ಚೆನ್ನೈ, ಟೆಕ್ & ಸ್ಟಾರ್ಟ್-ಅಪ್ ಹಬ್ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ (Cultural Capital) ಮೈಸೂರನ್ನು ಸಂಪರ್ಕಿಸಲಿದೆ.

ಈ ಹೈಸ್ಪೀಡ್ ರೈಲು (High-Speed Rail) ರೈಲು ಯೋಜನೆಯು ಕರ್ನಾಟಕ ಹಾಗೂ ತಮಿಳುನಾಡು ರಾಜಧಾನಿಗಳ ನಡುವೆ ಈಗಿರುವ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವ ಸಾಧ್ಯತೆಯಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚಾರ ನಡೆಸುವ ಹೈಸ್ಪೀಡ್ ರೈಲು (ಬುಲೆಟ್ ರೈಲು) ಚೆನ್ನೈ, ಪೂನಮಲ್ಲಿ, ಅರಕ್ಕೋಣಂ (ತಮಿಳುನಾಡು), ಚಿತ್ತೂರು (ಆಂಧ್ರಪ್ರದೇಶ), ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರು ಒಳಗೊಂಡಂತೆ 9 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎನ್ನಲಾಗಿದೆ.

Chennai-Bengaluru-Mysuru High-Speed Rail: 2.25 ಗಂಟೆ ಪ್ರಯಾಣ.. ಮೈಸೂರಲ್ಲಿ ಹತ್ತಿದರೆ, ಚೆನ್ನೈನಲ್ಲಿ ಇಡ್ಲಿ ತಿನ್ನಬಹುದು!

ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ (NHSRCL), ಜನರಲ್ ಅಲೈನ್‌ಮೆಂಟ್ ಡ್ರಾಯಿಂಗ್ಸ್, ಸರ್ವೇಯಿಂಗ್, ಓವರ್‌ಹೆಡ್, ಓವರ್‌ಗ್ರೌಂಡ್, ಅಂಡರ್‌ಗ್ರೌಂಡ್ ಯುಟಿಲಿಟಿ ಮತ್ತು ಸಬ್‌ಸ್ಟೇಷನ್‌ ಪವರ್ ಸೋರ್ಸಿಂಗ್ ಐಡೆಂಟಿಟಿಗೆ ಗುತ್ತಿಗೆಯನ್ನು ನೀಡಿದೆ ಎಂದು ತಿಳಿದುಬಂದಿದೆ. ಉದ್ದೇಶಿತ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗದಲ್ಲಿ ಸರ್ವೆ ನಡೆಸಲಾಗುತ್ತಿದ್ದು, ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಅಧಿಕಾರಿಗಳು ಭೂಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಲವೇ ದಿನಗಳಲ್ಲಿ ಹೈ-ಸ್ಪೀಡ್ ರೈಲು ಯೋಜನೆಯ ಅಂದಾಜು ವೆಚ್ಚ, ನಿಲ್ದಾಣ ಸೇರಿದಂತೆ ವಿವರವಾದ ಯೋಜನಾ ವರದಿ (DPR) ಪ್ರಕಟಗೊಳ್ಳಬಹುದು. ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಮಾರ್ಗವನ್ನು ಒಂದೆರಡು ತಿಂಗಳಲ್ಲಿ ಉದ್ಘಾಟನೆಗೆ ಸಿದ್ದಗೊಂಡಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai expressway) ಅಸುಪಾಸಿನಲ್ಲಿ ನಿರ್ಮಾಣ ಮಾಡಬಹುದು. ಇದು ಬೆಂಗಳೂರಿನ ಹೊಸಕೋಟೆಯಿಂದ ಆರಂಭವಾಗಿ ಚೆನ್ನೈ ಬಳಿಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಬಹುದು. ಚೆನ್ನೈನ ಎರಡನೇ ವಿಮಾನ ನಿಲ್ದಾಣಕ್ಕೂ ಹತ್ತಿರವಿರಬಹುದು.

Chennai-Bengaluru-Mysuru High-Speed Rail: 2.25 ಗಂಟೆ ಪ್ರಯಾಣ.. ಮೈಸೂರಲ್ಲಿ ಹತ್ತಿದರೆ, ಚೆನ್ನೈನಲ್ಲಿ ಇಡ್ಲಿ ತಿನ್ನಬಹುದು!

ಪ್ರಸ್ತುತ, ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ಅತ್ಯಂತ ವೇಗದ ರೈಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಓಡಾಟ ನಡೆಸುತ್ತಿದೆ. 6 ಗಂಟೆ 30 ನಿಮಿಷಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತದೆ. ಆದರೆ, ಹೈ-ಸ್ಪೀಡ್ ರೈಲು (ಬುಲೆಟ್ ರೈಲು) ಕಾರ್ಯಾಚರಣೆ ಶುರು ಮಾಡಿದ ಮೇಲೆ ಈ ಅಂತರವನ್ನು ಕೇವಲ 2 ಗಂಟೆ 25 ನಿಮಿಷಗಳಲ್ಲಿ ತಲುಪಲಿದೆ.

ಹೈ-ಸ್ಪೀಡ್ ರೈಲು ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಸುರಕ್ಷತೆಯ ಸಲುವಾಗಿ ಆ ವೇಗವನ್ನು ಗಂಟೆಗೆ 250 ಕಿ.ಮೀ ಗೆ ಸೀಮಿತಗೊಳಿಸಬಹುದು. ಪ್ರತಿ ರೈಲಿನಲ್ಲಿ 750 ಜನರು ಪ್ರಯಾಣಿಸಬಹುದು. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು (Chennai-Bengaluru-Mysuru high-speed rail) ಸಂಚರಿಸುವುದರಿಂದ ಉದ್ಯಮಿಗಳು, ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪ್ರವಾಸೋದ್ಯಮವು ಬೆಳವಣಿಗೆಯಾಗುತ್ತದೆ.

ಈ ಹೈ-ಸ್ಪೀಡ್ ರೈಲು ಓಡಾಟದಿಂದ ಕ್ರಮೇಣ ವಿಮಾನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು. ಟಿಕೆಟ್ ಬೆಲೆ ಎಸಿ ರೈಲಿನ ದರಕ್ಕಿಂತ ಹೆಚ್ಚಿರಲಿದೆ ಎನ್ನಲಾಗಿದೆ. 2016ರಲ್ಲಿ ಜರ್ಮನಿ ಎಂಜಿನಿಯರ್‌ಗಳ ತಂಡವು ಚೆನ್ನೈ-ಬೆಂಗಳೂರು-ಮೈಸೂರುಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು (Feasibility Study) ನಡೆಸಿತ್ತು. 2018ರಲ್ಲಿ ರೈಲ್ವೆಗೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಅದರ ಪ್ರಕಾರ, 435 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ ರೂ.1 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಹೇಳಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 17, 2024, 17:02 [IST]
English summary
Chennai bengaluru mysuru high speed rail 435 km only 2 25 hours journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+