ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಭಾರತದಲ್ಲಿ ಬೈಕ್ ಕಳ್ಳತನ ಹೆಚ್ಕು ನಡೆಯುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಚೆನ್ನೈ ಹಾಗೂ ಅದರ ಉಪನಗರಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಬೈಕ್ ಕಳುವಾಗುವುದನ್ನು ತಡೆಯಲು ಪೊಲೀಸರು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಆದರೆ ಬೈಕ್‌ಗಳ್ಳರು ಹೊಸ ಹೊಸ ಟೆಕ್ನಾಲಜಿಗಳನ್ನು ಬಳಸಿ ಬೈಕ್‌ಗಳುವು ಮಾಡುತ್ತಿದ್ದಾರೆ. ಚೆನ್ನೈ ಪೊಲೀಸರು ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ಒಟ್ಟು 13 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಅವಡಿಯಲ್ಲಿನ ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಕಳುವಾಗುತ್ತಿರುವ ಬಗ್ಗೆ ಅನೇಕ ದೂರುಗಳು ದಾಖಲಾಗಿದ್ದವು. ಪ್ರಕರಣವನ್ನು ಭೇದಿಸಲು ಪೊಲೀಸರು ವಿಶೇಷ ಘಟಕವನ್ನು ಸ್ಥಾಪಿಸಿ ತನಿಖೆ ನಡೆಸುತ್ತಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಪೊಲೀಸರು ಜೂನ್ 14ರಂದು ಅವಡಿ ಬಳಿಯ ಕರುಣಾಗರಾಚೆರಿ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಬೈಕ್ ಸವಾರನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅವನು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಿದ್ದ ಕಾರಣಕ್ಕೆ ಪೊಲೀಸರಿಗೆ ಅನುಮಾನ ಬಂದು ತೀವ್ರ ತಪಾಸನೆಗೆ ಒಳಪಡಿಸಿದ್ದಾರೆ.

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಆತ ಸವಾರಿ ಮಾಡುತ್ತಿದ್ದ ಬೈಕಿಗೆ ಯಾವುದೇ ದಾಖಲೆಗಳಿರಲಿಲ್ಲ. ಅವನು ತನ್ನನ್ನು ಪತ್ರಕರ್ತನೆಂದು ಹೇಳಿಕೊಂಡಿದ್ದಾನೆ. ಗುರುತಿನ ಚೀಟಿಯನ್ನು ಸಹ ತೋರಿಸಿದ್ದಾನೆ. ಇದು ನಕಲಿ ಗುರುತಿನ ಚೀಟಿ ಎಂದು ಪೊಲೀಸರಿಗೆ ಕಂಡು ಬಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ನಂತರ ಆತನನ್ನು ಪಟ್ಟಾಬ್ರಾಮ್ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ. ಪೊಲೀಸರ ವಿಚಾರಣೆಯಲ್ಲಿ ಆತನ ಹೆಸರು ವಿಕ್ಟರ್ ಅಲಿಯಾಸ್ ನರೇಶ್ ಎಂದು ತಿಳಿದುಬಂದಿದೆ. 38 ವರ್ಷದ ನರೇಶ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅವನು ತಿರುವಳ್ಳೂರು ಬಳಿಯ ಪುಲ್ಲರಂಪಕ್ಕಂ ಗ್ರಾಮಕ್ಕೆ ಸೇರಿದವನು.

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಕಳೆದ ಎರಡು ವರ್ಷಗಳಿಂದ ಆತ ತನ್ನ ಹೆಂಡತಿ, ಮಕ್ಕಳೊಂದಿಗೆ ಪಟ್ಟಾಬ್ರಾಮ್‌ನ ನವಜೀವನ್ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ನರೇಶ್ ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ತಿರುವಳ್ಳೂರು, ತಿರುಣಿನೂರು, ಪಟ್ಟಾಬ್ರಾಮ್, ತಿರುಮುಲ್ಲೈವಯಾಲ್ ಹಾಗೂ ಅಂಬತ್ತೂರುಗಳಲ್ಲಿ ಒಟ್ಟು 13 ಬೈಕ್‌ಗಳನ್ನು ಕದ್ದಿದ್ದಾನೆ. 13 ಬೈಕ್‌ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರೇಶ್‌ನನ್ನು ಪೊಲೀಸರು ಬಂಧಿಸಿರುವ ಬಗ್ಗೆ ದಿನಕರನ್ ಪತ್ರಿಕೆ ವರದಿ ಮಾಡಿದೆ.

ಕೊನೆಗೂ ಬಲೆಗೆ ಬಿದ್ದ ಖತರ್‌ನಾಕ್ ಬೈಕ್ ಕಳ್ಳ

ಹೆಚ್ಚಿನ ಬೈಕ್‌ಗಳು ಅಸುರಕ್ಷಿತ ಪ್ರದೇಶದಲ್ಲಿ ನಿಲ್ಲಿಸಿದಾಗ ಕಳುವಾಗುತ್ತಿವೆ. ಆದ್ದರಿಂದ ಸಾಧ್ಯವಾದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವುದು ಒಳ್ಳೆಯದು. ಕೆಲವರು ಕೀಗಳನ್ನು ಮರೆತು ಬೈಕಿನಲ್ಲಿ ಬಿಡುತ್ತಾರೆ. ಮರೆಯದೇ ಕೀಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Article Published On: Tuesday, June 16, 2020, 15:35 [IST]
English summary
Chennai Police arrested bike thief 13 vehicles seized. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+