ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಜನಪ್ರಿಯವಾಗಿವೆ. ಅದರಲ್ಲೂ ರಾಯಲ್ ಎನ್‌ಫೀಲ್ಡ್‌ನ ಬುಲೆಟ್ ಬೈಕ್ ಹೆಚ್ಕಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ತಮಿಳುನಾಡಿನಲ್ಲಿ ಬುಲೆಟ್ ಬೈಕುಗಳನ್ನು ಕದಿಯುತ್ತಿದ್ದ 3 ಜನರ ಗ್ಯಾಂಗ್ ಈಗ ಸಿಕ್ಕಿಬಿದ್ದಿದೆ. ಚೆನ್ನೈನ ಎಗ್ಮೋರ್ ನಿವಾಸಿ ಕುಮಾರವೆಲ್ ಅವರ ಬುಲೆಟ್ ಬೈಕ್ ಅನ್ನು ಸೆಪ್ಟೆಂಬರ್ 6ರಂದು ಕಳುವು ಮಾಡಲಾಗಿತ್ತು. ಅವರು ಎಗ್ಮೋರ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಕುಮಾರವೆಲ್ ಅವರ ಬೈಕ್ ಮಾತ್ರವಲ್ಲದೇ ಚೆನ್ನೈನ ವಿವಿಧ ಪ್ರದೇಶಗಳಲ್ಲಿ ಮನೆಯ ಹೊರಗೆ ನಿಲ್ಲಿಸಿದ್ದ ಬುಲೆಟ್ ಬೈಕುಗಳನ್ನು ರಾತ್ರಿ ವೇಳೆಯಲ್ಲಿ ಕಳುವು ಮಾಡಲಾಗುತ್ತಿತ್ತು. ಈ ಬಗ್ಗೆ ನುಂಗಂಬಾಕ್ಕಂ, ಚೆಟ್ಟುಪಟ್ಟು, ಅಬಿರಾಮಪುರಂ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಈ ಕಳ್ಳರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯನ್ನಾರಂಭಿಸಿದ ಪೊಲೀಸರು ಅಕ್ಟೋಬರ್ 3ರಂದು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ ಬುಲೆಟ್ ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ಅನುಮಾನದ ಮೇಲೆ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಆ ವ್ಯಕ್ತಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ್ದಾನೆ. ಪೊಲೀಸರಿಗೆ ಆತನ ಮೇಲೆ ಅನುಮಾನ ಹೆಚ್ಚಾಗಿ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಆ ವ್ಯಕ್ತಿ ತಂಜಾವೂರಿನ 27 ವರ್ಷದ ಸಫಿ ಎಂದು ತಿಳಿದುಬಂದಿದೆ. ಜೊತೆಗೆ ಆತ ಬೈಕ್ ಕಳ್ಳತನದ ತಂಡದ ಸದಸ್ಯನೆಂದು ಕಂಡು ಬಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಸಫಿ ಕದ್ದ ಬುಲೆಟ್ ಚಾಲನೆ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಸಫಿ ತನ್ನ ಸಹಚರರೊಂದಿಗೆ ಸೇರಿ ಚೆನ್ನೈನ ವಿವಿಧ ಭಾಗಗಳಿಂದ 65ಕ್ಕೂ ಹೆಚ್ಚು ಬುಲೆಟ್ ಬೈಕುಗಳನ್ನು ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕೇರಳದ ಸಿಬಿ (23) ಹಾಗೂ ವಿರುಧುನಗರದ ಅಮೀರ್ಜನ್ (36)ರನ್ನು ಬಂಧಿಸಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಈ ಮೂವರು ಚೆನ್ನೈನಲ್ಲಿ ಬುಲೆಟ್ ಬೈಕುಗಳನ್ನು ಕದ್ದು ತಮಿಳುನಾಡಿನ ವಿವಿಧೆಡೆ ಮಾರಾಟ ಮಾಡಿದ್ದಾರೆ. ಈ ಮೂವರು ಕದ್ದ ಬುಲೆಟ್ ಬೈಕ್‌ಗಳನ್ನು ಮಾರಾಟ ಮಾಡಲು ವಾಟ್ಸಾಪ್‌ನಲ್ಲಿ ಗ್ರೂಪ್ ರಚಿಸಿದ್ದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಈ ಗ್ರೂಪ್ ನಲ್ಲಿದ್ದ ಕೆಲವರು ಬುಲೆಟ್ ಬೈಕ್‌ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂವರು ಚೆನ್ನೈನಲ್ಲಿ ಬುಲೆಟ್ ಬೈಕುಗಳನ್ನು ಮಾತ್ರ ಕಳುವು ಮಾಡಿದ್ದಾರೆ. ಈ ಮೂವರು ಕಳೆದ ಒಂದು ವರ್ಷದಿಂದ ಚೆನ್ನೈನಲ್ಲಿ ಬುಲೆಟ್ ಬೈಕುಗಳನ್ನು ಮಾತ್ರ ಕದಿಯುತ್ತಿದ್ದರು ಎಂದು ತಿಳಿದು ಬಂದಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಈ ಖದೀಮರಿಂದ 7 ಬುಲೆಟ್ ಬೈಕ್ ಸೇರಿದಂತೆ 10 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ದುಬಾರಿ ಬೆಲೆಯ ಬುಲೆಟ್ ಬೈಕ್‌ಗಳು ಮಾತ್ರ ಕಳುವಾಗುತ್ತಿದ್ದ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಬೈಕುಗಳು ಕಳುವಾಗದಂತೆ ಆದಷ್ಟು ಸುರಕ್ಷಿತವಾಗಿ ನೋಡಿಕೊಳ್ಳುವುದು ಒಳ್ಳೆಯದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಬೈಕುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಬೈಕುಗಳಲ್ಲಿ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿದರೆ ಕ್ಷೇಮ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವಾಗ ಸಾಧ್ಯವಾದಷ್ಟು ಜಾಗರೂಕರಾಗಿರಬೇಕು. ಖದೀಮರು ಕದ್ದ ವಾಹನಗಳನ್ನು ಮಾರಾಟ ಮಾಡುವ ಸಾಧ್ಯತೆಗಳಿರುತ್ತವೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೇ ಈ ಖದೀಮರ ಟಾರ್ಗೆಟ್

ಕದ್ದ ವಾಹನಗಳನ್ನು ಖರೀದಿಸಿದರೆ, ನಂತರದ ದಿನಗಳಲ್ಲಿ ತೊಂದರೆಗೆ ಸಿಲುಕುವುದು ಖಚಿತ. ಕೆಲವು ಕಡಿಮೆ ಬೆಲೆಯೆಂಬ ಕಾರಣಕ್ಕೆ ಕದ್ದ ವಾಹನಗಳನ್ನು ಖರೀದಿಸಿ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಬಗ್ಗೆ ಪುಥಿಯಾತಲೈಮುರೈ ವರದಿ ಮಾಡಿದೆ.

Most Read Articles

Kannada
English summary
Chennai police arrests bike theft gang and seizes 10 two wheelers. Read in Kannada.
Story first published: Monday, October 5, 2020, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X