Rolls Royce: ಅಂಬಾನಿ ಬಳಿಯೂ ಇಲ್ಲ.. 10 ಕೋಟಿ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಇವರಿಗೆ ವಿತರಣೆ
ಪ್ರಪಂಚದಾದ್ಯಂತ ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ಖ್ಯಾತ ಕ್ರೀಡಾಪಟುಗಳಿಗೆ ರೋಲ್ಸ್ ರಾಯ್ಸ್ (Rolls Royce) ಕಂಪನಿಯ ಕಾರುಗಳು ಕನಸಿನ ವಾಹನವಾಗಿದ್ದು, ಅವರ ಶ್ರೀಮಂತಿಕೆಯ ಸಂಕೇತವೂ ಹೌದು. ಸದ್ಯ, ಚೆನ್ನೈನ ಮೂಲದ ಉದ್ಯಮಿಯೊಬ್ಬರು, ಭಾರತದಲ್ಲಿಯೇ ಮೊದಲ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ವಿತರಣೆ ಪಡೆದಿದ್ದಾರೆ.
ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ (Rolls Royce Spectre) ಕಾರನ್ನು ಭಾಷ್ಯಂ ಕನ್ಸ್ಟ್ರಕ್ಷನ್ಸ್ (Baashyaam Constructions) ಮಾಲೀಕರಾದ ಭಾಷಾಂ ಯುವರಾಜ್ (Baashyaam Yuvaraj) ಡೆಲಿವರಿ ಪಡೆಯುತ್ತಿರುವ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಇದು, ಬ್ರಿಟಿಷ್ ವಾಹನ ತಯಾರಕ ಮೊದಲ ಎಲೆಕ್ಟ್ರಿಕ್ ಕಾರು ಆಗಿದ್ದು, ಕೆಲವೊಂದು ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಅಧಿಕೃತವಾಗಿ ಈ ಕಾರನ್ನು ಲಾಂಚ್ ಮಾಡಿಲ್ಲ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ರೂ.9 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಸುಮಾರು ರೂ.10.5 ಕೋಟಿ ಆನ್ - ರೋಡ್ ಬೆಲೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಬೆಲೆಗೆ ಸರಿಹೊಂದುವಂತೆ ಈ ಕಾರು, ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇತ್ತೀಚೆಗೆ, ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು, ಚೆನ್ನೈಗೆ ಆಗಮಿಸಿತ್ತು. ಟ್ರೇಲರ್‌ನಿಂದ ಹೊರಬರುತ್ತಿರುವ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಈ ಸ್ಪೆಕ್ಟರ್ ಸೆಡಾನ್, ಆಕರ್ಷಕ ಸ್ಲ್ಯಾಂಟ್ ಬ್ಯಾಕ್ ರೂಫ್ ಹೊಂದಿದ್ದು, ನೋಡಲು ಆಕರ್ಷಣೀಯವಾಗಿದೆ. ಈ ಕಾರು, ದೇಶೀಯ ಮಾರುಕಟ್ಟೆಗೆ ಬಹುತೇಕ ಮುಂದಿನ ವರ್ಷ (2024) ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.

ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರು, ಈ ವರ್ಷಾರಂಭದಲ್ಲಿ ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿತ್ತು. ಬೇರೆ ಯಾವುದೇ ಕಾರುಗಳಿಗೆ ಹೋಲಿಸಿದರೆ, ಐಷಾರಾಮಿ ಫೀಚರ್ ಪಡೆದಿದೆ. ಈ ಕಾರಿನ ಪ್ರಮುಖ ಸೆಳೆತವೆಂದರೆ, 2 ಡೋರ್ ಆಯ್ಕೆಯನ್ನು ಹೊಂದಿರುವುದು. ಸ್ಪೆಕ್ಟರ್ ಸೆಡಾನ್ ಬಿಎಂಡಬ್ಲ್ಯೂದ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 576.6 bhp ಗರಿಷ್ಠ ಪವರ್ ಹಾಗೂ 900 Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಕಾರು, ಫುಲ್ ಚಾರ್ಜ್ ನಲ್ಲಿ 520 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಕೆಲವೇ 4.5 ಸೆಕೆಂಡುಗಳಲ್ಲಿ 100 km/h ವೇಗವನ್ನು ಪಡೆಯಲಿದೆ. ಸ್ಪೆಕ್ಟರ್ ಸುತ್ತಳತೆ ಬಗ್ಗೆ ಹೇಳುವುದಾದರೆ, 5,453 ಎಂಎಂ ಉದ್ದ, 2,080 ಎಂಎಂ ಅಗಲ ಮತ್ತು 1,559 ಎಂಎಂ ಎತ್ತರವನ್ನು ಹೊಂದಿದೆ. 3,210 ಎಂಎಂ ಉದ್ದವಾದ ವೀಲ್‌ಬೇಸ್ ಅನ್ನು ಒಳಗೊಂಡಿದೆ.

ಇನ್ನು, ಭಾರತದ ಮೊದಲ ರೂ.10 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ವಿತರಣೆ ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಷಾಂ ಯುವರಾಜ್ ಪಾತ್ರವಾಗಿದ್ದಾರೆ. ಮುಂದೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಯಾರೆಲ್ಲ ಖರೀದಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ನಿಮಗೆ ಗೊತ್ತಿರಲಿ.. ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ ಕೂಡ ಈ ಕಾರನ್ನು ಹೊಂದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications