ಹೀಗೂ ಇರ್ತಾರೆ.. ತನ್ನ ಕಂಪನಿ ಉದ್ಯೋಗಿಗಳಿಗೆ 28 ​​ಕಾರು, 29 ದ್ವಿಚಕ್ರ ವಾಹನಗಳನ್ನು ಗಿಫ್ಟ್ ಕೊಟ್ಟ ಪುಣ್ಯಾತ್ಮ!

ಪ್ರಸ್ತುತ ನೌಕರರನ್ನು ಸಂಬಳಕ್ಕಾಗಿ ದುಡಿಸಿಕೊಳ್ಳುವ ಪದ್ಧತಿ ಎಲ್ಲೆಡೆ ಚಾಲ್ತಿಯಲ್ಲಿದೆ. ಈ ನಡುವೆ ಚೆನ್ನೈನ ಕಂಪನಿಯೊಂದರ ಮಾಲೀಕರು, ತನ್ನ ಉದ್ಯೋಗಿಗಳ ಕೆಲಸವನ್ನು ಮೆಚ್ಚಿ, ದಸರಾ ಹಬ್ಬಕ್ಕೆ ದುಬಾರಿ ಬೆಲೆಯ ​​ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಉಡೊಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶ್ರೀಧರ್ ಕಣ್ಣನ್ ಅವರು, ತಮ್ಮ ಕಂಪನಿ ಉದ್ಯೋಗಿಗಳಿಗೆ 28 ​​ಕಾರುಗಳು (Cars) ಹಾಗೂ 29 ದ್ವಿಚಕ್ರ ವಾಹನಗಳನ್ನು (Two Wheelers) ಗಿಫ್ಟ್ ಮಾಡಿದ್ದಾರೆ. ನೂತನ ವಾಹನಗಳನ್ನು ಕುಟುಂಬ ಸದಸ್ಯರೊಂದಿಗೆ ಉಡುಗೊರೆಯಾಗಿ ಪಡೆದ ಉದ್ಯೋಗಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

Chennai Company Gifts 28 Cars And 29 Two Wheelers For Employees Nexon Brezza to Jupiter

ಮರ್ಸಿಡಿಸ್ ಬೆಂಜ್‌, ಟಾಟಾ ನೆಕ್ಸಾನ್, ಟಿಗೂರ್, ಮಾರುತಿ ಸುಜುಕಿ ಸ್ವಿಫ್ಟ್, ಎರ್ಟಿಗಾ, ಬ್ರೆಝಾ, ಹ್ಯುಂಡೈ ಐ10, ಕಿಯಾ ಸೆಲ್ಟೋಸ್ ಸೇರಿದಂತೆ 28 ಕಾರುಗಳನ್ನು ಕಂಪನಿಗಾಗಿ 9 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಗಿಫ್ಟ್ ಕೊಡಲಾಗಿದೆ. ಅದೇ ರೀತಿಯಲ್ಲಿ ಟಿವಿಎಸ್ ಜುಪಿಟರ್ 110, ಸುಜುಕಿ ಆಕ್ಸೆಸ್ 125 ಮತ್ತು ಟಿವಿಎಸ್ ರೈಡರ್ 125 ಒಳಗೊಂಡಂತೆ 29 ದ್ವಿಚಕ್ರ ವಾಹನಗಳನ್ನು 7 ವರ್ಷ ಕಂಪನಿಗಾಗಿ ದುಡಿದ ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಎಂಡಿ ಶ್ರೀಧರ್ ಕಣ್ಣನ್, 'ನಮ್ಮ ಕಂಪನಿಯನ್ನು 4 ಜನ ಉದ್ಯೋಗಿಗಳೊಂದಿಗೆ 19 ವರ್ಷಗಳ ಹಿಂದೆ ಆರಂಭಿಸಲಾಯಿತು. ಸದ್ಯ 180 ಜನ ಉದ್ಯೋಗಿಗಳಿದ್ದಾರೆ. ಅವರ ಜೀವನಮಟ್ಟ ಸುಧಾರಿಸಲು ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗ ಕಾರು, ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ಉದ್ಯೋಗಿಗಳಿಗೆ ರೂ.50,000 ನೆರವನ್ನು ಕೊಡಲಾಗುತ್ತಿದೆ. ಅದನ್ನು ರೂ.1 ಲಕ್ಷಕ್ಕೆ ಹೆಚ್ಚಿಸಲಾಗಿದೆ' ಎಂದು ಹೇಳಿದ್ದಾರೆ.

Chennai Company Gifts 28 Cars And 29 Two Wheelers For Employees Nexon Brezza to Jupiter

ಶ್ರೀಧರ್ ಕಣ್ಣನ್ ತಮ್ಮ ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿರುವ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಕೆಲವೊಂದರ ವಿಶೇಷತೆ ಬಗ್ಗೆ ಮಾತನಾಡೋಣ. ಅವುಗಳಲ್ಲಿ ಟಾಟಾ ಟಿಗೂರ್ ಸೆಡಾನ್ ಪ್ರಮುಖವಾಗಿದ್ದು, ರೂ.6 ಲಕ್ಷದಿಂದ ರೂ.9.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ಹೇಳುವುದಾದರೆ, ಇದು ರೂ.6.49 ರಿಂದ 9.60 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಪೆಟ್ರೋಲ್/ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ (9-ಇಂಚು), ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Chennai Company Gifts 28 Cars And 29 Two Wheelers For Employees Nexon Brezza to Jupiter

ಟಿವಿಎಸ್ ಜುಪಿಟರ್ 110 ಕುರಿತಂತೆ ಮಾತನಾಡುವುದಾದರೆ, ಈ ಸ್ಕೂಟರ್ ರೂ.73,700 ರಿಂದ ರೂ.87,250 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 113 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ ಎಂದು ತಿಳಿದುಬಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 14, 2024, 10:39 [IST]
English summary
Chennai company gifts 28 cars and 29 two wheelers for employees nexon brezza to jupiter
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+